ಹಾವೇರಿ: ರಾಜ್ಯ ಸರಕಾರ ವಿದ್ಯುತ್ ಬಳಕೆ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಶಿಡೇನೂರ ಗ್ರಾಮಸ್ಥರು ಶುಕ್ರವಾರ ಸಭೆ ನಡೆಸಿ ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಪಾವತಿ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.
200 ರೂ. ಬದಲಿಗೆ 800 ರೂ.ವರೆಗೂ ಬಿಲ್ ಮೂರು ಪಟ್ಟು ದರ ಹೆಚ್ಚಳಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದ ಜನರಿಗೆ ಜೂನ್ ನಲ್ಲಿ (ಮೇ ತಿಂಗಳ ಬಿಲ್) ಮೂರುಪಟ್ಟು ಹೆಚ್ಚಳದ ಬಿಲ್ ನೀಡಿರುವುದು ಆಘಾತ ತಂದಿದೆ
ಸರಕಾರ ಹಾಗೂ ಹೆಸ್ಕಾಂ ವಿರುದ್ದ ರಾಜ್ಯಾದ್ಯಂತ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿರುವ ಬೆನ್ನಲ್ಲೇ ತಾಲೂಕಿನ ಶಿಡೇನೂರ ಗ್ರಾಮಸ್ಥರು ಸಹ ಶುಕ್ರವಾರ ಸಭೆ ನಡೆಸಿ ಯಾವುದೇ ಕಾರಣಕ್ಕೂ ಅಧಿಕ ಬಿಲ್ ಕಟ್ಟುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್ ದರ ಏರಿಕೆ ಖಂಡಿಸಿ ಬ್ಯಾಡಗಿ ತಾಲೂಕಿನ ಶಿಡೇನೂರ ಗ್ರಾಮದ ದೇವಸ್ಥಾನದಲ್ಲಿ ಗ್ರಾಮಸ್ಥರು ಸಭೆ ನಡೆಸಿದ್ದಾರೆ.
“ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಿರುವ ಸರಕಾರ ಇದೀಗ ಏಕಾಏಕಿ ಬಿಲ್ ಜಾಸ್ತಿ ಮಾಡಿದೆ. ಇದರ ಹಿಂದಿನ ಉದ್ದೇಶವಾದರೂ ಏನು? ಒಂದು ಕಡೆ ಕೊಟ್ಟುಮತ್ತೊಂದು ಕಡೆ ನಮ್ಮಿಂದಲೇ ಕಸಿದುಕೊಳ್ಳುವ ಹುನ್ನಾರವೇ? ಹೆಸ್ಕಾಂ ಮೀಟರ್ ರೀಡಿಂಗ್ ಸೇರಿದಂತೆ ಬಿಲ್ ವಸೂಲಿಗೆ ಅಧಿಕಾರಿಗಳು ಶಿಡೇನೂರ ಗ್ರಾಮದಲ್ಲಿ ಬರಬೇಡಿ” ಎಂದಿದ್ದಾರೆ.