ಸಿಲಿಕಾನ್ ಸಿಟಿಯಲ್ಲಿ ಡಬಲ್ ಮರ್ಡರ್ (Double Murder) ನಡೆದಿದ್ದು, ಮತ್ತೆ ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದ್ದು, ಸಂಬಂಧಿ ಭದ್ರ ಎಂಬಾತ ಚಾಕುವಿನಿಂದ ಇರಿದು, ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಎರಡು ಅಂಶಗಳ ಬಗ್ಗೆ ಮಾಹಿತಿ.
೧) ಕಟ್ಟಡದ ವಿಚಾರವಾಗಿ ಹಲವಾರು ವರ್ಷಗಳಿಂದ ಕಲಹ ಇತ್ತು
ನ್ಯಾಯಾಲಯದಲ್ಲಿ ಕೇಸ್ ಸಿವಿಲ್ ಸಹ ಇತ್ತು
ಕೇಸ್ ಮೃತ ಸುರೇಶ್ ಪರವಾಗಿ ಆಗಿದ್ದ ಕಾರಣ ಕೋಪಗೊಂಡಿದ್ದ ಅರೋಪಿ ಭದ್ರ
ಆದಾದ ಮೇಲು ಮೂರು ನಾಲ್ಕು ಬಾರಿ ಜಗಳ ಮಾಡಿಕೊಂಡು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಹೋಗಿದ್ದಾರೆ
ಈ ವೇಳೆ ಸಿ ಆರ್ ಪಿ ಸಿ 107 ಅನ್ವಯ ಬಾಂಡ್ ಬರೆಸಿಕೊಂಡು ಇಬ್ಬರಿಗೂ ವಾರ್ನ್ ಮಾಡಿದ್ದ ಪೊಲೀಸರು
ಮುಂದೆ ಗಲಾಟೆ ಮಾಡಿಕೊಂಡ್ರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದ ಪೊಲೀಸರು
2) ಆರೋಪಿ ಭದ್ರನನ್ನ ಪತ್ನಿ ಬಿಟ್ಟಿದ್ದಳು
ತನ್ನ ಪತ್ನಿ ಸುರೇಶ್ ಮಾತು ಕೇಳಿದ್ದಾರೆ ಎಂಬ ಕೋಪ ಭದ್ರನಿಗೆ ಇತ್ತು
ಭದ್ರನ ದಾಂಪತ್ಯ ಜೀವನ ಡೈವರ್ಸ್ ಹಂತಕ್ಕೆ ಹೋಗಲು ಸುರೇಶ್ ಕಾರಣ ಎಂಬ ಕೋಪ ಭದ್ರನಿಗಿತ್ತು
ಮೃತ ಸುರೇಶ್ ತನ್ನ ಸಂಸಾರ ಹಾಳುಮಾಡಿದ್ದ ಹಾಗೂ ಕಟ್ಟಡವನ್ನು ನೀಡಿಲ್ಲಾ ಎಂದು ಕೋಪಗೊಂಡಿದ್ದ
ಈತ ಸರಿ ಇಲ್ಲದ ಕಾರಣ ತಾನು ಒಟ್ಟಿಗೆ ಇರುವುದಿಲ್ಲ ಎಂದು ಈ ಹಿಂದೆ ಪೊಲೀಸರಿಗೆ ಮಾಹಿತಿ ನೀಡಿದ್ದ ಅರೋಪಿ ಭದ್ರನ ಪತ್ನಿ
ಹಲಸೂರು ಗೇಟ್ ಪೊಲೀಸರಿಂದ ಮುಂದುವರಿದ ತನಿಖೆ
ಕೊಲೆಯನ್ನು ಭದ್ರ ಒಬ್ಬನೇ ಬಂದು ಮಾಡಿರುವುದು ದೃಡ
ಆದ್ರೆ ಕೊಲೆಗೆ ಬೇರೆ ಯಾರಾದ್ರು ಪ್ರೇರಣೆ ನೀಡಿದ್ದಾರ ಎಂದು ಪರಿಶೀಲನೆ