ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಜೀವಿತಾವಧಿಯು ತುಂಬಾ ಕಡಿಮೆಯಾಗಿದೆ. ಇದಕ್ಕೆ ಮಲಗೋ ಸಮಯ ಸಹ ಕಾರಣವಾಗ್ತಿದೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ತಡವಾಗಿ ಮಲಗುವ ಜನರು ಅನಾರೋಗ್ಯಕರ ಅಭ್ಯಾಸಗಳಿಂದ ಮೊದಲೇ ಸಾಯುತ್ತಾರೆ ಎಂದು ಅಧ್ಯಯನವು ಹೇಳುತ್ತದೆ.
ರಾತ್ರಿ ತಡವಾಗಿ ಮಲಗುವವರು ಅನಾರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಹೊಸ ಅಧ್ಯಯನದ ಪ್ರಕಾರ, ಬೇಗ ಏಳುವವರಿಗಿಂತ, ತಡವಾಗಿ ಮಲಗುವವರೇ ಮುಂಚೆ ಸಾಯಬಹುದು ಎಂದು ತಿಳಿಸಿದೆ. ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ರಾತ್ರಿ ಸಮಯಲ್ಲಿ ಸರಿಯಾಗಿ ನಿದ್ದೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅನಾರೋಗ್ಯಕಾರಿ ಸಮಸ್ಯೆಗಳು ಬರುವ ಅಪಾಯ ಹೆಚ್ಚಿರುತ್ತದೆಯಂತೆ.
ಉದಾಹರಣೆಗೆ ಹೇಳುವುದಾದರೆ, ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗುವುದು, ರಕ್ತದ ಒತ್ತಡದಲ್ಲಿ ಏರುಪೇರಾಗುವುದು, ಸಕ್ಕರೆಕಾಯಿಲೆ ನಿಯಂತ್ರಣ ತಪ್ಪುವುದು ಇಂತಹ ಸಮಸ್ಯೆಗಳು ಬರುವ ಅಪಾಯ ಹೆಚ್ಚಿರುತ್ತದೆಯಂತೆ. ಬನ್ನಿ ಇಂದಿನ ಲೇಖನದಲ್ಲಿ ಪುರುಷರು ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದರೆ ಏನೆಲ್ಲಾ ಅನಾರೋಗ್ಯ ಸಮಸ್ಯೆಗಳನ್ನು ಕಂಡು ಬರುವ ಸಾಧ್ಯತೆ ಇರುತ್ತದೆ ಎನ್ನುವುದನ್ನು ನೋಡೋಣ..
ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ
ನಿಮ್ಮ ದೇಹದ ತೂಕದ ವಿಷಯಕ್ಕೆ ಬಂದಾಗ ನೀವು ಚೆನ್ನಾಗಿ ಮಲಗಿದರೆ ನೀವು ತೂಕವನ್ನು ಕಳೆದುಕೊಳ್ಳಬಹುದು. ಅಸಮರ್ಪಕ ನಿದ್ರೆಯು ಹೆಚ್ಚಿದ ಹಸಿವು ಮತ್ತು ಹಸಿವು ಮತ್ತು ಸ್ಥೂಲಕಾಯಕ್ಕೆ ಸಂಬಂಧಿಸಿದೆ ಎಂದು ತೋರಿಸುತ್ತದೆ.
ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ
ಆಲೋಚಿಸುವ, ನೆನಪಿಟ್ಟುಕೊಳ್ಳುವ ಮತ್ತು ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ ನಿಮ್ಮ ಸಾಮರ್ಥ್ಯದ ಮೇಲೆ ಈ ನಿದ್ರೆಯ ಕೊರತೆ ಪರಿಣಾಮ ಬೀರುತ್ತದೆ. ನಿದ್ರೆಯು ಮೆದುಳಿನ ಸ್ವಯಂ-ಸಂಘಟನೆಗೆ ನಿರ್ಣಾಯಕವಾಗಿದೆ, ವಿಶೇಷವಾಗಿ ಅಲ್ಪಾವಧಿಯ ಸ್ಮರಣೆಯಿಂದ ದೀರ್ಘಕಾಲೀನ ಸ್ಮರಣೆಗೆ ಮಾಹಿತಿಯನ್ನು ವರ್ಗಾಯಿಸುವ ವಿಷಯಕ್ಕೆ ಬಂದಾಗ ಅಂತ ಹೇಳಬಹುದು. ಸಾಕಷ್ಟು ನಿದ್ರೆಯನ್ನು ಮಾಡುವುದರಿಂದ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ.
ನಿದ್ರೆಯ ಕೊರತೆ ನಿಮ್ಮ ಚರ್ಮವನ್ನು ಹಾಳು ಮಾಡುತ್ತದೆ
ಹೆಚ್ಚಿನ ಜನರಿಗೆ ನಿದ್ರೆಯಿಲ್ಲದೆ ಕೆಲವು ರಾತ್ರಿಗಳ ನಂತರ ಅವರ ಎರಡು ಕಣ್ಣುಗಳು ಊದಿಕೊಳ್ಳುವುದು ಮತ್ತು ಅವರ ಮುಖದ ಚರ್ಮವು ಮಸುಕಾಗುವುದು ಆಗುತ್ತದೆ. ಆದರೆ, ಕಾಲಾನಂತರದಲ್ಲಿ ನಿದ್ರೆಯ ಕೊರತೆಯು ಸೂಕ್ಷ್ಮ ಸುಕ್ಕುಗಳು, ಮಂದವಾದ ಚರ್ಮ ಮತ್ತು ಕಣ್ಣುಗಳ ಕೆಳಗೆ ಕಪ್ಪು ಕಲೆಗಳನ್ನು ಸಹ ಉಂಟು ಮಾಡಬಹುದು. ನಿದ್ರಾಹೀನತೆ ಉಂಟಾದಾಗ ನಿಮ್ಮ ದೇಹವು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ಹೆಚ್ಚಾಗಿ ಸ್ರವಿಸುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವ ಮತ್ತು ಮೃದುತ್ವವನ್ನು ಕಾಪಾಡಿಕೊಳ್ಳುವ ಪ್ರೋಟೀನ್, ಕೊಲಾಜಿನ್, ಹೆಚ್ಚು ಕಾರ್ಟಿಸೋಲ್ ಬೇಕಾಗುತ್ತದೆ.
ತಿಳುವಳಿಕೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ
ನಿದ್ರೆಯ ಕೊರತೆಯು ನಮ್ಮ ತಿಳುವಳಿಕೆಯ ಗುಣಮಟ್ಟದ ಮೇಲೆ ಮತ್ತು ವಿಷಯಗಳು ಮತ್ತು ಘಟನೆಗಳ ವಾಸ್ತವತೆಯ ಸ್ವೀಕಾರದ ಮೇಲೆ ಪರಿಣಾಮ ಬೀರಬಹುದು. ಇದರ ಪರಿಣಾಮವಾಗಿ, ಇದು ನಮ್ಮ ಪರಿಸರದಲ್ಲಿನ ಘಟನೆಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗದೇ ಇರುವುದರಿಂದ, ಉತ್ತಮ ನಿರ್ಣಯಗಳನ್ನು ಮಾಡುವ ನಮ್ಮ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ.
ಶಿಶ್ನ ನಿಮಿರುವಿಕೆ ಸಮಸ್ಯೆ
ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಹೆಚ್ಚು ಲೈಂಗಿಕ ಸಮಸ್ಯೆಗಳು ಕಂಡುಬರುತ್ತಿವೆ. ಅದರಲ್ಲೂ ಮಧ್ಯ ವಯಸ್ಸು ದಾಟಿದ ಪುರುಷರಲ್ಲಿ ಇಂತಹ ನಿಮಿರು ದೌರ್ಬಲ್ಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ ಎಂದು ಅಧ್ಯಾಯನದಲ್ಲಿ ತಿಳಿದುಬಂದಿದೆ.ಯಾಕೆ ಇಂತಹ ಸಮಸ್ಯೆಗಳು ಹೆಚ್ಚಾಗುತ್ತದೆ, ಎಂದು ಕಾರಣಗಳನ್ನು ನೋಡುವುದಾದರೆ, ಪುರುಷರು ದಿನನಿತ್ಯ ನಡೆಸುತ್ತಿರುವ ಜಡ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಸಂಶೋಧನೆಯ ಪ್ರಕಾರ, ನಿದ್ರೆ ಸರಿಯಾಗಿ ಮಾಡದೇ ಇರುವ ಪುರುಷರಲ್ಲಿ ಈ ಸಮಸ್ಯೆಗಳು ಜಾಸ್ತಿಯಾಗಿ ಕಂಡು ಬರುತ್ತದೆ ಎಂದು ಹೇಳಲಾಗಿದೆ.
ಮೂತ್ರನಾಳದ ಸೋಂಕು
ಮೂತ್ರನಾಳದ ಸೋಂಕು ಎಂದರೆ ಮೂತ್ರ ವ್ಯವಸ್ಥೆಯಲ್ಲಿ ಕಂಡು ಬರುವ ಒಂದು ಬಗೆಯ ಸೊಂಕು. ಸಾಮಾನ್ಯವಾಗಿ ಈ ಕಾಯಿಲೆ ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲಿಯೂ ಕೂಡ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕೆಲ್ಲಾ ಕಾರಣಗಳನ್ನು ನೋಡುವುದಾದರೆ ಸರಿಯಾಗಿ ನೀರು ಕುಡಿಯದೇ ಇರುವುದು, ಸಕ್ಕರೆ ಅಂಶ ಹೆಚ್ಚಿರುವ ಆಹಾರ ಹಾಗೂ ಪಾನೀಯಗಳ ಸೇವನೆ, ಅಸುರಕ್ಷಿತ ಲೈಂಗಿಕ ಕ್ರಿಯೆ, ಶುಚಿಯಿಲ್ಲದ ಸಾರ್ವಜನಿಕ ಶೌಚಾಲಯದ ಬಳಕೆಯಿಂದಾಗಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ.
ಫಲವತ್ತತೆ ಸಮಸ್ಯೆ
ಫಲವತ್ತತೆ ಸಮಸ್ಯೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಲ್ಲಿಯೂ ಕೂಡ ಕಂಡು ಬರುತ್ತದೆ. ಉದಾಹರಣೆಗೆ ಹೇಳಬೇಕೆಂದರೆ, ಮಹಿಳೆಯರಿಗೆ ಹೇಗೆ ದೇಹದೊಳಗೆ ಅಂಡಾಶಯಗಳು ಸರಿಯಾಗಿ ಬೆಳವಣಿಗೆ ಆಗದೇ ಬಂಜೆತನದ ಸಮಸ್ಯೆ ಕಾಣುತ್ತದೆಯೋ, ಅಂತೆಯೇ ಪುರುಷರಿಗೂ ಕೂಡ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿ ಅಥವಾ ಅವುಗಳ ಉತ್ಪತ್ತಿ ಇಲ್ಲದೆ ಹೋಗಿ ಫಲವತ್ತತೆ ಅಂದರೆ ಬಂಜೆತನದ ಸಮಸ್ಯೆ ಕಂಡು ಬರುವ ಎಲ್ಲಾ ಲಕ್ಷಣಗಳು ಹೆಚ್ಚಿರುತ್ತದೆ. ಇದಕ್ಕೆಲ್ಲಾ ಕಾರಣಗಳು ಏನು ಎನ್ನುವುದನ್ನು ಒಂದೇ ಮಾತಿನಲ್ಲಿ ಹೇಳುವು ದಾದರೆ ದಿನನಿತ್ಯ ಒತ್ತಡದ ಜೀವನಶೈಲಿ ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ರಾತ್ರಿ ಸರಿಯಾಗಿ ನಿದ್ರೆ ಇಲ್ಲದ ದಿನಗಳು ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ಹೇಳಬಹುದು.