ಕಳೆದ ಎರಡು ದಿನಗಳ ಹಿಂದೆ ಸಹಪಾಠಿಯಿಂದ ಭೀಕರವಾಗಿ ಕೊಲೆಯಾಗಿರುವ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಕುರಿತು ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಗಾರನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಕುರಿತು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ನಟಿ, ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಜಾತಿ, ಧರ್ಮ ಯಾವುದೇ ಆಗಿರಲಿ. ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ (ನೇಹಾ) ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ ಎಂದು ನಟಿ ಹೇಳಿದ್ದಾರೆ.
ಸರ್ಕಾರಕ್ಕೆ ನನ್ನ ಒಂದು ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ರಚಿತಾ ರಾಮ್ ಒತ್ತಾಯಿಸಿದ್ದಾರೆ.