ಹೆಚ್ಚಿನ ಜನರು ಶುಂಠಿಯನ್ನು ಅದರ ಸಿಪ್ಪೆ ತೆಗೆದು ಬಳಸುತ್ತಾರೆ. ಕೆಲವರು ಶುಂಠಿಯ ಸಿಪ್ಪೆಯನ್ನು ತೆಗೆದು ಶುಂಠಿ ಚಹಾದಲ್ಲಿ ಹಾಕುತ್ತಾರೆ, ಆದರೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ತಜ್ಞರ ಪ್ರಕಾರ, ಈ ಅದ್ಭುತ ಗಿಡಮೂಲಿಕೆಯ ಹೆಚ್ಚುವರಿ ಪ್ರಯೋಜನಗಳನ್ನು ನೀವು ಬಯಸಿದರೆ, ನಂತರ ಸಿಪ್ಪೆಯೊಂದಿಗೆ ಇದನ್ನು ಬಳಸಿ. ಸಿಪ್ಪೆ ತೆಗೆದು ಶುಂಠಿ ಸೇವಿಸುವುದರಿಂದ ಅದರ ಸಂಪೂರ್ಣ ಲಾಭ ಸಿಗುವುದಿಲ್ಲ.
ಕೆಮ್ಮಿಗೆ ಪರಿಣಾಮಕಾರಿ
ಶುಂಠಿಯು ಕೆಮ್ಮನ್ನು ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿ. ಇದಕ್ಕೆ ಶುಂಠಿಯ ಸಿಪ್ಪೆಯನ್ನು ಸಂಗ್ರಹಿಸಿ, ಅದನ್ನು ಮೊದಲ ಬಿಸಿಲಲ್ಲಿ ಒಣಗಿಸಿ ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಕೆಮ್ಮು ಸಮಸ್ಯೆ ಉಂಟಾದಾಗಲೆಲ್ಲ ಶುಂಠಿ ಪುಡಿ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಬಿಸಿ ನೀರಿನಲ್ಲಿ ಸೇವಿಸಿ. ಕೆಮ್ಮುವಿಕೆಯಿಂದ ತಕ್ಷಣ ನೆಮ್ಮದಿ ಸಿಗುತ್ತದೆ.
ತರಕಾರಿಯ ಸುವಾಸನೆಗಾಗಿ
ಶುಂಠಿಯ ಸಿಪ್ಪೆಯನ್ನು ಬಳಸಿ ರುಚಿಕರವಾದ ತರಕಾರಿಗಳ ಅಡುಗೆ ತಯಾರಿಮಾಡಬಹುದು. ಹೂಕೋಸು, ಎಲೆಕೋಸು ಮುಂತಾದ ತರಕಾರಿಗಳನ್ನು ಹಬೆಯಲ್ಲಿ ಬೇಯಿಸಿಕೊಳ್ಳುವ ಮೊದಲು ಶುಂಠಿಯ ಸಿಪ್ಪೆಯನ್ನು ಸೇರಿಸಿಕೊಳ್ಳಬಹುದು. ತರಕಾರಿ ಜೊತೆ ಶುಂಠಿ ಸಿಪ್ಪೆ ಹಾಕುವುದರಿಂದ ತರಕಾರಿ ರುಚಿಯೊಂದಿಗೆ ಸುವಾಸನೆ ಸಹ ಹೊಂದಿರಲಿದೆ. ಇದು ಆರೋಗ್ಯಕ್ಕೂ ಉತ್ತಮವಾಗಿದೆ.
ಶುಂಠಿ ಸಿಪ್ಪೆ ಚಹಾ
ಶುಂಠಿ ಚಹಾವನ್ನು ಹೆಚ್ಚಿನವರು ಕುಡಿಯಲು ಇಷ್ಟಪಡುತ್ತಾರೆ. ಇದರಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ಸ್ ಗುಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿಯ ಸಿಪ್ಪೆಯನ್ನು ತೊಳೆದು ನೀರಿನಲ್ಲಿ ಕುದಿಸಿ ನಂತರ ಟೀ ಕುಡಿಯಿರಿ.ಇದು ಆರೋಗ್ಯಕ್ಕೂ ಸಹ ಉತ್ತಮವಾಗಿದೆ.
ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ
ಶುಂಠಿ ಸಿಪ್ಪೆಯು ಹೊಟ್ಟೆಯ ತೊಂದರೆಗಳನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ. ಶುಂಠಿಯ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ಹೊಟ್ಟೆ ನೋವು ಬರುವುದಿಲ್ಲ.
ಸೂಪ್ಗಳಲ್ಲಿ ಬಳಸಿ
ಶುಂಠಿ ಸಿಪ್ಪೆಯನ್ನು ಸೂಪ್ಗಳಲ್ಲಿ ಬಳಸಬಹುದು. ಇದರಿಂದ ಸೂಪ್ನ ರುಚಿ ದುಪ್ಪಟ್ಟಾಗುತ್ತದೆ. ತರಕಾರಿಗಳನ್ನು ಶುಂಠಿ ಸಿಪ್ಪೆಯೊಂದಿಗೆ ಕುದಿಸಿ, ನಂತರ ಸೂಪ್ನೊಂದಿಗೆ ಕುಡಿಯಿರಿ.