ಬೆಂಗಳೂರು ;- ನಗರದಲ್ಲಿ ಹಾಡಹಗಲೇ ಏರೋನಿಕ್ಸ್ ಕಂಪನಿ CEO, MD ಬರ್ಬರ ಹತ್ಯೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಡಬ್ಬಲ್ ಮರ್ಡರ್…ಅ ಮೂರು ಗಂಟೆಗಳು ಪೊಲೀಸರ ಅಪರೇಷನ್ ಹೀಗಿತ್ತು ನೋಡಿ.
ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಡಬ್ಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಫೆಲಿಕ್ಸ್, ವಿನಯ್ ರೆಡ್ಡಿ, ಶಿವು ಬಂಧಿತರು.
ಆರೋಪಿಗಳು, ಕೊಲೆ ಮಾಡಿ ಕುಣಿಗಲ್ ನಲ್ಲಿ ಸಿಕ್ಕಿದ್ದಾರೆ. ಶಿವಮೊಗ್ಗ ಮೂಲದ ಫೆರಿಕ್ಸ್ , ರೂಪೇನಾ ಅಗ್ರಹಾರದ ಮೂಲದ ವಿನಯ್ ಫೆಲಿಕ್ಸ್ ಅನ್ನ ಈತ್ತಿಚೀಗೆ ಕೆಲಸದಿಂದ ಫಣೀಂದ್ರ ತೆಗೆದು ಹಾಕಿದ್ದ. ಅಷ್ಟೇ ಅಲ್ಲದೇ ಕೆಲಸದ ವೇಳೆಯಲ್ಲಿ ಫೆರಿಕ್ಸ್ ಗೆ ಫಣೀಂದ್ರ ಬೈಯ್ಯುತ್ತಿದ್ದ. ಅದೇ ದ್ವೇಷದ ಹಿನ್ನೆಲೆ ಫಣೀಂದ್ರನನ್ನ ಫೆಲಿಕ್ಸ್ ಹತ್ಯೆ ಮಾಡಿದ್ದಾರೆ.
ಆರೊಪಿಗಳಿಗೆ ವಿನುಕುಮಾರ್ ನನ್ನ ಹತ್ಯೆ ಮಾಡುವ ಉದ್ದೇಶ ವಿರಲಿಲ್ಲ. ಫಣೀಂದ್ರನ ಹತ್ಯೆ ವೇಳೆ ತಡೆಯಲು ಹೋಗಿದ್ದ ವಿನುಕುಮಾರ್ , ಈ ವೇಳೆ ಅತನನ್ನ ಕೂಡ ಹತ್ಯೆ ಮಾಡಿ ಮೂವರು ಕಿರಾತಕರು ಎಸ್ಕೇಪ್ ಆಗಿದ್ದಾರೆ. ವಿನಯ್ ರೆಡ್ಡಿ ಹಾಗೂ ಶಿವುಗೂ ಫಣೀಂಧ್ರನ ಮೇಲೆ ಯಾವುದೇ ದ್ವೇಷವಿರಲಿಲ್ಲ. ಫೆಲಿಕ್ಸ್ ಮಾತನ್ನ ಕೇಳಿ ಹತ್ಯೆಗೆ ಶಿವು ಹಾಗೂ ವಿನಯ್ ರೆಡ್ಡಿಕೈ ಜೋಡಿಸಿದ್ದರು.
ಟವರ್ ಡಂಪ್ ಅಧಾರಿಸಿ ಆರೋಪಿಗಳನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದು, ಆರೋಪಿಗಳ ಪತ್ತೆಗೆ 5 ತಂಡ ರಚಿಸಿ ಶೋಧ ಕಾರ್ಯ ನಡೆದಿದೆ.