ಹೆಚ್ಎಸ್ಆರ್ಪಿ (HSRP) ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ಸೈಬರ್ (Cyber) ಖದೀಮರು ದೋಖಾ ನಡೆಸುತ್ತಿದ್ದು, ಅರ್ಜಿ ಸಲ್ಲಿಸುವ ಮೊದಲು ಜನರು ಎಚ್ಚರವಹಿಸಬೇಕು ಎಂದು ಪೊಲೀಸರು (Police) ತಿಳಿಸಿದ್ದಾರೆ.
ಸರ್ಕಾರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಹಾಕುವಂತೆ ಸೂಚನೆ ನೀಡಿದ ಬೆನ್ನಲ್ಲೇ ಹೆಚ್ಎಸ್ಆರ್ಪಿ ಹೆಸರಿನಲ್ಲಿ ಅನ್ಲೈನ್ನಲ್ಲಿ ನಕಲಿ ಕ್ಯೂ ಆರ್ ಕೋಡ್ಗಳು ಮತ್ತು ಲಿಂಕ್ಗಳು ಹರಿದಾಡುತ್ತಿವೆ.
ಮೊದಲು ನಕಲಿ ಲಿಂಕ್ಗಳನ್ನು ಹರಿಬಿಟ್ಟು ಖದೀಮರು ನೋಂದಣಿ ಮಾಡಿಸುತ್ತಾರೆ. ಆ ಲಿಂಕ್ಗಳಲ್ಲಿ ನೋಂದಣಿ ಮಾಡಿದ ಬಳಿಕ ಒಂದು ಕ್ಯೂ ಆರ್ ಕೋಡ್ ಸಿಗುತ್ತೆ. ಒಂದು ವೇಳೆ ಬಂದಿರುವ ಕ್ಯೂ ಆರ್ ಕೋಡ್ನನ್ನು ಟಚ್ ಮಾಡಿದರೆ ಅಪರಿಚಿತರ ಖಾತೆಗೆ ನಿಮ್ಮ ಖಾತೆ ಲಿಂಕ್ ಆಗುತ್ತದೆ. ಸ್ವಲ್ಪ ಎಮಾರಿದ್ರು ನಿಮ್ಮ ಖಾತೆಯಲ್ಲಿರುವ ಹಣ ಖದೀಮರ ಪಾಲಾಗುತ್ತದೆ.
ಈ ಬಗ್ಗೆ ವ್ಯಕ್ತಿ ಒಬ್ಬರು ಎಕ್ಸ್ ಮೂಲಕ ಕ್ಯೂ ಆರ್ ಕೋಡ್ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ.