ಬೆಂಗಳೂರು: ಲೋಕಾ ಚುನಾವಣೆ ಟಿಕೆಟ್ ಫೈಟ್ ಜೋರಾಗಿದ್ದು ಎಲ್ಲರು ತಮಗೆ ಬೇಕು ಇವರಿಗೆ ಕೊಡಿ ಹೀಗೆ ಒಂದಲ್ಲ ಒಂದು ಲಾಭಿಗಳು ನಡೆಯುತ್ತಲೇ ಇದ್ದು ಇದರ ಮಧ್ಯೆ ಚಿಕ್ಕಬಳ್ಳಾಪುರ ಟಿಕೆಟ್ ಯಾರ ಪಾಲಾಗುತ್ತೆ ಅನ್ನೋದೆ ಈಗ ಕುತೂಹಲವಾಗಿದೆ
ಆದರೂ, ಬಿಜೆಪಿಯಲ್ಲಿ ಏಕಾಂಗಿಯಾದ ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ಅಧಿಕಾರದಲ್ಲಿದ್ದಾಗ ಎಲ್ಲರಿಗೂ ಬೇಕಾಗಿದ್ದ ಸುಧಾಕರ್ ನ ಕೇಳೋರೆ ಇಲ್ಲ ಈಗ ಕಮಲಪಡೆಯಲ್ಲಿ ಜೋಡೆತ್ತಿನಂತಿದ್ದ ನಾಗರಾಜ್ ರಿಂದಲೂ ದೂರಾದ ಡಾ.ಸುಧಾಕರ್ ಎಲ್ಲವೂ ನನ್ನದೇ, ಎಲ್ಲರು ನಾನು ಹೇಳಿದಂತೆ ಕೇಳ್ತಾರೆ ಎಂಬಂತಿದ್ದ ಸುಧಾಕರ್ ಈಗ ಏಕಾಂಗಿ
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರಿಗೂ ಬೇಡವಾದ್ರು ಸುಧಾಕರ್ ವಿಧಾನಸಭೆ ಚುನಾವಣೆಯಲ್ಲಿ ಸೋತಮೇಲೆ ಸುಧಾಕರ್ ರಾಜಕೀಯ ಜೀವನ ಅತಂತ್ರ.. ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ಗಾಗಿ ಒತ್ತಡ ಹೇರಿದ್ರು ಕ್ಯಾರೆ ಎನ್ನದ ಬಿಎಸ್ ಯಡಿಯೂರಪ್ಪ ಸುಧಾಕರ್ ಬಿಜೆಪಿಯ ಘಟಾನುಘಟಿ ನಾಯಕರನ್ನು ಭೇಟಿಯಾದ್ರು ನೋ ರೆಸ್ಪಾನ್ಸ್
ಈ ಹಿನ್ನೆಲೆಯಲ್ಲಿ ರಾಜ್ಯದ ಟಿಕೆಟ್ ಲಿಸ್ಟ್ ನಲ್ಲಿ ಚಿಕ್ಕಬಳ್ಳಾಪುರ ಪೆಂಡಿಂಗ್ ಇದ್ದು ಸುಧಾಕರ್ ಹೊರತುಪಡಿಸಿ ಬೇರೆ ಅಭ್ಯರ್ಥಿಗಾಗಿ ಹುಡುಕಾಡ್ತಿರುವ ಕೇಸರಿ ಪಡೆ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಗೆ ಚಿಕ್ಕಬಳ್ಳಾಪುರ ಟಿಕೆಟ್ ಬಹುತೇಕ ಫಿಕ್ಸ್..? ಬಿಜೆಪಿಯ 3ನೇ ಲಿಸ್ಟ್ ನಲ್ಲಿ ಅಲೋಕ್ ವಿಶ್ವನಾಥ್ ಗೆ ಜಾಕ್ ಪಾಟ್, ಸುಧಾಕರ್ ಗೆ ಶಾಕ್…? ಸುಧಾಕರ್ ರಾಜಕೀಯ ಭವಿಷ್ಯ ಬಹುತೇಕ ಅಂತ್ಯವಾಗುತ್ತಾ ಬಿಜೆಪಿ ಲಿಸ್ಟ್ ಬಿಡುಗಡೆ ಬಳಿಕ ಈ ಕುತೂಹಲಕ್ಕೆಲ್ಲಾ ತೆರೆಬೀಳಲಿದೆ.