ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಜೀವನದಲ್ಲಿ ಗುರಿಗಳನ್ನು ಸಾಧಿಸಲು ಫಿಟ್ನೆಸ್ ಬಗ್ಗೆ ಅರಿವು ಮತ್ತು ಶಿಸ್ತು ಬಹಳ ಮುಖ್ಯ ಎಂದು ನಂಬಿಕೊಂಡು ಬಂದಿದ್ದಾರೆ. ತಂಬಾಕು ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಸಾಕಷ್ಟು ಅವಕಾಶಗಳು ಬಂದಿದ್ದವು ಆದರೆ ನಾನದನ್ನೆಲ್ಲಾ ನಿರಾಕರಿಸಿದ್ದೇನೆ ಎಂದು ಸಚಿನ್ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮೌಖಿಕ ನೈರ್ಮಲ್ಯ- ಸ್ವಚ್ಛ ಮುಖ್ ಅಭಿಯಾನದ “ಸ್ಮೈಲ್ ಅಂಬಾಸಿಡರ್” ಆಗಿರುವ ಸಚಿನ್ ತೆಂಡೂಲ್ಕರ್ ಎಂದಿಗೂ ತಂಬಾಕು , ಆಲ್ಕೋಹಾಲ್ ಜಾಹೀರಾತಿಗೆ ಪ್ರೋತ್ಸಾಹ ನೀಡುವುದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ.
ಆಲ್ಕೋಹಾಲ್ ಜಾಹೀರಾತನ್ನೂ ತ್ಯಜಿಸಿದ್ದರು
ನಿಮಗೆಲ್ಲಾ ನೆನಪಿರಬಹುದು IPL ಸಮಯದಲ್ಲಿ ಕ್ರಿಕೆಟಿಗರ ‘ಊ ಲಾ ಲಾ ಲಾ ಲೆ ಓ’ ಜಾಹೀರಾತು ಬಹಳ ಫೇಮಸ್ ಆಗಿತ್ತು. ಆದರೆ ಆ ಜಾಹೀರಾತಿನಲ್ಲಿ ತೆಂಡೂಲ್ಕರ್ ಕಾಣಿಸಿಕೊಂಡಿರಲಿಲ್ಲ ಅದಕ್ಕೆ ಕಾರಣ ಅದು ಆಲ್ಕೋಹಾಲ್ ಸಂಬಂಧಿತ ಜಾಹೀರಾತು ಆಗಿತ್ತು. ಫಿಟ್ನೆಸ್ ಕಡೆಗೆ ಗಮನ ನೀಡುವ ಸಚಿನ್ ನೋಟದಲ್ಲಿ ಮಾತ್ರವಲ್ಲ, ಮಾನಸಿಕವಾಗಿಯೂ ಹಾಗೂ ಮೌಖಿಕ ಆರೋಗ್ಯದಲ್ಲೂ ಫಿಟ್ ಆಗಿರಬೇಕು ಎನ್ನುತ್ತಾರೆ.
50 ಪ್ರತಿಶತದಷ್ಟು ಮಕ್ಕಳು ಮೌಖಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಬಾಯಿಯ ಕಾಯಿಲೆಗಳನ್ನು ಹೊಂದಿದ್ದಾರೆ ಮತ್ತು ಅದು ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅಂತಹ ವಿಷಯವು ಅವರ ಆತ್ಮವಿಶ್ವಾಸವನ್ನು ಕಡಿಮೆಮಾಡುತ್ತದೆ. ಆದ್ದರಿಂದ ಮೌಖಿಕ ಆರೋಗ್ಯದತ್ತ ಗಮನಹರಿಸುವುದು ಮುಖ್ಯ.