ದೊಡ್ಡಬಳ್ಳಾಪುರ: ಹಲವು ದಿನಗಳಿಂದ ಸುರಿದ ಮಳೆಗೆ ಸಾಕಷ್ಟು ಡ್ಯಾಂ ಗಳು ಭರ್ತಿಯಾಗಿ ಕೋಡಿ ಹೋಗುತ್ತಿವೆ..ಅದೆ ರೀತಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಡ್ಯಾಂ ಕೂಡ ಭರ್ತಿಯಾಗಿ ಕೋಡಿ ಹೋಗಿದ್ದು, ವೀಕೆಂಡ್ ಹಿನ್ನೆಲೆ ಪ್ರವಾಸಿಗರ ದಂಡೇ ಹರಿದು ಬಂದಿದೆ.. 40 ಅಡಿ ಎತ್ತರದಿಂದ ಹಾಲಿನ ನೊರೆಯಂತೆ ಬೀಳುವ ನೀರಿನಲ್ಲಿ ಕುಟುಂಬ ಸಮೇತ ಸಖತ್ ಎಂಜಾಯ್ ಮಾಡುತ್ತಿದ್ದಾರೆ..ಎಲ್ಲಿ ಈ ಡ್ಯಾಂ ಅಂತೀರಾ ಈ ಸ್ಟೋರಿ ನೋಡಿ..
ಹೌದು ಹೀಗೆ ಸುತ್ತಲೂ ಬೆಟ್ಟ ಗುಡ್ಡಗಳ ಮಧ್ಯೆ ಇರುವ ಡ್ಯಾಂ, ಡ್ಯಾಂ ಮೇಲಿನಿಂದ ಬೀಳುತ್ತಿರುವ ನೀರಿನಲ್ಲಿ ಎಂಜಾಯ್ ಮಾಡುತ್ತಿರುವ ಕುಟುಂಬಗಳು, ಸೆಲ್ಫಿ ತೆಗೆದುಕೊಂಡು ರೀಲ್ಸ್ ಮಾಡುತ್ತಿರುವ ಜೋಡಿಗಳು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಲಯದ ಪಕ್ಕದಲ್ಲೇ ಇರುವ ಘಾಟಿ ಡ್ಯಾಂ ನಲ್ಲಿ. ಹೌದು ಎರಡು ವರ್ಷಗಳ ನಂತರ ತುಂಬಿ ಕೋಡಿ ಹೋದ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂ ಗೆ ಪ್ರವಾಸಿಗರ ದಂಡೇ ಹರಿದುಬಂದಿದೆ. ದೇವರಿಗೆ ಪೂಜೆ ಸಲ್ಲಿಸಿ ಡ್ಯಾಂ ಗೆ ಭೇಟಿ ನೀಡುವುದು ವಾಡಿಕೆಯಾಗಿದೆಅಂದ ಹಾಗೆ ಸೌಂದರ್ಯ ಸವಿಯಲು ಬಂದ ಪ್ರವಾಸಿಗರಿಗೆ ಕಂಡಿದ್ದು ಮಾತ್ರ ಸಾಲು ಸಾಲು ಮೂಲಭೂತ ಸೌಕರ್ಯಗಳ ಕೊರತೆ. ಪ್ರಮುಖವಾಗಿ ಡ್ಯಾಂ ಗೆ ಯಾವುದೇ ರೀತಿಯ ತಡೆಗೋಡೆಯಿಲ್ಲ. ನೀರನ್ನು ತೀರಾ ಹತ್ತಿರದಿಂದ ನೋಡಲು ಹೋಗಲು ಪ್ರವಾಸಿಗರಿಗೆ ಭಯವಾಗುತ್ತಿದೆ.
ಇನ್ನೂ ಡ್ಯಾಂ ನ ಕೆಳಭಾಗಕ್ಕೆ ಹೋಗಲು ಸುತ್ತಲೂ ಪೊದೆಗಳು, ಗಿಡ ಬಳ್ಳಿಗಳು ಬೆಳೆದುಕೊಂಡಿವೆ. ಹಾಗಾಗಿ ಕೆಳಗೆ ಹೋಗಲು ಸಾಕಷ್ಟು ಪರದಾಡುವಂತಿದೆ. ಡ್ಯಾಂ ನ ಬಳಿ ಪುಂಡರ ಹುಚ್ಚಾಟ ಕೂಡ ಮಿತಿ ಮೀರಿದೆ. ಒಂಟಿ ಕುಳಿತಿರುವ ಜೋಡಿಗಳನ್ನು ಟಾರ್ಗೆಟ್ ಮಾಡಿ ಅವರ ಬಳಿ, ಹಣ, ಚಿನ್ನವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ ಎಂದು ಸುದ್ದಿ ಕೂಡ ಹರಿದಾಡುತ್ತಿದೆ..
ಇನ್ನೂ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂ ನ್ನು 1917 ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನಿರ್ಮಾಣ ಮಾಡಿದರು. ಇಲ್ಲಿ ಪ್ರತಿ ವರ್ಷ ಎತ್ತುಗಳ ಜಾತ್ರೆ ಆಗುತ್ತಿತ್ತು. ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಕೊಡುತ್ತಿತ್ತು. ಆಗ ಇಲ್ಲಿ ಒಂದು ಪಿಕ್ ಅಪ್ ಡ್ಯಾಂ ನಿರ್ಮಾಣ ಮಾಡಿದರು. 8 ಮೀ ಎತ್ತರ, 55 ಮೀ ಉದ್ದ ಇರುವ ಡ್ಯಾಂ. ಈ ಡ್ಯಾಂ, ಘಾಟಿ ಮತ್ತು ಹಾಡೋನಹಳ್ಳಿ ಪಂಚಾಯತಿಯ ಹಳ್ಳಿಗಳಿಗೆ ಕುಡಿಯುವ ನೀರಿನ ಮೂಲವಾಗಿದೆ. ಹಾಗಾಗಿ ತಾಲೂಕು ಆಡಳಿತದ ಜೊತೆಗೆ ಪಂಚಾಯತಿ ಅಧಿಕಾರಿಗಳು ಡ್ಯಾಂ ನ್ನು ನಿರ್ವಹಣೆ ಮಾಡಬೇಕಿದೆ. ಆದರೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಡ್ಯಾಂ ನ ಬಳಿ ಬರುವ ಪ್ರವಾಸಿಗರು ಸಾಕಷ್ಟು ತೊಂದರೆ ಆಗುತ್ತಿದೆ. ಹಾಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡುತ್ತಿದ್ದಾರೆ.ಒಟ್ಟಾರೆ ಎರಡು ವರ್ಷದ ನಂತರ ತುಂಬಿ ಕೋಡಿ ಹೋದ, ಘಾಟಿ ಡ್ಯಾಂ ಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಪ್ರವಾಸಿಗರ ಅನುಕೂಲಕ್ಕಾಗಿ ತಾಲೂಕು ಆಡಳಿತ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪ್ರವಾಸಿಗರ ಸಂಖ್ಯೆ ಹೆಚ್ಚಳ ಮಾಡುತ್ತಾರ ಎಂದು ಕಾದು ನೋಡ ಬೇಕಾಗಿದೆ..