ನಮ್ಮ ದೇಹ ಫಿಟ್ ಆಗಿರಲು ಹಲವಾರು ರೀತಿಯ ವಿಟಮಿನ್ ಬೇಕು. ಹೀಗಾಗಿ ಜೋಳವನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ. ಇದು ಬಹಳಷ್ಟು ಫೈಬರ್ ಅನ್ನು ಹೊಂದಿರುವುದರಿಂದ ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ. ಮತ್ತೆ ಮತ್ತೆ ಹಸಿವಿನ ಅನುಭವವಾಗುವುದಿಲ್ಲ. ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಣ್ಣುಗಳಿಗೆ ಪ್ರಯೋಜನಕಾರಿ – ಕಣ್ಣುಗಳನ್ನು ಆರೋಗ್ಯವಾಗಿಟ್ಟುಕೊಳ್ಳಲು ಕಾರ್ನ್ ಅನ್ನು ನಿಯಮಿತವಾಗಿ ಸೇವನೆ ಮಾಡಬೇಕು.
ಇದು ಬಹಳಷ್ಟು ಲುಟೀನ್ ಅನ್ನು ಹೊಂದಿರುತ್ತದೆ. ಹಾಗಾಗಿ ಜೋಳದ ಸೇವನೆಯಿಂದ ದೃಷ್ಟಿಶಕ್ತಿ ಹೆಚ್ಚುತ್ತದೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅವಶ್ಯವಾಗಿ ಕಾರ್ನ್ ತಿನ್ನಿ.
ಜೀರ್ಣಕ್ರಿಯೆಗಾಗಿ – ಕಾರ್ನ್ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ. ಏಕೆಂದರೆ ಇದರಲ್ಲಿ ಫೈಬರ್ ಅಂಶ ಹೇರಳವಾಗಿದೆ. ಮಲವಿಸರ್ಜನೆಯ ಸಮಸ್ಯೆಗಳಿದ್ದರೆ ಕಾರ್ನ್ ಅನ್ನು ಸೇವಿಸಬಹುದು.
ರಕ್ತದಲ್ಲಿನ ಸಕ್ಕರೆನಿಯಂತ್ರಣ – ಕಾರ್ನ್ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ