ನೀವು ದಪ್ಪಗಿದ್ದು ತೂಕ ಇಳಿಸಿಕೊಳ್ಳಲು ಡಯೆಟ್ ಪ್ಲ್ಯಾನ್ ಮಾಡಿದ್ದರೆ ತಪ್ಪದೇ ಈ ಜ್ಯೂಸ್ ಗಳನ್ನು ಸಹ ಸೇರಿಸಿಕೊಳ್ಳಿ. ಹಣ್ಣುಗಳು ಹಾಗೂ ತರಕಾರಿ ಜ್ಯೂಸ್ ಪೋಷಕಾಂಶ ಸಿಗುವ ಜೊತೆಗೆ ತೂಕ ನಷ್ಟವನ್ನು ಉತ್ತೇಜಿಸಲು ತ್ವರಿತ ಮತ್ತು ಅನುಕೂಲಕರ ಮಾರ್ಗವಾಗುತ್ತದೆ.
ಕೆಲ ವಿಧದ ಜ್ಯೂಸ್ಗಳು ಸಕ್ಕರೆಯಲ್ಲಿ ಹೆಚ್ಚು ಮತ್ತು ಕಡಿಮೆ ಫೈಬರ್ ಅನ್ನು ಹೊಂದಿರುತ್ತವೆ, ಇದು ನಿಮ್ಮ ಕ್ಯಾಲೋರಿ ಸೇವನೆಯನ್ನು ಹೆಚ್ಚಿಸುತ್ತದೆ ಮತ್ತು ಕಾಲಾನಂತರದಲ್ಲಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅಂಗಡಿಗಳಲ್ಲಿ ಪ್ಯಾಕೆಟ್ ರೂಪದಲ್ಲಿ ಸಿಗುವ ಜ್ಯೂಸ್ ಗಳನ್ನು ಸೇವಿಸುವ ಬದಲು ಮನೆಯಲ್ಲಿ ಸುಲಭವಾಗ ಸಕ್ಕರೆ ಹಾಕದೆ ಮಾಡುವ ಫ್ರೆಶ್ ಜ್ಯೂಸ್ ಗಳು ನಿಮ್ಮ ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಆಗಿದೆ.
ಹಣ್ಣುಗಳಲ್ಲಿರುವ ಹೆಚ್ಚು ಫೈಬರ್ ನಿಮಗೆ ದೀರ್ಘಕಾಲದವರೆಗೂ ಹಸಿವಿನಿಂದ ದೂರವಿರಲು ಸಹಾಯ ಮಾಡುತ್ತದೆ. ಈ ಹಣ್ಣುಗಳು, ತರಕಾರಿಗಳ ಜ್ಯೂಸ್ ನಿಮ್ಮ ದೇಹದ ತೂಕವನ್ನು ಇಳಿಸಲು ಮ್ಯಾಜಿಕ್ ಡ್ರಿಂಕ್ ಆಗಿ ಕೆಲಸ ಮಾಡುತ್ತದೆ. ಸೆಲರಿ ಜ್ಯೂಸ್ ಸೆಲರಿ ಜ್ಯೂಸ್ ಇತ್ತೀಚೆಗೆ ಆರೋಗ್ಯ ಅತ್ಯಂತ ಅವಶ್ಯಕವಾದದ್ದು ಎಂದು ಗುರುತಿಸಲ್ಪಟ್ಟಿದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು ಇರುವುದಲ್ಲದೇ 95% ಕ್ಕಿಂತ ಹೆಚ್ಚು ನೀರಿನ ಅಂಶ ಒಳಗೊಂಡಿದೆ. ಸೆಲರಿಯು ತೂಕ ನಷ್ಟ ಮತ್ತು ಕೊಬ್ಬು ನಷ್ಟಕ್ಕೆ ಪ್ರಯೋಜನಕಾರಿ ಎಂದು ಅಧ್ಯಯನಗಳು ತೋರಿಸುತ್ತವೆ. ಸೆಲರಿ ರಸವು ಉತ್ಕರ್ಷಣ ನಿರೋಧಕಗಳಿವೆ ಹಾಗೇ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಬೀಟ್ ಜ್ಯೂಸ್ ಬೀಟ್ ಜ್ಯೂಸ್ ಎಂದರೆ ಬೀಟ್ ರೂಟ್ ತರಕಾರಿಯ ಜ್ಯೂಸ್. ಈ ರಸವು ಆಹಾರದ ನೈಟ್ರೇಟ್ಗಳಂತಹ ಪ್ರಯೋಜನಕಾರಿ ಅಂಶಗಳನ್ನು ಹೊಂದಿರುತ್ತದೆ. ಬೀಟ್ ಜ್ಯೂಸ್ ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಕಡಿಮೆ ಕ್ಯಾಲೋರಿ ಮತ್ತು ಪೌಷ್ಟಿಕ ರಸವಿರುವ ಈ ಬೀಟ್ ರೂಟ್ ಜ್ಯೂಸ್ ಉತ್ತಮವಾದದ್ದು
ನಿಂಬೆ-ಶುಂಠಿ ರಸ ನಿಂಬೆ-ಶುಂಠಿ ಹಸಿರು ರಸವು ಆರೋಗ್ಯಕರ ತೂಕ ನಷ್ಟ ಸಹಾಯ ಮಾಡುತ್ತದೆ. ಅಧ್ಯಯನಗಳ ಪ್ರಕಾರ ಶುಂಠಿ ಚಯಾಪಚಯವನ್ನು ಹೆಚ್ಚಿಸಲು, ಹಸಿವನ್ನು ಕಡಿಮೆ ಮಾಡಲು ಮತ್ತು ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಇವುಗಳನ್ನು ಜ್ಯೂಸ್ ರೀತಿಯೂ ಮಾಡಬಹುದು ಇಲ್ಲದಿದ್ದರೆ ಟೀ ರೀತಿಯೂ ಮಾಡಿ ಕುಡಿಯಬಹುದು. ಎಲೆಕೋಸು ಸೇಬಿನ ಜ್ಯೂಸ್ ಎಲೆಕೋಸು ಸೇಬಿನ ಜ್ಯೂಸ್ ನಲ್ಲಿ ಹೆಚ್ಚು ಫೈಬರ್ ಯುಕ್ತವಾಗಿದೆ. ಊಟದ ನಂತರ ಈ ಜ್ಯೂಸ್ ಕುಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳಲ್ಲಿ ತಿಳಿಸಲಾಗಿದೆ. ಸೇಬಿನಲ್ಲಿ (apple) ಫೈಬರ್ ಮತ್ತು ಇತರ ಪೋಷಕಾಂಶಗಳು ಅಧಿಕವಾಗಿವೆ. ಇದು ಎರಡೆರ ರಸದಿಂದ ತೂಕ ನಷ್ಟ, ಆಹಾರದಲ್ಲಿ ಸುಧಾರಣೆ ಕಂಡು ಬರುತ್ತದೆ.
ಕ್ಯಾರೆಟ್ ಜ್ಯೂಸ್ ಕ್ಯಾರೆಟ್ ಜ್ಯೂಸ್ ಪೌಷ್ಟಿಕಾಂಶಭರಿತ ಪಾನೀಯವಾಗಿದೆ. ವಿಟಮಿನ್ ಎ ಮತ್ತು ಇತರ ಆರೋಗ್ಯಕರ ಕ್ಯಾರೊಟಿನಾಯ್ಡ್ ಹೊಂದಿರುವುದರಿಂದ ಹೆಚ್ಚು ಸಹಕಾರಿಯಾಗಿದೆ. ಪ್ರತಿದಿನ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಯ ಕೊಬ್ಬಿನಾಂಶ ಕಡಿಮೆ ಆಗುತ್ತದೆ. ಈ 5 ಮಿರಾಕಲ್ ಜ್ಯೂಸ್ ಅನ್ನು ಕುಡಿದು ನಿಮ್ಮ ದೇಹದ ತೂಕವನ್ನು ಮ್ಯಾಜಿಕ್ ನಂತೆ ಆರೋಗ್ಯಕರವಾಗಿ ಕಡಿಮೆ ಮಾಡಿಕೊಳ್ಳಿ