ಬಾಗಲಕೋಟೆ :ಕರ್ನಾಟಕ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹಲವಾರು ದಶಕಗಳಿಂದ ಸಂವಿಧಾನದ ಆಶಯಗಳ ಸಹಕಾರಕ್ಕಾಗಿ ಜಾತ್ಯತೀತ ಸಮಾಜಕ್ಕಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡುತ ಬಂದಿದೆ.
ದಲಿತರ ಮೇಲೆ ಹಿಂದುಳಿದ ಅಲ್ಪಸಂಖ್ಯಾತರ ಮೇಲೆ ಬಡವರ ಮಹಿಳೆಯರ ಮೇಲೆ ನಡೆಯುವ ಯಾವುದೇ ರೀತಿಯ ಅನ್ಯಾಯಗಳನ್ನು ಪ್ರತಿಭಟಿಸುತ್ತಾ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಪತ್ರಿಕಾ ಭವನದಲ್ಲಿ ಡಿಎಸ್ಎಸ್ ಸಂಘದಿಂದ ಸುದ್ದಿಗೋಷ್ಠಿ ನಡೆಯಿತು. ಕೇಂದ್ರ ಹಾಗೂ ರಾಜ್ಯದಲ್ಲಿ ಆರ್ ಎಸ್ ಎಸ್ ರಾಜಕೀಯ ಭಾಗವಾದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಡೀ ದೇಶವೇ ಅಪಾಯ ಎದುರಿಸುವಂತೆ ಆಗಿದೆ.
ದೆಹಲಿ ಅಂತ ಕೇಂದ್ರ ಸ್ಥಾನದ ಜಂತರ್ ಮಂತರ್ ಪ್ರದೇಶದಲ್ಲಿ ಸಂಘ ಪರಿವಾರಕ್ಕೆ ಸೇರಿದ ವಿಭಿನ್ನ ಸಂಘಟನೆಗಳು ಸಂವಿಧಾನ ಪ್ರತಿ ಸುಡುವ ಮೂಲಕ ದೇಶದ್ರೋಹ ಕುರ್ತದಲ್ಲಿ ಭಾಗಿಯಾಗಿದ್ದು ಸಂವಿಧಾನದತ್ತವಾಗಿದೆ.ಮಂತ್ರಿ ಯಾದವರು ಸಂವಿಧಾನ ಬದಲಿಸಿ ಬದಲಿಸಿಕ್ಕಾಗಿ ಅಧಿಕಾರಕ್ಕೆ ಬಂದಿರುವುದು ಎಂದು ಹೇಳುವುದು.
ಮತ್ತೊಬ್ಬ ನಾಯಕ 2024ಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ಖಂಡಿತಾ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಬಹುದು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಬರೆದಿಲ್ಲ ಎಂದು ಹೇಳುತ್ತಾ ಜನರ ಭಾವನೆಗೆ ಕೆರಳಿಸುವುದು ಇಂಥ ಹೇಳಿಕೆಗಳಿಂದ ಸಂವಿಧಾನಕ್ಕೆ ದಿನನಿತ್ಯ ಅವಮಾನಗೊಳಿಸುತ್ತಿದ್ದಾರೆ ಇದು ನಾಚಿಕೆಗೇಡಿನ ಸಂಗತಿ.
ಅಧಿಕಾರ ಅವಧಿಯಲ್ಲಿ ದೇಶದ ಬೇರೆ ಬೇರೆ ಕಡೆ ದಲಿತ ಅಲ್ಪಸಂಖ್ಯಾತರ ಮತ್ತು ಮಹಿಳೆಯರ ಮೇಲೆ ಹಲ್ಲೆ ಮಾಡಿ ಆತಂಕ ಸೃಷ್ಟಿಸುತ್ತಿದ್ದಾರೆ.
ಸರ್ಕಾರಿ ಹುದ್ದೆಗಳನ್ನು ತುಂಬದೆ ಉದ್ಯೋಗ ಸೃಷ್ಟಿ ಮಾಡದೆ ಕೆಳವರ್ಗದ ಯುವಕ ಯುವಕೀಯರ ಬದುಕು ಅತಂತ್ರ ಮಾಡಿ ಏಕರೂಪ ನಾಗರಿಕತೆ ಹಾಗೂ ಖಾಸಗಿಕರಣ ಹೆಸರಿನಲ್ಲಿ ಮೀಸಲಾತಿ ವಿರುದ್ಧ ಕುತಂತ್ರ ನಡೆಸುತ್ತಿದ್ದಾರೆ.
1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಸಿದ್ದುಪಡಿ ತಂದು ಸಣ್ಣ ಸಣ್ಣ ರೈತರು ಹಾಗೂ ಮಾಧ್ಯಮ ವರ್ಗದ ರೈತರು ಬೀದಿಗೆ ತಳ್ಳುವ ಪುನಾರ ಮಾಡಿದ್ದು.
ಅಲ್ಲದೆ ಯಾವುದೇ ಪೂರ್ವ ತಯಾರಿ ಇಲ್ಲದೆ ಪರ್ಯಾಯ ವ್ಯವಸ್ಥೆ ಇಲ್ಲದೆ ಇಡೀ ದೇಶವೇ ಜಾರಿಗೆ ಬರುವಂತ ರಾತ್ರೋರಾತ್ರಿ ನೋಟು ಅಮಾನ್ಯೀಕರಣ ಗೊಳಿಸಿದ್ದು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಕುವೆಂಪು ಅವರ ಚಿಂತನೆ ಇರತಕ್ಕಂಥ ಪಠ್ಯ ಪುಸ್ತಕಗಳನ್ನು ರದ್ದುಪಡಿಸಿ ಮುಂದಿನ ಪೀಳಿಗೆ ಇವರ ಬಗ್ಗೆ ತಿಳಿಯದಂತೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಒಟ್ಟಾರೆ ಈ ದೇಶಕ್ಕೆ ಬಿಜೆಪಿ ಮಾರಕವಾಗಿ ಹೊರಹೊಮ್ಮಿದೆ.
2023 ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನ ಮತ್ತು ದಲಿತರ ವಿರೋಧಿ ಭಾರತೀಯ ಜನತಾ ಪಕ್ಷಕ್ಕೆ ಮತವನ್ನು ನೀಡದೆ ಸಂವಿಧಾನಕ್ಕೆ ಗೌರವ ನೀಡುವ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಡಿಎಸ್ಎಸ್ ಸಂಚಾಲಕರಾದ ಪರಶುರಾಮ ಕಾಂಬಳೆ ಹೇಳಿದರು.
ಇದೇ ಸಂದರ್ಭದಲ್ಲಿ ಬಸವರಾಜ ದೊಡ್ಡಮನಿ. ಸದಾಶಿವ ಐನಾಪುರ. ಪರಮಾನಂದ ಕಾಂಬಳೆ. ಮುತ್ತು ಹರಿಜನ. ಪರಶುರಾಮ ಕಾಂಬಳೆ. ಬಸವರಾಜ ಬನ್ನೂರ. ವಿಠ್ಠಲ ಕಾಂಬಳೆ. ವಿಠ್ಠಲ್ ಸಿಂಘೆ. ಯಲ್ಲಪ್ಪ ಕಾಂಬಳೆ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ, ಬಾಗಲಕೋಟೆ