ಸಕ್ಕರೆ ಕಾಯಿಲೆಯ ವಿಚಾರದಲ್ಲಿ ನಿರ್ಲಕ್ಷತನ ಒಳ್ಳೆಯದಲ್ಲ. ಪ್ರತಿಯೊಂದು ಆಯಾಮ ದಲ್ಲೂ ಸಹ ಆಲೋಚನೆ ಮಾಡಬೇಕು. ತಿನ್ನುವ ಆಹಾರ ಪದ್ಧತಿ ಕೂಡ ಸರಿ ಇರಬೇಕು ಎಂದು ವೈದ್ಯರು ಹೇಳುತ್ತಾರೆ
ನಮಗೆಲ್ಲಾ ಗೊತ್ತೇ ಇರುವ ಹಾಗೆ ಮೊಸರಿನಲ್ಲಿ ದೇಹದ ಜೀರ್ಣಾಂಗ ವ್ಯವಸ್ಥೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು, ಬೇಕಾಗುವ ಒಳ್ಳೆಯ ಆರೋಗ್ಯಕಾರಿ ಗುಣ ಲಕ್ಷಣಗಳು ಕಂಡು ಬರುತ್ತವೆ. ಜೊತೆಗೆ ಹೊಟ್ಟೆ ಉಬ್ಬರದ, ಅಜೀರ್ಣ, ಗ್ಯಾಸ್ಟ್ರಿಕ್ನಂತಹ ಸಮಸ್ಯೆಗಳನ್ನು ಕೂಡ ದೂರ ಮಾಡುವಲ್ಲಿ ಕೆಲಸ ಮಾಡುತ್ತದೆ.
ಮೊಸರು ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸುತ್ತದೆ. ಹಾಗೇ, ತೂಕವನ್ನು ಕೂಡ ಹೆಚ್ಚಿಸಬಹುದು ಮತ್ತು ಚಯಾಪಚಯವನ್ನು ನಿಧಾನಗೊಳಿಸಬಹುದು. ಆಯುರ್ವೇದ ತಜ್ಞರ ಪ್ರಕಾರ ಮೊಸರು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಮೊಸರು ನಾವೆಲ್ಲರೂ ಅಂದುಕೊಂಡಂತೆ ತಂಪಾದ ಪದಾರ್ಥವಲ್ಲ. ಅದು ಬಿಸಿ ಪ್ರಕೃತಿಯನ್ನು ಹೊಂದಿರುತ್ತದೆ. ಮೊಸರನ್ನು ಜೀರ್ಣಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಇದು ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸುತ್ತದೆ. ಕಫ ಹೆಚ್ಚಾದಾಗ, ನೀವು ಹೆಚ್ಚು ತೂಕವನ್ನು ಪಡೆಯುತ್ತೀರಿ. ಆದ್ದರಿಂದ, ಮಧುಮೇಹ, ಸ್ಥೂಲಕಾಯತೆ, ಕೊಲೆಸ್ಟ್ರಾಲ್ ಇರುವವರು ಮೊಸರನ್ನು ಅವಾಯ್ಡ್ ಮಾಡುವುದು ಉತ್ತಮ. ಮೊಸರಿನ ಬದಲಿಗೆ, ಹೆಚ್ಚು ನೀರಿನಿಂದ ತಯಾರಿಸಿದ ಮಜ್ಜಿಗೆ ಸೇವಿಸಬಹುದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಬಿಳಿ ಉಪ್ಪು ನೇರವಾಗಿ ಸಕ್ಕರೆಯ ಮಟ್ಟದ ಏರಿಕೆಗೆ ಕಾರಣವಾಗದಿದ್ದರೂ ಮಧುಮೇಹ ಇರುವವರಲ್ಲಿ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಬಹುದು. ಇದು ಹೃದಯದ ತೊಂದರೆಗಳು, ಮೂತ್ರಪಿಂಡದ ಕಾಯಿಲೆ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಮಧುಮೇಹ ಹೊಂದಿರುವ ಜನರು ಅಧಿಕ ರಕ್ತದೊತ್ತಡದಿಂದ ಪ್ರಭಾವಿತರಾಗುವ ಸಾಧ್ಯತೆಯಿದೆ. ಇದು ಹೃದ್ರೋಗ, ಪಾರ್ಶ್ವವಾಯು, ಮೂತ್ರಪಿಂಡ ಕಾಯಿಲೆ ಮತ್ತು ಇತರ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಉಪ್ಪು ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೂ ಬಿಳಿ ಉಪ್ಪಿನ ಬದಲು ಕಲ್ಲು ಉಪ್ಪು ಅಥವಾ ಹಿಮಾಲಯನ್ ಗುಲಾಬಿ ಉಪ್ಪು ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಇತರ ಮಧುಮೇಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಮಧುಮೇಹಿಗಳಿಗೆ ಸಕ್ಕರೆಗೆ ಹೋಲಿಸಿದರೆ ಬೆಲ್ಲವನ್ನು ಸುರಕ್ಷಿತ ಪರ್ಯಾಯವೆಂದು ಪರಿಗಣಿಸಲಾಗಿದೆಯಾದರೂ ಇದು ಕೂಡ ಸಕ್ಕರೆಯ ಮಟ್ಟದ ಏರಿಕೆಗೆ ಕಾರಣವಾಗಬಹುದು. ಮಧುಮೇಹಿಗಳು ಆದಷ್ಟೂ ಸಕ್ಕರೆಯ ಸೆವನೆಯನ್ನು ತಪ್ಪಿಸಬೇಕು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸುವುದರಿಂದ ಸಕ್ಕರೆಯ ಮಟ್ಟದ ಏರಿಕೆಯಾಗಿ ಸಮಸ್ಯೆ ಉಂಟಾಗಬಹುದು. ಬೆಲ್ಲವನ್ನು ರಾಸಾಯನಿಕಗಳಿಲ್ಲದೆ ನೈಸರ್ಗಿಕ ಪ್ರಕ್ರಿಯೆಯಿಂದ ತಯಾರಿಸುವುದರಿಂದ ಇದು ಪೌಷ್ಠಿಕಾಂಶದಿಂದ ಸಮೃದ್ಧವಾಗಿದೆ. ಆದರೆ, ಅದನ್ನು ಮಿತವಾಗಿ ಸೇವಿಸುವುದು ಉತ್ತಮ.