ಬೆಂಗಳೂರು: ಇನ್ನೇರಡು ದಿನದಲ್ಲಿ ಕಾಂಗ್ರೆಸ್ನಿಂದ ನೂತನ ರಾಜ್ಯ ಸರ್ಕಾರ ರಚನೆಯಾಗಲಿದ್ದು, ಈ ಮೂಲಕ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಅಂತಿಮವಾಗಿದೆ. ಈ ನಡುವೆ ಅಧಿಕೃತವಾಗಿ ಸರ್ಕಾರ ರಚನೆಗೆ ಕಾಂಗ್ರೆಸ್ ಮುಂದಾಗಿದ್ದು, ಜಿ.ಪರಮೇಶ್ವರ್(Dr. Parameshwar) ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರತಿನಿಧಿಯಾಗಿ ಜಿ ಪರಮೇಶ್ವರ್ ರಾಜ್ಯಪಾಲರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರ ಪತ್ರ ನೀಡಿದ್ದಾರೆ. ಅಲ್ಲದೇ ಮೇ 20 ರಂದು ನೂತನ ಸಿಎಂ ಪದಗ್ರಹಣ ಕಾರ್ಯಕ್ರಮ ನಡೆಸಲು ಮನವಿ ಸಲ್ಲಿಸಿದ್ದಾರೆ.
ಇನ್ನೇರಡು ದಿನದಲ್ಲಿ ಕಾಂಗ್ರೆಸ್ನಿಂದ ನೂತನ ರಾಜ್ಯ ಸರ್ಕಾರ ರಚನೆಯಾಗಲಿದ್ದು, ಮೂಲಕ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಅಂತಿಮವಾಗಿದೆ. ಇಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ 30-30 ಸೂತ್ರದ ಅಡಿಯಲ್ಲಿ ಸಿಎಂ ಆಯ್ಕೆ ಮಾಡಲಾಗಿದ್ದು, ಮೊದಲ 30 ತಿಂಗಳು ಸಿದ್ದರಾಮಯ್ಯ ಅವರು ಸಿಎಂ ಆಗಿ, ನಂತರದ 30 ತಿಂಗಳು ಶಿವಕುಮಾರ್ ಸಿಎಂ ಆಗಿ ಅಡಳಿತವನ್ನು ನಡೆಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ಮೇ 20ರಂದು ಸಿಎಂ ಆಗಿ ರಾಜ್ಯವನ್ನು ಮುನ್ನೆಡಸಿಲಿದ್ದಾರೆ.