ಭೀಕರ ರಸ್ತೆ ಅಪಘಾತ: DMK ರಾಜ್ಯಸಭೆ ಸದಸ್ಯನ ಪುತ್ರನ ದುರ್ಮರಣ

ರಾಷ್ಟ್ರೀಯ

ಚೆನ್ನೈ: ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ರಾಜ್ಯಸಭಾ ಸದಸ್ಯ ಎನ್ ಆರ್ ಇಳಂಗೋವನ್ ಪುತ್ರ 22 ವರ್ಷದ ರಾಕೇಶ್ ಮೃತಪ ಟ್ಟಿದ್ದಾರೆ.’ ಸಚಿವರ ಪುತ್ರ ರಾಕೇಶ್ ಇನ್ನೋರ್ವ ವ್ಯಕ್ತಿಯೊಂದಿಗೆ ಪುದಿಚೆರಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದರು.ಈ ವೇಳೆ ಅವರು ಪ್ರಯಾಣಿಸುತ್ತಿದ್ದ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿವೆ. ಹಿರಿಯ ವಕೀಲರಾಗಿರುವ ಎನ್ ಆರ್ ಇಳಂಗೋವನ್ ಅವರು 2020 ರಲ್ಲಿ ತಮಿಳುನಾಡಿನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *