ನಾವು ತಿನ್ನುವ ತಿಂಡಿ ಅಥವಾ ಊಟದ ಮೇಲೆ ನಮಗೆ ಗಮನ ಇರುವುದಿಲ್ಲ. ಹಾಗಾಗಿ ಊಟದ ನಿಜವಾದ ಸ್ವಾದವನ್ನು ನಾವು ಅನುಭವಿಸಲು ಸಾಧ್ಯವಾಗುತ್ತಿಲ್ಲ. ತೃಪ್ತಿಕರವಾಗಿ ಊಟ ಮಾಡಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ದಿನೇ ದಿನೇ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಜೊತೆಗೆ ದೇಹದ ತೂಕ ಹಾಗೂ ಬೊಜ್ಜು ಕೂಡ ಹೆಚ್ಚಾಗಿದೆ. ಟಿವಿ ನೋಡುತ್ತಾ ಕುಳಿತು ತಿನ್ನುವುದರಿಂದ ಆಗುವ ಕೆಲವು ಅವಾಂತರಗಳ ಬಗ್ಗೆ ನೋಡೋಣ ಬನ್ನಿ.
ಹೆಚ್ಚು ತಿಂದುಬಿಡುತ್ತೀರಿ!
- ಊಟ ಮಾಡುವ ಸಂದರ್ಭದಲ್ಲಿ ಯಾರು ಟಿವಿ ನೋಡುತ್ತಾರೆ, ಅವರ ಗಮನ ಏನಿದ್ದರೂ ಟಿವಿ ಕಡೆಗೆ ಹೆಚ್ಚಾಗಿರುತ್ತದೆ. ಹಾಗಾಗಿ ತಟ್ಟೆಯಲ್ಲಿ ಎಷ್ಟು ಪ್ರಮಾಣದ ಆಹಾರವಿದೆ ಮತ್ತು ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬುದರ ಅರಿವು ಸ್ವಲ್ಪವೂ ಇರುವುದಿಲ್ಲ.
- ಈ ಸಂದರ್ಭದಲ್ಲಿ ನಮ್ಮ ದೇಹಕ್ಕೆ ಅತಿಯಾದ ಕ್ಯಾಲೋರಿಗಳು ಸೇರಿಬಿಡುತ್ತವೆ. ಪ್ರತಿ ಬಾರಿ ಹೀಗೆ ಮುಂದುವರೆದರೆ ನಮ್ಮದೇಹದ ತೂಕ ಬಹಳ ಬೇಗನೆ ಹೆಚ್ಚಾಗುತ್ತದೆ.
ಜಂಕ್ ಫುಡ್ ಸೇವನೆ
- ಟಿವಿಯಲ್ಲಿ ಅಪ್ಪಿತಪ್ಪಿ ಕ್ರಿಕೆಟ್ ಮ್ಯಾಚ್ ಅಥವಾ ಇಷ್ಟವಾದ ಯಾವುದಾದರೂ ಮೂವಿ ಬಂದರೆ ಮುಗಿಯಿತು, ಕೈಯಲ್ಲಿ ಕಾರ್ಬೋನೇಟೆಡ್ ಪಾನೀಯ ಮತ್ತುಚಿಪ್ಸ್ ಹಿಡಿದು ಕುಳಿತು ಬಿಡುತ್ತೇವೆ.
- ಹೀಗಾಗಿ ಟಿವಿ ನೋಡುತ್ತಾ ಕುಳಿತರೆ ಅನಾರೋಗ್ಯಕರ ಆಹಾರ ಗಳನ್ನು ಸಹ ಲೆಕ್ಕಿಸದೆ ತಿಂದು ಬಿಡುತ್ತೇವೆ ಅದು ಕೂಡ ಎಷ್ಟು ತಿನ್ನುತ್ತಿದ್ದೇವೆ ಎಂಬುದರ ಅರಿವಿಲ್ಲದೆ!
- ಇದರಿಂದ ನಮ್ಮ ಆರೋಗ್ಯ ಎಷ್ಟು ಹಾಳಾಗುತ್ತದೆ ಎಂಬುದನ್ನು ನಾವೇ ಒಮ್ಮೆ ಆಲೋಚಿಸಿ ನೋಡಬೇಕು.
ಟಿವಿ ಮುಂದೆ ಕುಳಿತು ತಿನ್ನುವುದರಿಂದ
- ಹೆಚ್ಚು ಹೊತ್ತು ಟಿವಿ ಮುಂದೆ ಕುಳಿತು ತಿನ್ನುವುದರಿಂದ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ಇದರಿಂದಸೊಂಟದ ಭಾಗದಲ್ಲಿ ಕೊಬ್ಬು ಹೆಚ್ಚು ಶೇಖರಣೆ ಆಗುತ್ತದೆ.
- ಹಾಗಾಗಿ ಹೆಚ್ಚು ಕಾಲ ಟಿವಿ ಮುಂದೆ ಕುಳಿತು ನಿಧಾನವಾಗಿ ಆಹಾರ ಸೇವನೆ ಮಾಡುವ ಅಭ್ಯಾಸವನ್ನು ಮೊದಲು ಬಿಡಬೇಕು.
ದೇಹದ ಬೊಜ್ಜು ಹೆಚ್ಚಾಗುತ್ತದೆ
ಆಹಾರದ ವಿಚಾರವಾಗಿ ಹಲವಾರು ಅಧ್ಯಯನಗಳು ಹೇಳುವ ಹಾಗೆ ಟಿವಿ ನೋಡುತ್ತಾ ತಿನ್ನುವವರಿಗೆ ಬಹಳ ಬೇಗನೆ ದೇಹದಲ್ಲಿ ಬೊಜ್ಜು ಬರುತ್ತದೆ. ಅದರಲ್ಲೂ ಮಕ್ಕಳಿಗೆ ಈ ಒಂದು ಅಭ್ಯಾಸದಿಂದ ತೊಂದರೆ ಜಾಸ್ತಿ ಎಂದು ಹೇಳಲಾಗುತ್ತದೆ.
ಊಟ ಮಾಡಿದ ತೃಪ್ತಿ ಸಿಗುವುದಿಲ್ಲ
- ಟಿವಿ ಮುಂದೆ ಕುಳಿತು ಊಟ ಮಾಡುವ ಅಭ್ಯಾಸ ಇದ್ದವರಿಗೆ ಮೊದಲೇ ಹೇಳಿದಂತೆ ಊಟದ ಮೇಲೆ ಗಮನ ಇರುವುದಿಲ್ಲ.
- ಹೀಗಾಗಿ ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ತಿಂದಿದ್ದೇವೆ ಎಂಬುದರ ತೃಪ್ತಿ ಇರುವುದಿಲ್ಲ ಎನ್ನುವುದು ಆಹಾರ ತಜ್ಞರ ಮಾತು.
- ಹೆಚ್ಚಿನ ಪ್ರಮಾಣದಲ್ಲಿ ತಿಂದರೂ ಆಹಾರ ಸೇವಿಸಿದ ಬಗ್ಗೆ ತೃಪ್ತಿಕರ ಭಾವನೆ ಹೊಂದಲು ಸಾಧ್ಯವಾಗುವುದಿಲ್ಲ.
- ಇದರಿಂದ ಕೆಲವರಿಗೆ ಪದೇ ಪದೇ ಹೊಟ್ಟೆ ಹಸಿವು ಉಂಟಾ ಗುತ್ತದೆ. ಮತ್ತೆ ಬೇರೆ ಬೇರೆ ಬಗೆಯ ಆಹಾರಗಳನ್ನು ತಿನ್ನುತ್ತಾರೆ ಮತ್ತು ತೂಕ ಹೆಚ್ಚು ಮಾಡಿಕೊಳ್ಳತ್ತಾರೆ.