ಸಲ್ಮಾನ್ ಖಾನ್ ನಿರೂಪಣೆಯ ‘ಬಿಗ್ ಬಾಸ್ ಹಿಂದಿ ಸೀಸನ್ 18’ ಆರಂಭವಾಗಿ ಕೆಲ ದಿನಗಳಷ್ಟೇ ಕಳೆದಿದೆ. ಈ ಸೀಸನ್ ನಲ್ಲಿ ಸ್ಪರ್ಧಿಗಳ ಜೊತೆಗೆ ಕತ್ತೆ ಕೂಡ ಅತಿಥಿಯಾಗಿ ಎಂಟ್ರಿಕೊಟ್ಟಿತ್ತು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಸಾಕಷ್ಟು ವಿವಾದದ ಬಳಿಕ ಕೊನೆಗೂ ಕತ್ತೆಯನ್ನು ಶೋನಿಂದ ಹೊರ ತರಲಾಗಿದೆ.
ಕತ್ತೆಯನ್ನು ಬಿಗ್ ಬಾಸ್ ಮನೆಗೆ ಕಳುಹಿಸಿದ್ದು ಸಾಕಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಕತ್ತೆಯನ್ನು ಬಿಗ್ ಬಾಸ್ಗೆ ಕಳುಹಿಸಿದ್ದು ಏಕೆ? ಇದೊಂದು ಪ್ರಯೋಗವೇ ಎನ್ನುವ ಪ್ರಶ್ನೆಯೂ ಮೂಡಿತ್ತು. ಈ ಬಗ್ಗೆ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಜೊತೆಗೆ ಇದು ಆಕ್ರೋಶಕ್ಕೂ ಕಾರಣವಾಗಿದೆ. ಸದ್ಯ ಇದೀಗ ಮ್ಯಾಕ್ಸ್ ಹೆಸರಿನ ಕತ್ತೆಯನ್ನು ಹೊರಕ್ಕೆ ತರಲಾಗಿದ್ದು ಇದರಿಂದ ಪ್ರಾಣಿ ಪ್ರಿಯರಿಗೆ ಖುಷಿ ಆಗಿದೆ.
ಈ ಮೊದಲು ಪ್ರಾಣಿ ದಯಾ ಸಂಘದವರಾದ ಪೆಟಾದವರು ಸಲ್ಮಾನ್ ಖಾನ್ ಶೋಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸಲ್ಮಾನ್ ಖಾನ್ ಬಳಿ ತಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತರಲು ಕೋರಲಾಗಿತ್ತು. ಕೊನೆಗೂ ಈಗ ಕತ್ತೆಯನ್ನು ಹೊರಕ್ಕೆ ತರಲಾಗಿದೆ. ಈ ಬಾರಿ ಬಿಗ್ ಬಾಸ್ನಿಂದ ಹೊರಕ್ಕೆ ಹೋದ ಮೊದಲ ಸ್ಪರ್ಧಿ ಕತ್ತೆಯೇ ಆಗಿದೆ ಅನ್ನೋದು ವಿಶೇಷ.
ಇತ್ತೀಚೆಗೆ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಖಚಿತಪಡಿಸಲಾಯಿತು. ‘ಧನ್ಯವಾದಗಳು ಮೇನಕಾ ಸಂಜಯ್ ಗಾಂಧಿ ಅವರೇ. ಪ್ರಾಣಿಗಳ ಪರವಾಗಿ ಇರುವ ಪಿಎಫ್ಎನ ಮುಖ್ಯಸ್ಥರಾಗಿ ನೀವು ಕತ್ತೆಯನ್ನು ಹೊರತರುವಲ್ಲಿ ಹೋರಾಡಿದ್ದೀರಿ’ ಎಂದು ಬರೆದುಕೊಳ್ಳಲಾಗಿದೆ.
ಈ ಮೊದಲು ವಾಹಿನಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ‘ಕತ್ತೆಯೂ ಒಂದು ಪ್ರಾಣಿ. ಅದು ಮನರಂಜನೆಗೆ ಬಳಕೆ ಆಗಬಾರದು. ಅವುಗಳು ಶಬ್ದವನ್ನು ಕಂಡರೆ ಭಯಪಡುತ್ತವೆ. ಹೀಗಾಗಿ, ಇದು ಸರಿ ಅಲ್ಲ. ಸಲ್ಮಾನ್ ಖಾನ್ ಅವರೇ ನಿಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತನ್ನಿ’ ಎಂದು ಆಗ್ರಹಿಸಲಾಗಿತ್ತು. ಅಂತೆಯೇ ಇದೀಗ ಬಿಗ್ ಬಾಸ್ ಮನೆಯಿಂದ ಒಂದೇ ವಾರಕ್ಕೆ ಕತ್ತೆ ಹೊರಗೆ ಬಂದಿದೆ.