ಶನಿವಾರ ದಿನ ಉಗುರು ಮತ್ತು ಕೂದಲು ಕತ್ತರಿಸುವುದರಿಂದ ನಮಗೆ ದುರಾದೃಷ್ಟ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಕೆಲವರು ಇದರ ಹಿಂದೆ ವೈಜ್ಞಾನಿಕ ಕಾರಣವೂ ಇರಬಹುದು. ಕೆಲವರು ಇದನ್ನು ನಂಬುವುದಿಲ್ಲ. ಆದರೆ ಈ ದಿನ ಉಗುರು ಮತ್ತು ಕೂದಲು ಕತ್ತರಿಸುವುದರಿಂದ ಶನಿಯ ಅವಕೃಪೆಗೆ ಪಾತ್ರರಾಗುತ್ತೇವೆ ಅಂತಾ ಹೇಳಲಾಗುತ್ತದೆ.
ಇನ್ನು ಶನಿ ಮತ್ತು ಕಬ್ಬಿಣಕ್ಕೂ ಸಂಬಂಧವಿದೆ ಎನ್ನುತ್ತಾರೆ. ರಸ್ತೆಯಲ್ಲಿ ಸಿಕ್ಕ ಕಬ್ಬಿಣವನ್ನು ಮನೆಗೆ ತಂದರೆ, ಮನೆಗೆ ಶನಿ ವಕ್ಕರಿಸುತ್ತಾನೆ ಅಂತಾರೆ, ಹಾಗಾಗಿ ದಾರಿಯಲ್ಲಿ ಸಿಕ್ಕ ಕಬ್ಬಿಣವನ್ನು ಮನೆಗೆ ತರುವುದಿಲ್ಲ. ಇನ್ನು ಹೊಸ ವಾಹನ ಖರೀದಿಸಿದಾಗ, ಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ, ಶನಿದೇವನಿಗೂ ಪೂಜೆ ಸಲ್ಲಿಸಿದರೆ, ಅಪಘಾತವಾಗದಂತೆ ಶನಿ ನಮ್ಮನ್ನು ರಕ್ಷಿಸುತ್ತಾನೆಂದು ಹೇಳಲಾಗುತ್ತದೆ. ಇನ್ನು ಸಾಡೇಸಾಥಿ ಇದ್ದವರಿಗೆ ಹೆಚ್ಚಾಗಿ ಅಪಘಾತವಾಗುತ್ತದೆ. ಹಾಗಾಗಿ ನಾವು ಶನಿಗೂ ಕಬ್ಬಿಣಕ್ಕೂ ಸಂಬಂಧವಿದೆ ಅನ್ನೋದನ್ನ ನಂಬಬಹುದು. ಶನಿವಾರದ ದಿನ ಕಬ್ಬಿಣವನ್ನು ಮನೆಗೆ ತಂದರೆ, ದುರಾದೃಷ್ಟ ತಂದಹಾಗೆ ಎನ್ನಲಾಗಿದೆ.