ಭಾರತದಲ್ಲಿಆಧಾರ್ ಕಾರ್ಡ್ ಅತ್ಯಂತ ಪ್ರಮುಖ ಗುರುತು ಹಾಗೂ ವಿಳಾಸ ದೃಢೀಕರಣ ದಾಖಲೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ 12 ಸಂಖ್ಯೆಗಳ ಆಧಾರ್ ಕಾರ್ಡ್ ವಿತರಣೆಯ ಜವಾಬ್ದಾರಿ ಹೊತ್ತಿದೆ. ಇನ್ಯುರೆನ್ಸ್ ಪಾಲಿಸಿಗಳು, ಬ್ಯಾಂಕ್ ಖಾತೆಗಳು, ವಾಹನಗಳು ಹಾಗೂ ಇತರ ಅನೇಕ ಸೇವೆಗಳಿಗೆ ಇಂದು ಆಧಾರ್ ಲಿಂಕ್ ಮಾಡೋದು ಕಡ್ಡಾಯ.
ಹೀಗಾಗಿ ಸರ್ಕಾರಕ್ಕೆ ಸಂಬಂಧಿಸಿದ ಯೋಜನೆಗಳು ಹಾಗೂ ಹಣಕಾಸು ಸೇವೆಗಳಿಗೆ ಆಧಾರ್ ಬೇಕೇಬೇಕು. ಇದ್ರಲ್ಲಿ ವ್ಯಕ್ತಿಯ ಹೆಸರು, ಲಿಂಗ, ಜನ್ಮದಿನಾಂಕ, ಫೋಟೊ ಹಾಗೂ ವಿಳಾಸದ ಮಾಹಿತಿಯಿರುತ್ತದೆ. ವೆಬ್ಸೈಟ್ಗೆ ಭೇಟಿ ನೀಡಿ ನೀವು ನಿಮ್ಮ ಆಧಾರ್ ಕಾರ್ಡ್ ಮಾಹಿತಿಗಳನ್ನು ಪರಿಶೀಲಿಸೋ ಜೊತೆ ತಿದ್ದುಪಡಿ ಕೂಡ ಮಾಡಬಹುದು.
ತಿದ್ದುಪಡಿ ಮಾಡೋದು ಎಲ್ಲಿ?
ಹಾಗೂ ವೆಬ್ಸೈಟ್ಗಳಲ್ಲಿನೀವು ಆಧಾರ್ ಮಾಹಿತಿಗಳನ್ನು ಪರಿಶೀಲಿಸಬಹುದು. ಕಚೇರಿ, ಹೋಟೆಲ್ ಹೀಗೆ ಪ್ರತಿ ಸ್ಥಳದಲ್ಲೂ ಇಂದು ಆಧಾರ್ ಕಾರ್ಡ್ ಕೇಳಿಯೇ ಕೇಳುತ್ತಾರೆ. ಹೀಗಾಗಿ ನಿಮ್ಮ ಅಧಾರ್ ಕಾರ್ಡ್ನಲ್ಲಿ ಎಲ್ಲ ಮಾಹಿತಿಗಳು ಸರಿಯಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸೋ ಜೊತೆ ಮಾಹಿತಿ ಸೇರಿಸೋ ಹಾಗೂ ತಿದ್ದುಪಡಿ ಮಾಡೋ ಕೆಲಸವನ್ನು ಕೂಡ ಮಾಡಬೇಕು.
ವೆಬ್ಸೈಟ್ನಲ್ಲಿ ಆಧಾರ್ ಕಾರ್ಡ್ನಲ್ಲಿ ಹೆಸರು, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಇಂಟರ್ನೆಟ್ ಅಥವಾ ವೆಬ್ಸೈಟ್ ಬಳಕೆ ಗೊತ್ತಿಲ್ಲದವರು ಆಧಾರ್ ಕಾರ್ಡ್ ಹೊಂದಿರೋರು ಸಮೀಪದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಡ್ನಲ್ಲಿರೋ ಮಾಹಿತಿಗಳನ್ನು ಬದಲಾಯಿಸಬಹುದು.
ವಿಳಾಸ ಅಪ್ಡೇಟ್ ಮಾಡೋದು ಹೇಗೆ
ಹಂತ 1:https://uidai.gov.in ವೆಬ್ಸೈಟ್ಗೆ ಭೇಟಿ ನೀಡಿ.
ಹಂತ 3: ನಿಮಗೆ ವಿಳಾಸ ಬದಲಾಯಿಸಬೇಕಿದ್ರೆ ’ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 4: ಆ ಬಳಿಕ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ.
ಹಂತ 5:ಕೆಳಭಾಗದಲ್ಲಿರೋ ಮೆನುವಿನಿಂದ ಆಯ್ಕೆ ಮಾಡಿ.
ಹಂತ 6: ಇಲ್ಲಿ ನೀವು ವಿಳಾಸವನ್ನು ತಕ್ಷಣ ಬದಲಾಯಿಸಬಹುದು.