ಬೆಂಗಳೂರು ;- ಮಹದೇವಪುರ ವಲಯ ಮಾರತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ವಲಯ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ ರವರು ವಿವಿಧ ಜಾತಿಯ 15 ಸಸಿಗಳನ್ನು ನೆಟ್ಟು, ಅದನ್ನು ಪೋಷಿಸುವ ಜವಾಬ್ದಾರಿಯನ್ನು ಆಸ್ಪತ್ರೆಯ ಸಿಬ್ಬಂದಿಯಾದ ಚೇತನ್ ಎಂಬುವರಿಗೆ ವಹಿಸಿದ್ದಾರೆ.
ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸನ್ಮಾನ್ಯ ಉಪ ಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ನಿರ್ದೇಶನದಂತೆ ಇಂದು ಮಾರತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸಸಿಗಳನ್ನು ನೆಟ್ಟು ವೃಕ್ಷ ಕವಚ(Tree Guard) ಅಳವಡಿಸಿ ಸಸಿಗಳನ್ನು ಪೋಷಿಸಿ ಅವುಗಳು ಬೆಳೆಯುವವರೆಗೆ ಅದರ ಜವಾಬ್ದಾರಿಯನ್ನು ನಾಲ್ಕನೇ ದರ್ಜೆಯ ನೌಕರರಾದ ಚೇತನ್ ರವರಿಗೆ ಜವಾಬ್ದಾರಿ ನೀಡಲಾಗಿದೆ. ನೆಟ್ಟಿರುವ ಎಲ್ಲಾ ಸಸಿಗಳಿಗೆ ಚೇತನ್ ಹೆಸರಿನ ನಾಮಫಲಕಗಳನ್ನು ಅಳವಡಿಸಲಾಗಿದೆ.
ಸ್ಮಾರ್ಟ್ ವರ್ಚ್ಯುಯಲ್ ಕ್ಲಿನಿಕ್ ಪರಿವೀಕ್ಷಣೆ:
ಮಾರತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಮಾರ್ಟ್ ವರ್ಚ್ಯುಯಲ್ ಕ್ಲಿನಿಕ್ ತೆರೆಯಲಾಗಿದ್ದು, ಆನ್ ಲೈನ್ ಮೂಲಕ ನೇತ್ರ ಪರೀಕ್ಷೆ ಹಾಗೂ ಚರ್ಮ ರೋಗದ ಪರೀಕ್ಷೆ ನಡೆಸಲಾಗುತ್ತಿದ್ದು, ವಲು ಜಂಟಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿರು.
ನಾಗರಿಕರು ಸ್ಮಾರ್ಟ್ ವರ್ಚ್ಯುಯಲ್ ಕ್ಲಿನಿಕ್(Smart Virtual Clinic) ಗಳಲ್ಲಿ, ಕ್ಲಿನಿಕಲ್ ಆಪರೇಟರ್ಸ್ ಮೂಲಕ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಮಾಡಬಹುದಾಗಿದ್ದು, ಇಲ್ಲಿ ವಿಡಿಯೊ ಕಾನ್ಫರೆನ್ಸ್ ಸೌಲಭ್ಯದೊಂದಿಗೆ ಸಂಪರ್ಕ ಮತ್ತು ಡಿಜಿಟಲ್ ಪ್ರಿಸ್ಕ್ರಿಪ್ಷನ್(ಔಷಧಗಳ ಸೂಚನೆ) ಪಡೆಯಬಹುದಾಗಿದೆ.
ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್ ನಿಂದ ತಜ್ಞ ವೈದ್ಯರ ಜೊತೆಗೆ ಆನ್ ಲೈನ್ ಮೂಲಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಥಾಪಿಸಿಲಾದ ಸ್ಮಾರ್ಟ್ ವರ್ಚ್ಯುಯಲ್ ಕ್ಲಿನಿಕ್ ಗಳಿಗೆ ಬರುವ ರೋಗಿಗಳೊಂದಿಗೆ ನೇರ ಸಮಾಲೋಚನೆ ನಡೆಸಲಾಗುತ್ತದೆ. ತಜ್ಞ ವೈದ್ಯರು ರೋಗಿಗಳೊಂದಿಗೆ ಸಮಾಲೋಚನೆ ನಡೆಸಿ, ಪ್ರಿಸ್ಕ್ರಿಪ್ಷನ್ ನೊಂದಿಗೆ ರೋಗಿಯ ಸ್ಥಿತಿಯನ್ನು ಆಧರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಆನ್ ಲೈನ್ ಮೂಲಕ ಸಲಹೆ ನೀಡಲಾಗುತ್ತದೆ. ಈ ಪೈಕಿ ನಾಗರಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳಲು ವಲಯ ಜಂಟಿ ಆಯುಕ್ತರಾದ ಡಾ. ದಾಕ್ಷಾಯಣಿ ರವರು ಕೋರಿರುತ್ತಾರೆ.
ಈ ವೇಳೆ ವಲಯ ಆರೋಗ್ಯಾಧಿಕಾರಿ ಡಾ. ಸುರೇಂದ್ರ, ಆರೋಗ್ಯ ವೈದ್ಯಾಧಿಕಾರಿ ಡಾ. ರಾಕೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದು