ತಮಿಳುನಾಡು;- ಗ್ರಾಮದತ್ತ ಬಂದ ಜಿಂಕೆಯ ಮೇಲೆ ನಾಯಿಗಳು ದಾಳಿ ನಡೆಸಿದ ಘಟನೆ ತಮಿಳುನಾಡಿನ ಮತ್ತಿಗೆರೆಯಲ್ಲಿ ಜರುಗಿದೆ.
ರಾಜ್ಯದ ಗಡಿ ತಾಲೂಕು ಹೊಸೂರು ಸಮೀಪದ ಮತ್ತಿಗೆರೆಗೆ ಆಹಾರ ಅರಿಸಿ ಕಾಡಿನಿಂದ ಜಿಂಕೆ ಬಂದಿದೆ. ಈ ಸಂದರ್ಭದಲ್ಲಿ ಬೀದಿ ನಾಯಿಗಳು ಅಟ್ಟಾಡಿಸಿ ಗಾಯಗೊಳಿಸಿದ್ದವು. ನಾಯಿಗಳು ಕಚ್ಚಿ ಗಾಯಗೊಳಿಸಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ಗ್ರಾಮಸ್ಥರಿಂದ ಜಿಂಕೆ ರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ, ಚಿಕಿತ್ಸೆಗಾಗಿ ವನ್ಯಜೀವಿ ಆಸ್ಪತ್ರೆಗೆ ಜಿಂಕೆ ಸಾಗಿಸಿದ್ದಾರೆ.