ಶಿವಮೊಗ್ಗ: ಐದು ಗ್ಯಾರಂಟಿಗಳಿಗೆ ಜನರು ಮರಳಾಗಿಲ್ಲ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Former CM Basavaraja Bommai)ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮನ್ನಣೆ ಅಂತೂ ಕೊಟ್ಟಿದ್ದಾರೆ. ಈ ಐದು ಗ್ಯಾರಂಟಿಗಳ ಮೇಲೆ ಜನರು ಬಹಳ ನಂಬಿಕೆ ಇಟ್ಟಿದ್ದಾರೆ.
ನಿಮ್ಮ ಪ್ರತಿ ಮಾತಿನ ಮೇಲೂ ರಾಜ್ಯದ ಜನರು ವಿಶ್ವಾಸವಿಟ್ಟಿದ್ದಾರೆ. ಮೊದಲ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿ ಅನುಷ್ಠಾನ ಅಂದಿದ್ದರು. ಮೊದಲ ಸಂಪುಟದಲ್ಲೇ ತಾತ್ವಿಕವಾಗಿ ಒಪ್ಪಿಗೆ ಪಡೆದು ಜಾರಿ ಮಾಡಿದ್ದಾರೆ. ನಂತರ ಒಂದೊಂದೇ ಕಂಡಿಷನ್ ಹಾಕುತ್ತಾ ಬಂದರು. ಹೇಳಿದ್ದಕ್ಕೂ, ಅನುಷ್ಠಾನ ಮಾಡೋದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಗ್ಯಾರಂಟಿಗಳಿಂದ ಜನರ ಮೇಲೆ ಯಾವುದೇ ತೆರಿಗೆ ಹಾಕಬೇಡಿ ಎಂದರು.