ರಾಜಕೀಯ ಪ್ರವೇಶದ ಬಳಿಕವೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಮಂಜುನಾಥ್ ಅವರು ವೈದ್ಯಕೀಯ ವೃತ್ತಿ ಮುಂದುವರೆಸಿದ್ದಾರೆ.
ಮೂತ್ರಪಿಂಡ ವೈಫಲ್ಯ ಜೊತೆಗೆ ಹೃದಯ ಸಮಸ್ಯೆ ಹೊಂದಿದ್ದ 54 ವರ್ಷದ ರೋಗಿಗೆ ಹೃದಯದ ರಕ್ತನಾಳಗಳಲ್ಲಿ ಶೇ.90ರಷ್ಟು ರಕ್ತ ಪರಿಚಲನೆ ಸ್ಥಗಿತವಾಗಿತ್ತು. ಪರೀಕ್ಷೆ ನಡೆಸಿ ಹೊಸ ಆರ್ಬಿಟಲ್ ಅಥೆರೆಕ್ಟಮಿ ಸಾಧನ ಬಳಸಿ ಸಂಸದರು ಮತ್ತು ಹಿರಿಯ ವೈದ್ಯರಾದ ಡಾ.ಮಂಜುನಾಥ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿ ಮಾಡಲಾಯಿತು.
ರೋಗಿಯು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅರ್ಬಿಟಲ್ ಅಥೆರೆಕ್ಟಮಿ ಸಾಧನಕ್ಕೆ 3 ಲಕ್ಷ ರೂ. ಬೇಕಾಗಿತ್ತು. ಆದರೆ ಸಂಸದರ ವಿನಂತಿ ಮೇರೆಗೆ ಈ ಸಾಧನವನ್ನು ಉಚಿತವಾಗಿ ಒದಗಿಸಲಾಗಿದೆ.
ರಾಜಕೀಯ ಪ್ರವೇಶಿಸಿದ ಬಳಿಕವೂ ವೈದ್ಯಕೀಯ ಸೇವೆ ಮುಂದುವರೆಸಿರುವುದಕ್ಕೆ ಡಾ.ಮಂಜುನಾಥ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.