ಬೆಂಗಳೂರು;- ಕೋವಿಡ್ -19 ಸೋಂಕಿನಿಂದ ಬಳಲುತ್ತಿದ್ದ ಜನರು ಒಂದು ಅಥವಾ ಎರಡು ವರ್ಷಗಳ ಕಾಲ ಹೃದಯಾಘಾತದಿಂದ ಪಾರಾಗಬೇಕಾದರೆ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವುದನ್ನು ತಪ್ಪಿಸಬೇಕು.
ಕಠಿಣ ವ್ಯಾಯಾಮ ಮಾಡಬಾರದು ಅಂತ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ಮಾಂಡವಿಯಾ ಅವರು ಹೇಳಿದ್ದರು. ಸಚಿವರ ಹೇಳಿಕೆಗೆ ಹಲವು ಅಭಿಪ್ರಾಯ ವ್ಯಕ್ತವಾಗಿದೆ. ಇದೀಗ ಈ ಬಗ್ಗೆ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ, ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ 15 ವರ್ಷಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಳಗೊಂಡಿದೆ ಅಂತ ಅವರು ಹೇಳಿದ್ದಾರೆ. ಕಳೆದ 10 ವರ್ಷಗಳ ಅವಧಿಯಲ್ಲಿ ಶೇಕಡಾ 22ರಷ್ಟು ಜಾಸ್ತಿ ಆಗಿದೆ, ಆದರೆ ಕೋವಿಡ್ನಿಂದ ಹಾರ್ಟ್ ಅಟ್ಯಾಕ್ ಆಗ್ತಿದೆ ಅಂತ ಹೇಳಲು ಸಾಧ್ಯವಿಲ್ಲ ಅಂತ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕೋವಿಡ್ ಲಸಿಕೆಯಿಂದ ಹಾರ್ಟ್ ಅಟ್ಯಾಕ್ ಆಗಿಲ್ಲ ಅಂತ ಕೇಂದ್ರ ಸಚಿವರು ಕೂಡ ಹೇಳಿದ್ದಾರೆ. ಆದರೆ ಈಗಾಗಲೇ ದೇಶದ 90%ರಷ್ಟು ಜನರಿಗೆ ಕೋವಿಡ್ ಬಂದಿದೆ. ಚಿಕ್ಕ ವಯಸ್ಸಿನಲ್ಲಿರುವವರಿಗೆ ಕೋವಿಡ್ ಬಂದಿರೋದು ಹೊಸದೇನಲ್ಲ. ಆದರೆ ಕೋವಿಡ್ಗೂ ಮೊದಲಿನಿಂದಲೇ ಚಿಕ್ಕ ವಯಸ್ಸಿನವರಿಗೆ ಹೃದಯಾಘಾತ ಆಗ್ತಿದೆ ಅಂತ ಡಾ. ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ಯಂಗ್ ಹಾರ್ಟ್ ಅಟ್ಯಾಕ್ ಗ್ರೂಪ್ನಲ್ಲಿ ಶೇಕಡಾ 8ರಷ್ಟು ಮಹಿಳೆಯರಿದ್ದಾರೆ. ಶೇಕಡಾ 25ರಷ್ಟು ರೋಗಿಗಳಿಗೆ ನಿಖರವಾದ ಯಾವುದೇ ಇತರೇ ತೊಂದರೆಗಳು ಇಲ್ಲ. ಶೇಕಡಾ 25ರಷ್ಟು ಯುವಕ ರೋಗಿಗಳಲ್ಲಿ ಯಾವುದೇ ರೀಸನ್ ಇಲ್ಲ ಅಂತ ಡಾ. ಮಂಜುನಾಥ್ ಹೇಳಿದ್ದಾರೆ.
ವಾಯು ಮಾಲಿನ್ಯ ಹೊಸ ಕಾರಣವಾಗಿ ಹೊರ ಹೊಮ್ಮುತ್ತಿದೆ. 2.5 ಮೈಕ್ರಾನ್ಸ್ ಗಿಂತ ಚಿಕ್ಕದಿರೋ ಕಣಗಳು ಶ್ವಾಸನಾಳದಿಂದ ಹೋಗಿ ರಕ್ತ ಕ್ಲಾಟ್ ಆಗಬಹುದು. ಫ್ರೀ ಡಯಾಬಿಟಿಸ್ ಇದ್ದವರಿಗೂ ಹೃದಯಾಘಾತ ಆಗ್ತಿದೆ ಅಂತ ಡಾ. ಮಂಜುನಾಥ್ ಎಚ್ಚರಿಸಿದ್ದಾರೆ.