ವಾಷಿಂಗ್ಟನ್:ಮಾಜಿ ನೀಲಿ ಚಿತ್ರ ತಾರೆಯೊಂದಿಗಿನ ಅಕ್ರಮ ಸಂಬಂಧದ ಬಗ್ಗೆ ಬಾಯಿಬಿಡದಂತೆ ಹಣ ನೀಡಿದ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ದೋಷಿ ಎಂದು ಜ್ಯೂರಿಗಳು ತೀರ್ಪಿತ್ತಿದ್ದು, ಟ್ರಂಪ್ಗೆ ಲಾಭವಾಗಿ ಪರಿಣಮಿಸಿದೆ!
ಟ್ರಂಪ್ ವಿರುದ್ಧ ತೀರ್ಪು ಪ್ರಕಟವಾದ ನಂತರ ಅವರ ಪರ ದೊಡ್ಡಮಟ್ಟದ ಅಲೆ ಎದ್ದಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕೆ ಭಾರೀ ಪ್ರಮಾಣದ ದೇಣಿಗೆ ಹರಿದುಬರಲಾರಂಭಿಸಿದೆ.
ಟ್ರಂಪ್ ಪರ ದೇಣಿಗೆ ಸಂಗ್ರಹಿಸಲು ಎರಡು ಪ್ರಚಾರ ಸಮಿತಿಗಳಿದ್ದು, 2023ರ ಮೊದಲ ಮೂರು ತಿಂಗಳಲ್ಲಿ ಅಂದರೆ ಮಾರ್ಚ್ಗೆ ಮುಕ್ತಾಯವಾದ ತ್ತೈಮಾಸಿಕದಲ್ಲಿ ಒಟ್ಟಾರೆ 18.8 ದಶಲಕ್ಷ ಡಾಲರ್ ಸಂಗ್ರಹವಾಗಿದೆ.
ವಿಶೇಷವೆಂದರೆ, ಅವರ ವಿರುದ್ಧ ತೀರ್ಪು ಪ್ರಕಟವಾದ ಬಳಿಕ ಬರೋಬ್ಬರಿ 15 ದಶಲಕ್ಷ ಡಾಲರ್ ಹರಿದುಬಂದಿದೆ. ಮಾ.30ರಂದು ಅವರು ದೋಷಿ ಎಂದು ತೀರ್ಪು ಬಂದ 24 ಗಂಟೆಗಳಲ್ಲಿ 4 ದಶಲಕ್ಷ ಡಾಲರ್ ದೇಣಿಗೆ ಬಂದಿತ್ತು ಎಂದು ಪ್ರಚಾರ ಸಮಿತಿ ಹೇಳಿದೆ. ಒಟ್ಟು 3 ಲಕ್ಷ ಮಂದಿ ಟ್ರಂಪ್ ಪ್ರಚಾರಕ್ಕೆ ದೇಣಿಗೆ ನೀಡಿದ್ದಾರೆ.