ಹುಬ್ಬಳ್ಳಿ: ನಟ ಶಿವರಾಜ್ ಕುಮಾರ್ (Shivarajkumar) ಪ್ರಚಾರಕ್ಕೆ ಸಂಸದ ಪ್ರತಾಪ್ ಸಿಂಹ (Pratap Simha) ಮತ್ತು ಸಚಿವ ವಿ. ಸೋಮಣ್ಣ (V Somanna) ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ, ನಟರು ಯಾವ ಪಕ್ಷ ಪರ ಬೇಕಾದರೂ ಪ್ರಚಾರ ಮಾಡಬಹುದು. ನಟ ಶಿವರಾಜ್ಕುಮಾರ್ ಅವರು ಪ್ರಚಾರ ಮಾಡಿದರೇ ನನಗೇನು ಅಭ್ಯಂತರವಿಲ್ಲ. ಕಾಂಗ್ರೆಸ್ ಪರ ಪ್ರಚಾರಕ್ಕೆ ಸೋನಿಯಾ ಗಾಂಧಿ ಸಹ ಬರುತ್ತಿದ್ದಾರೆ. ಇಂದು ಹಾವೇರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಬರುತ್ತಿದ್ದಾರೆ. ಮೊದಲಿಗಿಂತಲೂ ಈಗ ಪ್ರಧಾನಿ ಮೋದಿಯವರ ಅಲೆ ಜಾಸ್ತಿಯಾಗಿದೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹುಬ್ಬಳ್ಳಿಯಲ್ಲಿ ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ನಟ ಶಿವರಾಜಕುಮಾರ್ ಪ್ರಚಾರ
ಇನ್ನು ಹುಬ್ಬಳ್ಳಿಯಲ್ಲಿ ಇಂದು ನಟ ಶಿವರಾಜಕುಮಾರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಪ್ರಚಾರ ಮಾಡಲಿದ್ದಾರೆ. ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ನಾಗಶೆಟ್ಟಿಕೊಪ್ಪದಲ್ಲಿ ಬೃಹತ್ ರೋಡ್ಶೋ ನಡೆಸಲಿದ್ದಾರೆ. ನಾಗಶೆಟ್ಟಿಕೊಪ್ಪದಿಂದ ರಾಮನಗರದ ವರೆಗೂ ಬೃಹತ್ ರೋಡ್ಶೋ ಮಾಡಲಿರುವ ಶಿವಣ್ಣ.