ತೆಲುಗಿನ ಆ ಒಕ್ಕಟಿ ಆಡಕ್ಕು ಸಿನಿಮಾ ಮೇ 3ರಂದು ತೆರೆಗೆ ಬಂದಿದ್ದು ಚಿತ್ರದ ನಟಿ ಫರಿಯಾ ಅಬ್ದುಲ್ಲಾ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಸಂದರ್ಶನದಲ್ಲಿ ಮದುವೆ ಬೇಡ ಆದರೆ ಮಕ್ಕಳು ಬೇಕು ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ನನಗೆ ನನ್ನ ಮದುವೆಯ ಬಗ್ಗೆ ಯಾವುದೇ ಭರವಸೆ ಇಲ್ಲ. ನಾನು ಖಂಡಿತವಾಗಿಯೂ ಮದುವೆಯಾಗಬೇಕು ಎಂದು ಯೋಚಿಸುವುದಿಲ್ಲ. ಆದರೆ ನಾನು ಮಕ್ಕಳನ್ನು ಪ್ರೀತಿಸುತ್ತೇನೆ. ಮದುವೆಯಾಗದೇ ಮಕ್ಕಳನ್ನು ಪಡೆಯಲು ಬಯಸುತ್ತೇನೆ ಎಂದು ನಟಿ ಹೇಳಿದ್ದು, ಸದ್ಯ ನಟಿಯ ಹೇಳಿಕೆ ವೈರಲ್ ಆಗಿದೆ.
‘ಜಾತಿರತ್ನಲು’ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟ ಫರಿಯಾ ಆ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನರೇಶ್ಗೆ ನಾಯಕಿಯಾಗಿ ಒಕ್ಕಟಿ ಅಡಕ್ಕು ಚಿತ್ರದ ಮೂಲಕ ಸದ್ದು ಮಾಡುತ್ತಿರುವ ನಟಿಯ ಹೇಳಿಕೆ ಸಾಮಾಜಿಕ ಜಾಲಾ ತಾಣದಲ್ಲಿ ಸುದ್ದಿಯಾಗುತ್ತಿದೆ.