ಮಲಗಿದ ತಕ್ಷಣವೇ ಉತ್ತಮ ನಿದ್ರೆ ಬರಬೇಕಾದರೆ ಈ ಕೆಳಗೆ ನೀಡಿರುವ ಕೆಲವು ಸರಳ ಟಿಪ್ಸ್ಗಳನ್ನು ಫಾಲೋ ಮಾಡಿ..
ರಾತ್ರಿ ಊಟ ಮಿಸ್ ಮಾಡ್ಬೇಡಿ: ರಾತ್ರಿಯ ಊಟವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡ್ಬೇಡಿ, ಒಂದು ವೇಳೆ ರಾತ್ರಿ ಊಟ ಮಾಡದೆ ಮಲಗಿದರೆ ನಿದ್ದೆ ಬರುವುದಿಲ್ಲ.
ಹಾಗಂತ ಹೇಗಬೇಕೋ ಹಾಗೆ ಊಟ ಮಾಡಬಾರದು, ಊಟ ಮಿತವಾಗಿ, ಸಮತೋಲನದಿಂದ ಕೂಡಿರಬೇಕು. ಸುಲಭವಾಗಿ ಜೀರ್ಣಿಸಿಕೊಳ್ಳುವಂತೆ ಇರಬೇಕು.
ಮಲಗುವ ಮುನ್ನ ಮಾಂಸದೂಟ ಸೇವಿಸಬೇಡಿ: ಮಾಂಸದಲ್ಲಿ ಪ್ರೋಟಿನ್ಗಳು ಸಮೃದ್ಧವಾಗಿರುತ್ತವೆ. ಆದ್ದರಿಂದ ರಾತ್ರಿ ಊಟಕ್ಕೆ ಮಾಂಸ ಸೇವಿಸಿದರೆ ಅರ್ಜೀಣದಿಂದಾಗಿ ನಿದ್ರೆ ಬಾರದಿರಬಹುದು. ರಾತ್ರಿ ಮಲಗುವ ಮುನ್ನ ಮಾಂಸ ಸೇವಿಸಬೇಡಿ.
ಮದ್ಯ, ಧೂಮಪಾನ ಮಾಡಬೇಡಿ: ಆಲ್ಕೋಹಾಲ್ ಎರಡು ಹಂತದಲ್ಲಿ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲ ವರದಿಗಳ ಪ್ರಕಾರ ಮದ್ಯ ಸೇವಿಸಿದ ತಕ್ಷಣ ನಿದ್ರೆ ಬರುತ್ತದೆ. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಸಮಸ್ಯೆಗಳನ್ನು ಉಂಟಾಗುವ ಸಾಧ್ಯತೆ ಇದೆ.
ಟೀ, ಕಾಫಿ ಸೇವಿಸಬೇಡಿ: ಮಲಗುವ ಮುನ್ನ ಯಾವುದೇ ಕಾರಣಕ್ಕೂ ಟೀ, ಕಾಫಿ ಕುಡಿಯಬೇಡಿ. ಇದರಿಂದ ಬರುವ ನಿದ್ದೆಯೂ ದೂರವಾಗುತ್ತದೆ
ಮಲಗುವ ಹಾಸಿಗೆ ಚೆನ್ನಾಗಿರಲಿ: ಒಳ್ಳೆಯ ನಿದ್ರೆ ಬರಬೇಕಾದರೆ ಮಲಗುವ ಹಾಸಿಗೆ ಚೆನ್ನಾಗಿರಬೇಕು. ಅಗತ್ಯಗಳಿಗೆ ತಕ್ಕಂತೆ ಆದ್ಯತೆಯ ಮೇರೆಗೆ ಉತ್ತಮ ಹಾಸಿಗೆ ಮತ್ತು ದಿಂಬು ಇದ್ದರೆ ಬೆನ್ನುಮೂಳೆ ನೋವು ಬರುವುದಿಲ್ಲ. ಆಗ ಬೇಗ ನಿದ್ದೆ ಮಾಡಬಹುದು.
ಅಗತ್ಯಕ್ಕಿಂತ ಹೆಚ್ಚಿನ ಬೆಳಕು ಬೇಡ: ಅತಿಯಾದ ಬೆಳಕು ಇದ್ದರೆ ಮಲಗಿದ ತಕ್ಷಣಕ್ಕೆ ನಿದ್ದೆ ಬರುವುದಿಲ್ಲ. ಹೀಗಾಗಿ ಲೈಟ್ ಆಫ್ ಮಾಡಿದರೆ ಬೇಗ ನಿದ್ದೆ ಬರುತ್ತೆ. ಬೆಳಕು ಇಲ್ಲದೇ ನಿದ್ರೆ ಬರಲ್ಲ ಎನ್ನುವವರಯ ಬೆಡ್ ಲ್ಯಾಂಪ್ ಬಳಸಬಹುದು. ಇದು ನಿಮ್ಮ ದೇಹದ ಮೆಲಟೋನಿನ್ ಉತ್ಪಾದನೆಗೆ ಸಹಕಾರಿಯಾಗುವ ಜೊತೆಗೆ ನಿದ್ರೆಯನ್ನು ಉತ್ತೇಜಿಸುತ್ತದೆ
ಅತಿಯಾದ ಬಿಸಿ/ ತಂಪು ಇರದಂತೆ ನೋಡಿಕೊಳ್ಳಿ: ನೀವು ಮಲಗುವ ಕೋಣೆ ಹೆಚ್ಚು ಬಿಸಿ ಅಥವಾ ತುಂಬಾ ಕೂಲ್ ಆಗಿಯೂ ಇಲ್ಲದಂತೆ ಸರಾಸರಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ತುಂಬಾ ಬಿಸಿ ಇದ್ದರೂ ನಿದ್ದೆ ಬರೋದಿಲ್ಲ, ವಾತಾವರಣ ತುಂಬಾ ತಣ್ಣಗಿದ್ದರೂ ನಿದ್ದೆ ಬರಲ್ಲ.