ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಾಸ್ತು ನಿಯಮವಿದೆ. ಮನೆಯಲ್ಲಿನ ಪ್ರತಿಯೊಂದು ವಸ್ತುವನ್ನು ಕೂಡ ಆ ಪ್ರಕಾರವೇ ಇಡಬೇಕು. ಇದೇ ರೀತಿ ಮನೆಯ ಕಸದ ಬುಟ್ಟಿ ಇಡುವುದಕ್ಕೂ ತನ್ನದೇ ಆದ ಸರಿಯಾದ ದಿಕ್ಕು ಇದೆ. ವಾಸ್ತು ಶಾಸ್ತ್ರದ ಪ್ರಕಾರ, ನೀವು ಡಸ್ಟ್ಬಿನ್ ಅನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ತಪ್ಪಾದ ಜಾಗದಲ್ಲಿ ಕಸದ ಬುಟ್ಟಿ ಇಟ್ಟರೆ ನಕಾರಾತ್ಮಕ ಶಕ್ತಿ ಹರಡುತ್ತದೆ. ಮನೆಯಲ್ಲಿ ಆರ್ಥಿಕ ತೊಂದರೆ ಎದುರಾಗುತ್ತದೆ. ಅದಕ್ಕಾಗಿಯೇ ಡಸ್ಟ್ಬಿನ್ ಅನ್ನು ಇರಿಸುವಾಗ, ಸರಿಯಾಗಿ ಕಾಳಜಿ ವಹಿಸುವುದು ಬಹಳ ಮುಖ್ಯ. ಹಾಗಾಗಿ ಮನೆಯಲ್ಲಿ ಕಸದಬುಟ್ಟಿಯನ್ನು ಯಾವ ಜಾಗದಲ್ಲಿ ಇಡಬಾರದು ಇಟ್ಟರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.
ವಾಸ್ತು ಶಾಸ್ತ್ರದ ಪ್ರಕಾರ ಕಸವನ್ನು ಇಡಲು ವಿಶೇಷ ನಿರ್ದೇಶನವಿದೆ. ಇದನ್ನು ನೆನಪಿಡಿ. ಕಣ್ಣಿಗೆ ಕಾಣುವಂತೆ ನೇರ ದೃಷ್ಟಿಯಲ್ಲಿ ಕಸವನ್ನು ಎಂದಿಗೂ ಇಡಬೇಡಿ. ವಿಶೇಷವಾಗಿ ಪೂಜಾ ಸ್ಥಳವು ಕಸ ವಿಲೇವಾರಿ ಪ್ರದೇಶದ ಹತ್ತಿರ ಇರಬಾರದು ಎಂಬುದನ್ನು ನೆನಪಿಡಿ.
ವಾಸ್ತು ಪ್ರಕಾರ ತಪ್ಪಾಗಿಯೂ ಕಸವನ್ನು ವಾಯವ್ಯ, ಪಶ್ಚಿಮ, ಉತ್ತರ, ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಋಣಾತ್ಮಕತೆ ಬರುವುದಲ್ಲದೆ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.
ಅನೇಕ ಜನರು ತಮ್ಮ ಮನೆಯ ಮೇಲ್ಛಾವಣಿಯನ್ನು ಖಾಲಿ ಜಾಗವೆಂದು ಪರಿಗಣಿಸುತ್ತಾರೆ ಮತ್ತು ಮನೆಯ ಕಸವನ್ನು, ಅಥವಾ ವೇಸ್ಟ್ ಸಾಮಾನುಗಳನ್ನು ಅಲ್ಲಿ ಇಡುತ್ತಾರೆ. ವಾಸ್ತು ಪ್ರಕಾರ ಮನೆಯ ಮೇಲ್ಛಾವಣಿ, ಬಾಲ್ಕನಿ ಹಾಗೂ ಕೋಣೆಯ ಮೇಲೆ ಕಸ ಎಸೆಯಬಾರದು. ಹೀಗೆ ಮಾಡುವುದರಿಂದ ಜೀವನದಲ್ಲಿ ಒತ್ತಡಗಳು ಹೆಚ್ಚುತ್ತವೆ.
ವಾಸ್ತು ಪ್ರಕಾರ ಮನೆಯ ಬಾಲ್ಕನಿಯಲ್ಲಿ ಕಸ ಎಸೆಯಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುವ ಭೀತಿ ಇದೆ. ಹಾಗೆ ಮಾಡಿದರೆ ಹಣಕಾಸಿನ ಸಮಸ್ಯೆಗಳಿಂದ ಯಾವಾಗಲೂ ತೊಂದರೆ ಅನುಭವಿಸುತ್ತೀರಿ.
ವಾಸ್ತು ಪ್ರಕಾರ ಹಳೆ ಪೊರಕೆಯನ್ನು ಮನೆಯಲ್ಲಿ ಇಡಬಾರದು. ಅಲ್ಲದೇ ಹಳೆಯ ದೇವರ ಚಿತ್ರಗಳನ್ನು ಕಸದ ಕೋಣೆಯಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಅಶುಭ ಫಲಗಳು ಉಂಟಾಗುತ್ತವೆ. ಹಾಗೆಯೇ ನೀರಿನಲ್ಲಿ ಕಸವನ್ನು ಇಡಬೇಡಿ ಎಂದು ನೆನಪಿಡಿ