ಸೈಬರ್ ಕ್ರೈಮ್ ಮತ್ತು ಆನ್ ಲೈನ್ ಫ್ರಾಡ್ ಗಳಿಗೆ ಯಾರೂ ಬಲಿಯಾಗಬಾರದು ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ್ರು ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಇತ್ತೀಚೆಗೆ ಸೈಬರ್ ಕ್ರೈಮ್ಸ್ ಮತ್ತು ಆನ್ಲೈನ್ ಫ್ರಾಡ್ಸ್ ಜಾಸ್ತಿ ಆಗ್ತಿರೋ ಹಿನ್ನೆಲೆ, ಗದಗ ಜಿಲ್ಲಾ ಪೊಲೀಸ್ ವತಿಯಿಂದ ಸಾಕಷ್ಟು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗ್ತಿದೆ.
ಗದಗ ಜಿಲ್ಲೆಯ ಜನ ಸೈಬರ್ ಕ್ರೈಮ್ ಮತ್ತು ಆನ್ ಲೈನ್ ಫ್ರಾಡ್ ಗಳಿಗೆ ಯಾರೂ ಬಲಿಯಾಗಬಾರದು. ಇತ್ತೀಚೆಕೆ Apk ಫೈಲ್ ಲಿಂಕ್ ಬರ್ತಿವೆ
ಆ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಮೊಬೈಲ್ ಕಂಟ್ರೋಲ್ ಗೆ ಹೋಗತ್ತೆ. ಎಸ್ ಬಿ ಐ, ಕಿಸಾನ್ ಗ್ರೂಪ್ ಸೇರಿದಂತೆ ಬೇರೆ ಬೇರೆ ಹೆಸರಿನಲ್ಲಿ ಬರ್ತಾ ಇದೆ. ಅದರ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು. ಕೆವೈಸಿ ಅಪ್ಡೇಟ್ ಹೆಸರಲ್ಲಿ ನಿಮ್ಮ ಬ್ಯಾಂಕ್ ಡಿಟೇಲ್ಸ್ ಕೊಡಿ, ಆಧಾರ ನಂಬರ ಕೊಡಿ ಅಂತಾ ಬ್ಯಾಂಕ್ ನಿಂದ ಕಾಲ್ ಅಂತಾ ಹೆಳ್ತಾರೆ. ಓಟಿಪಿ ಉಪಯೋಗಿಸಿ ಫ್ರಾಡ್ ಮಾಡ್ತಾರೆ. ಬ್ಯಾಂಕ್ ನವರು ಯಾರೂ ಕಾಲ್ ಮಾಡಿ ಮಾಹಿತಿ ಕೇಳೋದಿಲ್ಲ, ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈಗ ಡಿಜಿಟಲ್ ಅರೆಸ್ಟ್ ಅನ್ನೋದು ಪ್ರಾರಂಭ ಆಗಿದೆ
ನಿಮ್ಮ ಮೊಬೈಲ್ ನಿಂದ ಅಶ್ಲೀಲ ವಿಡಿಯೋ ಹೋಗಿದೆ, ಮಾಹಿತಿ ಶೇರ್ ಆಗಿದೆ ನೀವು ನಾ ಹೇಳಿದಂಗೆ ಕೇಳದಿದ್ರೆ ಅರೆಸ್ಟ್ ಮಾಡ್ತೀವಿ ಅಂತಾರೆ. ಕೇಸ್ ರಿಜಿಸ್ಟ್ರಾರ ಮಾಡ್ತೀವಿ ಅಂತಾ ಯಾವುದಾದರೂ ಇನ್ವೆಸ್ಟಿಗೇಟಿಂಗ್ ಏಜೆನ್ಸಿ ಅಥವಾ ಎನ್ಫೋರ್ಸಮೆಂಟ್ ಪೊಲೀಸ ಅಂತಾ ಹೆಳ್ತಾರೆ. ಹೆದರಿದ
ಅವರಿಂದ ಹಣ ಹಾಕಿಸಿಕೊಳ್ತಾರೆ. ಶೇರ್ ಮಾರ್ಕೆಟ್ ಹೆಸರಲ್ಲಿ ಫ್ರಾಡ್ ಮಾಡ್ತಾರೆ. ಸೈಬರ್ ಕ್ರೈಮಲ್ಲಿ ದೊಡ್ಡ ಜಾಲ ಕೆಲಸ ಮಾಡ್ತಿದೆ. ಎಲ್ಲರೂ ಕೂಡಾ ಈ ಬಗ್ಗೆ ಎಚ್ಚರ ವಹಿಸಿ ಎಂದರು.
ಸೈಬರ್ ಕ್ರೈಮ್ ಘಟನೆ ಆದ್ರೆ ತಕ್ಷಣ 1930 ಗೆ ಕಾಲ್ ಮಾಡಿ ದೂರನ್ನ ದಾಖಲಿಸಿ. ತಕ್ಷಣ ಅಕೌಂಟ್ ಫ್ರೀಜ್ ಮಾಡಬಹುದು. 1930 ಜೊತೆಗೆ CEN ಪೊಲೀಸ್ ಠಾಣೆ ಅಥವಾ ಯಾವುದೇ ಪೊಲೀಸ್ ಠಾಣೆಗಳಲ್ಲಿ ದೂರು ಕೊಡಬಹುದು. ಈ ಕುರಿತಾಗಿ ಒಂದು ವಿಶೇಷ ವಾಹನ ಗದಗ ಜಿಲ್ಲೆಯಾದ್ಯಂತ ಓಡಾಟ ನಡೆಸಲಾಗುವುದು. ಮನೆ ಮನೆಗೆ ಪ್ಯಾಂಪ್ಲೆಂಟ್ ಕೊಡ್ತಿದ್ದೇವೆ. ಇದಕ್ಕೆ ಯಾರೂ ಹೆದರೋ ಅವಶ್ಯಕತೆ ಇಲ್ಲ. ಏನಾದ್ರೂ ಇದ್ರೆ ಪೊಲೀಅ ಇಲಾಖೆ ಗಮನಕ್ಕೆ ತರಬೇಕು. ಗದಗ ಜಿಲ್ಲೆಯಾದ್ಯಂತ ಈಗಾಗಲೇ CEN ಪೊಲೀಸ್ ಠಾಣೆಯಲ್ಲಿ 32 ಮತ್ತು ಇತರೆ ಪೊಲೀಸ್ ಠಾಣೆಗಳಲ್ಲಿ 12 ಕೇಸ್ ರೆಜಿಸ್ಟರ್ ಆಗಿವೆ ಎಂದರು