ಗರಿಕೆ ಸಾಮಾನ್ಯವಾಗಿ ಮನೆಯ ಮುಂದೆ ಹಾಗೂ ಬಯಲು ಪ್ರದೇಶದಲ್ಲಿ ಹೇರಳವಾಗಿರುತ್ತದೆ. ಸುಲಭವಾಗಿ ದೊರೆಯುವ ಈ ಹುಲ್ಲು ವೈಜ್ಞಾನಿಕವಾಗಿ ಹಾಗೂ ಧಾರ್ಮಿಕವಾಗಿ ಅತ್ಯಂತ ಪವಿತ್ರವಾದ ಸಸ್ಯ. ಸೈನೋಡಾನ್ ಡ್ಯಾಕ್ಟಿಲಾನ್ ಎಂದು ಕರೆಯಲ್ಪಡುವ ಈ ಸಣ್ಣ ಹುಲ್ಲನ್ನು ಆಯುರ್ವೇದ ಔಷಧ ವಿಧಾನಗಳಲ್ಲಿ ವಿಶೇಷವಾಗಿ ಬಳಸಲಾಗುವುದು. ಗರಿಕೆ ಹುಲ್ಲಿನಲ್ಲಿ ವಿಶೇಷವಾದ ಔಷಧೀಯ ಗುಣ ಇರುವುದರಿಂದ ಸಾಕಷ್ಟು ಅನಾರೋಗ್ಯಗಳಿಗೆ ಸುಲಭ ಔಷಧವನ್ನಾಗಿ ಬಳಸಬಹುದು. ಇದರಲ್ಲಿ ಇರುವ ಕ್ಯಾಲ್ಸಿಯಂ, ರಂಜಕ, ಫೈಬರ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಸಮೃದ್ಧವಾಗಿರುತ್ತವೆ.
ಸಕ್ಕರೆ ಮಟ್ಟ ಸಮತೋಲನದಲ್ಲಿ ಇರುತ್ತವೆ:
ಇತ್ತೀಚಿನ ದಿನಗಳಲ್ಲಿ ನಡೆಸಿದ ಅನೇಕ ಸಂಶೋಧನಾ ಅಧ್ಯಯನಗಳು ಗರಿಕೆ/ದುರ್ವಾ ಹುಲ್ಲು ಸಮೃದ್ಧವಾದ ಗ್ಲೈಸೆಮಿಕ್ ಸಾಮಥ್ರ್ಯವನ್ನು ಹೊಂದಿದೆ ಎನ್ನುವುದನ್ನು ಸಾಭೀತು ಪಡಿಸಿದೆ. ಇದು ಮಧುಮೇಹ ಹೊಂದಿರುವವರಿಗೆ ಅದ್ಭುತ ಆರೈಕೆ ಮಾಡುವುದು. ಮಧುಮೇಹ ರೋಗಿಗಳಲ್ಲಿ ಇರುವ ಹೈಪೋಗ್ಲಿಸಿಮಿಕ್ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಅವರಲ್ಲಿ ಇರುವ ಇತರ ಅನಾರೋಗ್ಯ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ.
ರೋಗನಿರೋಧಕ ಶಕ್ತಿ ಹೆಚ್ಚುವುದು:
ವ್ಯಕ್ತಿಯ ದೇಹದಲ್ಲಿ ಉತ್ತಮವಾದ ರೋಗನಿರೋಧಕ ಶಕ್ತಿ ಇದ್ದರೆ ಸಾಕಷ್ಟು ಅನಾರೋಗ್ಯಗಳಿಂದ ದೂರ ಇರಬಹುದು. ಗರಿಕೆ ಹುಲ್ಲಿನಲ್ಲಿ ಸಿಡಿಪಿಎಫ್(ಸಿನೊಡಾನ್ ಡ್ಯಾಕ್ಟಿಲಾನ್ ಪ್ರೋಟೀನ್) ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದು. ಇಮ್ಯೂನೊಮೊಡ್ಯುಲೇಟರಿ ಚಟುವಟಿಕೆಯನ್ನು ತೀವ್ರಗೊಳಿಸುವುದು. ಆಗ ನಮ್ಮ ದೇಹವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಜೊತೆಗೆ ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು. ಹಾಗಾಗಿ ವಾರದಲ್ಲೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಗರಿಕೆ ಹುಲ್ಲಿನ ಕಷಾಯ ಅಥವಾ ರಸವನ್ನು ಸೇವಿಸುವುದು ಉತ್ತಮ.
ಮಹಿಳೆಯರ ಉತ್ತಮ ಆರೋಗ್ಯಕ್ಕೆ:
ಮಹಿಳೆಯರು ಪುರುಷರಿಗಿಂತ ಸೂಕ್ಷ್ಮ ಆರೋಗ್ಯವನ್ನು ಹೊಂದಿರುತ್ತಾರೆ. ಮಹಿಳೆಯರಲ್ಲಿ ಗರ್ಭಕೋಶದ ಸಮಸ್ಯೆ, ಮೂತ್ರದಲ್ಲಿ ಸೋಂಕು, ದುರ್ವಾಸನೆಯಿಂದ ಕೂಡಿದ ಬಿಳಿಸ್ರಾವಗಳು ಪದೇ ಪದೇ ಕಾಡುವ ಸಾಧ್ಯತೆಗಳು ಹೆಚ್ಚು. ಇಂತಹ ಸಮಸ್ಯೆ ಇರುವ ಮಹಿಳೆಯರು ಗರಿಕೆ ಹುಲ್ಲಿನ ರಸವನ್ನು ಮೊಸರಿನಲ್ಲಿ ಮಿಶ್ರಮಾಡಿ ಸೇವಿಸಬೇಕು. ಗಣನೀಯವಾಗಿ ಈ ವಿಧಾನವನ್ನು ಅನುಸರಿಸಿದರೆ ಬಿಳಿಸ್ರಾವ, ಮೂತ್ರದ ಸೋಂಕು, ಗರ್ಭಕೋಶದ ಸಮಸ್ಯೆಗಳಾದ ಪಿಸಿಓಡಿ (ಪಾಲಿಸಿಸ್ಟಿಕ್ ಓವೆರೆಸಿ) ಸಮಸ್ಯೆಗಳು ನೈಸರ್ಗಿಕವಾಗಿಯೇ ಪರಿಹಾರ ಕಂಡುಕೊಳ್ಳುತ್ತವೆ. ಪ್ರೊಲ್ಯಾಕ್ಟಿನ್ ಹಾರ್ಮೋನ್ಗಳ ಉತ್ಪಾದನೆಗೆ ಹೆಚ್ಚಿನ ಪ್ರಚೋದನೆ ನೀಡುವುದರಿಂದ ಬಾಣಂತಿಯರು ಇದನ್ನು ಸೇವಿಸಿದರೆ ಹಾಲಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.
ಜೀರ್ಣಕ್ರಿಯೆಯ ಸುಧಾರಣೆ:
ಅನುಚಿತ ಆರಾಹ ಸೇವನೆ, ಪೋಷಕಾಂಶಗಳ ಕೊರತೆ, ನಾರಿನಂಶದ ಕೊರತೆ, ಜಂಕ್ ಆಹಾರಗಳು ಸೇರಿದಂತೆ ಅನೇಕ ಕಾರಣಗಳಿಂದ ಬಹುತೇಕ ಜನರು ಜೀರ್ಣಕ್ರಿಯೆಯ ಸಮಸ್ಯೆಯನ್ನು ಅನುಭವಿಸುತ್ತಾರೆ. ನಿತ್ಯವೂ ಗರಿಕೆ ಹುಲ್ಲಿನ ರಸ ಅಥವಾ ಇತರ ಆಹಾರ ಪದಾರ್ಥಗಳಲ್ಲಿ ಗರಿಕೆಯ ರಸವನ್ನು ಮಿಶ್ರಗೊಳಿಸಿ ಸೇವಿಸಬೇಕು. ಹೀಗೆ ಮಾಡುವುದರಿಂದ ಜೀರ್ಣ ಕ್ರಿಯೆ ಮತ್ತು ಕರುಳಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಬಲಬದ್ಧತೆಯನ್ನು ಸಹ ಇದು ಗುಣಪಡಿಸುವುದು. ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕಲು ಸಹ ಸಹಾಯ ಮಾಡುವುದು. ಅಲ್ಲದೆ ಆಮ್ಲೀಯತೆಯನ್ನು ಸಹ ಕಡಿಮೆ ಮಾಡುತ್ತದೆ.
ಮೌಖಿಕ ಸಮಸ್ಯೆಗಳನ್ನು ನಿವಾರಿಸುತ್ತದೆ:
ಗರಿಕೆಯಲ್ಲಿ ಫ್ಲೈವೋನೈಡ್ ಎಂಬ ಆರೋಗ್ಯಕರ ಅಂಶವು ಸಮೃದ್ಧವಾಗಿರುತ್ತದೆ. ಇದು ಹೊಟ್ಟೆಯೊಳಗೆ ಆಗುವ ಅಲ್ಸರ್ನಂತಹ ಸಮಸ್ಯೆಗಳನ್ನು ತಡೆಯುವುದು. ಹುಣ್ಣುಗಳು ಬಹುಬೇಗ ಗುಣಮುಖವಾಗುವಂತೆ ಮಾಡುತ್ತದೆ. ಪದೇ ಪದೇ ಶೀತ ಹಾಗೂ ಕಫದಂತಹ ಸಮಸ್ಯೆ ಹೊಂದಿದವರು ಸಹ ಗರಿಕೆಯನ್ನು ಗಣನೀಯವಾಗಿ ಸೇವಿಸಬೇಕು. ಆಗ ಶೀತ ಮತ್ತು ಕಫದ ಸಮಸ್ಯೆಯು ಬಹುಬೇಗ ಕಡಿಮೆಯಾಗುವುದು. ಯಾರು ಬಾಯಿಯ ದುರ್ವಾಸನೆ, ಒಸಡಿನಲ್ಲಿ ರಕ್ತಸ್ರಾವದಂತಹ ಸಮಸ್ಯೆ ಹೊಂದಿರುತ್ತಾರೆ. ಅವರು ಗರಿಕೆಯ ರಸವನ್ನು ಸೇವಿಸಬಹುದು. ಇದು ಪರಿಣಾಮಕಾರಿ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸುವುದು.
ಚರ್ಮದ ಸಮಸ್ಯೆಗಳು:
ಧೂಳು, ಆನುವಂಶಿಕತೆ ಹಾಗೂ ಪೋಷಕಾಂಶಗಳ ಕೊರತೆಯಿಂದ ತ್ವಚೆಯು ಶುಷ್ಕತೆ, ತುರಿಕೆ, ಉರಿಯೂತ, ನಂಜುಗಳಂತಹ ಸಮಸ್ಯೆಗಳಿಗೆ ಗರಿಕೆಯ ರಸ ರಾಮಬಾಣವಾಗುವುದು. ಗರಿಕೆಯಲ್ಲಿರುವ ಔಷಧೀಯ ಗುಣವು ಉರಿಯೂತ, ನಂಜುನಿರೋಧಕ ಗುಣಗಳನ್ನು ಒಳಗೊಂಡಿದೆ. ಇದು ತುರಿಕೆ, ದದ್ದು, ಎಸ್ಜಿಮಾ ಸೇರಿದಂತೆ ಇನ್ನಿತರ ಚರ್ಮ ಸಂಬಂಧಿ ಅನಾರೋಗ್ಯಗಳನ್ನು ಸಹ ಗುಣಮುಖ ಮಾಡುವುದು. ಚರ್ಮದ ಮೇಲೆ ಕಾಣಿಸಿಕೊಳ್ಳುವ ಗಾಯ, ಕುಷ್ಠರೋಗ, ತುರಿಕೆಗಳಂತಹ ಸಮಸ್ಯೆ ಇದ್ದರೆ ಅರಿಶಿನ ಪುಡಿಯೊಂದಿಗೆ ಗರಿಕೆಯ ರಸವನ್ನು ಸೇರಿಸಿ, ಅವುಗಳ ಮೇಲೆ ಲೇಪಿಸಿಕೊಳ್ಳಬೇಕು. ಗಣನೀಯವಾಗಿ ಈ ಕ್ರಮವನ್ನು ಅನುಸರಿಸುವುದರಿಂದ ಸಮಸ್ಯೆಯು ನೈಸರ್ಗಿಕ ರೀತಿಯಲ್ಲಿ ಗುಣಮುಖವಾಗುವುದು.
ರಕ್ತ ಶುದ್ಧೀಕರಣಕ್ಕೆ:
ಗರಿಕೆಯ ಹುಲ್ಲು ನೈಸರ್ಗಿಕವಾಗಿಯೇ ರಕ್ತ ಶುದ್ಧೀಕಾರಕವಾಗಿ ಕಾರ್ಯನಿರ್ವಹಿಸುವುದು. ರಕ್ತಕಣಗಳು ಆರೋಗ್ಯಕರವಾಗಿರುವಂತೆ ಕಾಪಾಡುವುದು. ಗಾಯ ಮತ್ತು ಅತಿಯಾದ ಮುಟ್ಟಿನ ಸ್ರಾವವನ್ನು ಕಡಿಮೆ ಮಾಡಲು ಗರಿಕೆಯ ಮೊರೆ ಹೋಗಬಹುದು. ಇದು ದೇಹದಿಂದ ಉಂಟಾಗುವ ರಕ್ತ ನಷ್ಟವನ್ನು ಬಹುಬೇಗ ನಿಯಂತ್ರಿಸುವುದು. ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದರ ಜೊತೆಗೆ ಹಿಮೋಗ್ಲೋಬಿನ್ ಮಟ್ಟ ಹೆಚ್ಚುವಂತೆ ಮಾಡಿ, ರಕ್ತ ಹೀನತೆಯನ್ನು ತಡೆಯುವುದು.
ಹೃದಯದ ಆರೋಗ್ಯ ಕಾಪಾಡುವುದು:
ನಿಯಮಿತವಾಗಿ ಗರಿಕೆ ಹುಲ್ಲಿನ ರಸವನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡಬಹುದು. ಹೃದಯದ ಕಾರ್ಯವು ಆರೋಗ್ಯಕರವಾಗಿ ನಡೆಯುವುದು. ಅಲ್ಲದೆ ಪ್ರಬಲವಾದ ಆಂಟಿ-ಆರ್ಹೆತ್ಮಿಕ್ ಏಜಂಟ್ ಅಂತೆಯೇ ಕೆಲಸ ನಿರ್ವಹಿಸುವುದು. ಹೃದಯ ಹಾಗೂ ರಕ್ತ ಸಂಚಾರಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಡೆಯುವುದು.
ಕ್ರಿಯಾಶೀಲವಾಗಿ ಇರಿಸುವುದು:
ಗರಿಕೆ ಹುಲ್ಲಿನಲ್ಲಿ ಅಸಂಖ್ಯಾತ ಪೋಷಕಾಂಶಗಳಿವೆ. ಅವು ಶಕ್ತಿಯುತವಾದ ಆರೋಗ್ಯವನ್ನು ಕರುಣಿಸುತ್ತವೆ. ನಿತ್ಯದ ಆರೋಗ್ಯಕ್ಕೆ ಸಂಂಬಂಧಿಸಿದಂತೆ ನಿದ್ರಾಹೀನತೆ, ಆಯಾಸ, ನರ ದೌರ್ಬಲ್ಯ, ಜೀರ್ಣ ಕ್ರಿಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವುದು. ಮಿದುಳು ಸಹ ಹೆಚ್ಚು ಆರೋಗ್ಯಕರವಾದ ಕ್ರಿಯೆಯನ್ನು ಕೈಗೊಳ್ಳುವುದು. ದೇಹ ಮತ್ತು ಮನಸ್ಸು ಎರಡು ಪುನರುಜ್ಜೀವನ ಪಡೆದುಕೊಂಡು ಚೈತನ್ಯವನ್ನು ಹೆಚ್ಚಿಸುವುದು.
ಗರಿಕೆಯ ರಸ:
ಗರಿಕೆ /ದುರ್ವಾ ಹುಲ್ಲನ್ನು ಸ್ವಲ್ಪ ತೆಗೆದುಕೊಂಡು, ಶುದ್ಧವಾದ ನೀರಿನಲ್ಲಿ ತೊಳೆಯಿರಿ. ನಂತರ ಸ್ವಲ್ಪ ನೀರನ್ನು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಪೇಸ್ಟ್ ಅನ್ನು ಸೋಸಿಕೊಂಡು ನಂತರ ಒಂದು ಚಮಚ ಬೆಚ್ಚಗಿನ ನೀರನ್ನು ಸೇರಿಸಿ ಕುಡಿಯಿರಿ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನಿತ್ಯವೂ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಗುಣಮುಖವಾಗುವುದು. ಇದರಿಂದ ಆರೋಗ್ಯದಲ್ಲಿ ಯಾವುದೇ ಅಡ್ಡ ಪರಿಣಾಮ ಉಂಟಾಗದು.