ಬಿಗ್ ಬಾಸ್ ಸೀಸನ್ 10 ರ ಗ್ರ್ಯಾಂಡ್ ಪ್ರೀಮಿಯರ್ ಶನಿವಾರ ಭರ್ಜರಿ ಆರಂಭವಾಗಿದೆ. ಮನೆಗೆ ಎಂಟ್ರಿಕೊಟ್ಟ ಎರಡ್ಮೂರು ದಿನದಲ್ಲಿ ಸ್ಪರ್ಧೆಗಳಲ್ಲಿ ಮನಸ್ಥಾಪ ಶುರುವಾಗಿದೆ.
ಮೊದಲ ದಿನ ಎಲ್ಲರೂ ಬಂದ ಹೊಸದು ಎಂಬ ಕಾರಣಕ್ಕೆ ‘ದೊಡ್ಮನೆ’ಯೊಳಕ್ಕೆ ಚೆನ್ನಾಗಿಯೇ ಇದ್ದರು. ಆದರೆ, ಎರಡನೇ ದಿನ ಆಗುವಷ್ಟರ ಹೊತ್ತಿಗೆ ಜಗಳಗಳು ಶುರುವಾಗಿವೆ
ಜಗಳ ಅಂತ ಬಂದಾಗ ಎಲ್ಲರೂ ನಟಿ ತನಿಶಾ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ನಮೃತಾ ಗೌಡ ಹೆಚ್ಚು ಹೆಚ್ಚು ತನಿಶಾರನ್ನೇ ದೂಷಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರಾ ಎಂಬ ಸಂಶಯ ಹಲವರಿಗೆ ಕಾಡತೊಡಗಿದೆ. ನಮೃತಾ ಹೆಚ್ಚಿನ ವೇಳೆ ‘ತನಿಶಾ ಮಾತನಾಡುವ ರೀತಿ ಸರಿಯಿಲ್ಲ, ಡಾಮಿನೇಟಿಂಗ್ ತರ ಇತ್ತು, ಹಾಗೆ ಹೀಗೆ’ ಎಂದು ತನಿಶಾರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ.
ನಿನ್ನೆ ರಾತ್ರಿ ಕೂಡ ತನಿಶಾ ಬಗ್ಗೆ ಟೀಕೆ ಮಾಡಿದ ನಮೃತಾ, ‘ನೀವು ನಿಮ್ಮ ಎಲ್ಲಾ ಪ್ರಶ್ಟ್ರೇಶನ್ಗಳನ್ನು ಬೇರೆಯವರ ಮೇಲೆ ತೋರಿಸಲು ಸಾಧ್ಯವಾಗಲ್ಲ. ಎಲ್ಲಾ ಟೈಮ್ ಜೋರಾಗಿ ಮಾತನಾಡಬೇಡಿ. ಡಾಮಿನೇಟಿಂಗ್ ಮಾಡಬೇಡಿ’ ಎನ್ನಲು ತನಿಶಾ ‘ನಾನು ಮಾತನಾಡುವುದೇ ಹಾಗೆ. ನಾನು ಯಾರನ್ನೂ ಡಾಮಿನೇಟಿಂಗ್ ಮಾಡುತ್ತಿಲ್ಲ. ಆ ಉದ್ದೇಶವೂ ನನಗಿಲ್ಲ. ಎಲ್ಲದಕ್ಕೂ ನನ್ನನ್ನು ಹೊಣೆ ಮಾಡಬೇಡಿ’ ಎಂದು ಹೇಳುತ್ತ ಕಣ್ಣೀರಾದರು.