ತೆಂಗಿನ ಸಿಪ್ಪೆ ಅಥವಾ ನಾರು ಎಂದು ಕರೆಸಿಕೊಳ್ಳುವ ತೆಂಗಿನ ಕಾಯಿಯ ಹೊರ ಭಾಗ ಕೇವಲ ಒಲೆ ಹಚ್ಚಲು ಮಾತ್ರ ಉಪಯೋಗಕ್ಕೆ ಬರುತ್ತದೆ ಎಂದು ಹಲವರು ತಿಳಿದುಕೊಂಡಿದ್ದಾರೆ. ಆದರೆ ಅವುಗಳ ಆರೋಗ್ಯ ಪ್ರಯೋಜನಗಳು ಮಾತ್ರ ಜನರ ನಿರೀಕ್ಷೆಗೂ ಮೀರಿ ಅತಿ ಎತ್ತರದಲ್ಲಿವೆ. ಇಂದಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಬಗೆಹರಿಸಲಾರದ ಅದೆಷ್ಟೋ ಬಗೆಯ ಆರೋಗ್ಯ ಸಮಸ್ಯೆಗಳಿಗೆ ತೆಂಗಿನ ನಾರು ಪರಿಹಾರವನ್ನು ಒದಗಿಸುತ್ತದೆ.
ತೆಂಗಿನ ನಾರಿನಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಜನರು ಕಂಡುಕೊಳ್ಳಬಹುದು. ಪ್ರಮುಖವಾಗಿ ಮೂಲವ್ಯಾಧಿ ಸಮಸ್ಯೆಗೆ ಇದರಿಂದ ಸಾಕಷ್ಟು ಪರಿಣಾಮಕಾರಿಯಾದ ಪರಿಹಾರ ಸಿಗುತ್ತದೆ. ಸ್ವಲ್ಪ ಬುದ್ಧಿ ಖರ್ಚು ಮಾಡಿದರೆ ಇದರ ಒಂದೊಂದೇ ಉಪಯೋಗಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಸದ್ಯ ಈ ಲೇಖನದಲ್ಲಿ ಮೂಲವ್ಯಾದಿ ಸಮಸ್ಯೆಗೆ ಸಂಬಂಧ ಪಟ್ಟಂತೆ ತೆಂಗಿನ ನಾರಿನ ಉಪಯೋಗಗಳನ್ನು ಮತ್ತು ಇನ್ನಿತರ ಕೆಲವು ಆರೋಗ್ಯ ಸಮಸ್ಯೆಗಳಿಗೆ ತೆಂಗಿನ ನಾರನ್ನು ಯಾವ ರೀತಿ ಉಪಯೋಗಿಸಿಕೊಳ್ಳಬಹುದು ಎಂಬ ಬಗ್ಗೆ ನೋಡೋ
ತೆಂಗಿನ ಕಾಯಿಯಿಂದ ನಮಗೆ ಸಿಗುವ ಆರೋಗ್ಯದ ಲಾಭಗಳು
ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯಲ್ಲಿ ನಾರಿನ ಅಂಶ ಅತ್ಯಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಇಲ್ಲವಾಗುತ್ತವೆ. ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವ ಜನರು ತೆಂಗಿನ ಎಣ್ಣೆಯ ಉಪಯೋಗ ಮಾಡಿಕೊಂಡು ತಮ್ಮ ದೀರ್ಘ ಕಾಲದ ಪೈಲ್ಸ್ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.
ತೆಂಗಿನ ನಾರು ಅಥವಾ ಸಿಪ್ಪೆ
ಬಾಯಿಯ ಸ್ವಚ್ಛತೆಗೆ ಪ್ರಮುಖ ಆದ್ಯತೆ ಕೊಡುವವರು ಬಹುಶಹ ತೆಂಗಿನ ಸಿಪ್ಪೆಯನ್ನು ಬಿಸಾಡುವುದಿಲ್ಲ ಎನಿಸುತ್ತದೆ. ಏಕೆಂದರೆ ತೆಂಗಿನ ನಾರನ್ನು ಹಲ್ಲುಗಳ ಸ್ವಚ್ಛತೆಗೆ ಬಳಕೆ ಮಾಡುತ್ತಾರೆ. ನಿಮ್ಮ ಹಲ್ಲುಗಳ ಹೊಳಪು ಹೆಚ್ಚಿಸುವಂತೆ ತೆಂಗಿನ ನಾರು ಕೆಲಸ ಮಾಡುತ್ತದೆ. ಹಳದಿ ಬಣ್ಣದಲ್ಲಿ ಕರೆಗಟ್ಟಿರುವ ಹಲ್ಲುಗಳನ್ನು ಮತ್ತೆ ಬಿಳಿ ಬಣ್ಣಕ್ಕೆ ತಿರುಗಿಸುವಲ್ಲಿ ತೆಂಗಿನ ಎಣ್ಣೆಯ ಪಾತ್ರವನ್ನು ಮರೆಯುವಂತಿಲ್ಲ.
ರಕ್ತ ಸಂಚಾರಕ್ಕೆ ಸಂಬಂಧ ಪಟ್ಟ ಹಲವಾರು ಅಸ್ವಸ್ಥತೆಗಳನ್ನು ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಪರಿಹಾರ ಮಾಡುತ್ತದೆ. ತೆಂಗಿನ ಸಿಪ್ಪೆಯನ್ನು ಸುಟ್ಟ ಬೂದಿಯನ್ನು ಕಾಲರಾ ಸಮಸ್ಯೆಗೆ ಮತ್ತು ಬಿಕ್ಕಳಿಕೆ ಸಮಸ್ಯೆಗೆ ಬಳಕೆ ಮಾಡಬಹುದು. ಇಷ್ಟೇ ಅಲ್ಲದೆ ಒಣಗಿದ ತೆಂಗಿನ ನಾರಿನ ಸಿಪ್ಪೆಯ ಪುಡಿಯನ್ನು ಜನರು ಗಿಡಗಳಿಗೆ ಗೊಬ್ಬರವನ್ನಾಗಿ ಉಪಯೋಗಿಸುತ್ತಾರ
ಮೂಲವ್ಯಾಧಿ ಅಥವಾ ಮೊಳೆ ರೋಗಕ್ಕೆ ತೆಂಗಿನ ಎಣ್ಣೆಯ ಉಪಯೋಗ
ದೀರ್ಘ ಕಾಲದಿಂದ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವ ಜನರು ತೆಂಗಿನ ಎಣ್ಣೆಯನ್ನು ತಮ್ಮ ಸಮಸ್ಯೆಗೆ ಪರಿಹಾರವನ್ನಾಗಿ ಉಪಯೋಗಿಸಿಕೊಳ್ಳಬಹುದು. ಕೇವಲ 2 ರಿಂದ 3 ದಿನಗಳಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿ ಲಾಭವನ್ನು ಪಡೆದುಕೊಳ್ಳಬಹುದು. ಮಲ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಉಂಟಾಗುವ ಅಧಿಕ ರಕ್ತ ಸ್ರಾವ ಅನುಭವಿಸುತ್ತಿರುವ ಜನರು ಸಹ ತೆಂಗಿನ ಎಣ್ಣೆಯಿಂದ ಕೇವಲ ಒಂದು ದಿನದಲ್ಲಿ ಪರಿಹಾರವನ್ನು ನಿರೀಕ್ಷೆ ಮಾಡಬಹುದು.
ಮೂಲವ್ಯಾಧಿ ಸಮಸ್ಯೆಯಿಂದ ರಕ್ತ ಸ್ರಾವವಾಗುತ್ತಿರುವವರು ಏನು ಮಾಡಬಹುದು?
ಮಲ ವಿಸರ್ಜನೆ ಸಂದರ್ಭದಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅಂತಹವರಿಗೆ ಪೈಲ್ಸ್ ಸಮಸ್ಯೆ ಇರುತ್ತದೆ ಎಂದು ಹೇಳುತ್ತಾರೆ. ಇದನ್ನು ನಿರ್ಲಕ್ಷ ಮಾಡಿ ಹಾಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಾಕಷ್ಟು ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಅಪ್ಪಿ ತಪ್ಪಿ ನೀವೇನಾದರೂ ಇಂತಹ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ತೆಂಗಿನ ನಾರಿನಿಂದ ತಯಾರು ಮಾಡಿದ ಬೂದಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿಕೊಂಡು ಕುಡಿಯಿರಿ. ಮುಟ್ಟಿನ ಪ್ರಕ್ರಿಯೆಯಲ್ಲಿರುವ ಮಹಿಳೆಯರಿಗೂ ಕೂಡ ಈ ಪ್ರಯೋಗ ಸಾಕಷ್ಟು ಅನುಕೂಲಕಾರಿಯಾಗಿ ಕೆಲಸ ಮಾಡುತ್ತದೆ. ಬಿಕ್ಕಳಿಕೆ, ವಾಕರಿಕೆ, ಕಾಲರಾ ಜ್ವರ ಅನುಭವಿಸುತ್ತಿರುವ ಜನರಿಗೂ ಸಹ ಇದರಿಂದ ಸಾಕಷ್ಟು ಪರಿಹಾರವಿ
ಕೂದಲನ್ನು ಕಪ್ಪಾಗಿಸುತ್ತದೆ:
ಮೊದಲು ಬಾಣಲೆಯಲ್ಲಿ ತೆಂಗಿನ ನಾರು ಹಾಕಿ ಕಪ್ಪಾಗುವವರೆಗೆ ಹುರಿಯಿರಿ. ತಣ್ಣಗಾದ ನಂತರ ಪುಡಿ ಮಾಡಿ. ಅದಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲ.
ಸೊಳ್ಳೆ:
ಸಾಂಪ್ರದಾಯಿಕ ಹಿತ್ತಾಳೆ ಪಾತ್ರೆಯಲ್ಲಿ ತೆಂಗಿನ ನಾರು ಹಾಕಿ ಅದಕ್ಕೆ ಸ್ವಲ್ಪ ಕರ್ಪೂರ ಹಾಕಿ ಸುಟ್ಟರೆ ಮನೆಯಲ್ಲಿದ್ದ ದುರ್ವಾಸನೆ ಮಾಯವಾಗುತ್ತದೆ. ಜೊತೆಗೆ ಹೀಗೆ ಮಾಡುವುದರಿಂದ ಮನೆಯಲ್ಲಿರುವ ಸೊಳ್ಳೆಗಳೂ ಓಡಿ ಹೋಗುತ್ತವೆ.
ಅಡುಗೆ ಪಾತ್ರೆಗಳ ಸ್ವಚ್ಛ:
ತೆಂಗಿನ ನಾರನ್ನು ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಕ್ರಬ್ಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಇವುಗಳಿಂದ ಪರಿಸರಕ್ಕೂ ಹಾನಿ ಆಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬ್ಗಳ ಬದಲಿಗೆ ತೆಂಗಿನ ನಾರನ್ನು ಬಳಸಿ. ನಿಮ್ಮ ವೆಚ್ಚವು ಕಡಿಮೆಯಾಗುತ್ತದೆ ಮತ್ತು ಪ್ರಕ್ರಿಯೆಯು ಸಹ ಉತ್ತಮವಾಗಿರುತ್ತದೆ. ನಿಂಬೆ ರಸವನ್ನು ತೆಂಗಿನ ನಾರಿಗೆ ಹಚ್ಚಿಕೊಂಡು ಪಾತ್ರೆಗಳನ್ನು ಸ್ವಚ್ಛಗೊಳಿಸಿ. ಆಗ ನಿಮ್ಮ ಪಾತ್ರೆಗಳು ಹೊಳೆಯುತ್ತಿರುತ್ತವೆ.