ಬೆಂಗಳೂರು: ದೇಗುಲಗಳಲ್ಲಿ ಡ್ರೆಸ್ ಕೋಡ್ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ವಿರೋಧನೂ ಮಾಡಲಿಲ್ಲ, ಚ ಮಾತಾಡಲಿಲ್ಲ. ಭಕ್ತಿ ಮುಖ್ಯ ಅಂತಾ ಹೇಳಿದ್ದಾರೆ ಅಷ್ಟೇ ಎಂದು ಸಚಿವ ರಾಮಲಿಂಗಾ ರೆಡ್ಡಿಯವರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೂರಾರು ವರ್ಷಗಳಿಂದ ಜನ ದೇವಸ್ಥಾನಕ್ಕೆ ಹೋಗ್ತಾರೆ, ಬರ್ತಾರೆ. ಅದೇ ರೀತಿ ಅಂತಾ ಹೇಳಿದ್ದಾರೆ. ಖಾಸಗಿ ದೇವಾಲಯಗಳೂ ಇದ್ದಾವೆ. ಮಂತ್ರಾಲಯ, ಧರ್ಮಸ್ಥಳದಲ್ಲಿ ಪಂಚೆ ಹಾಕಿಕೊಂಡು ಹೋಗಬೇಕಾಗುತ್ತೆ. ತಕ್ಷಣಕ್ಕೆ ನಮ್ಮ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ನೀತಿ ಎಲ್ಲೂ ಇಲ್ಲ ಎಂದರು.
ಹಂಪಿಗೆ ವಿದೇಶಿ ಪ್ರವಾಸಿಗರು ಜಾಸ್ತಿ ಬರುತ್ತಾರೆ. ಅಲ್ಲಿ ಬರ್ಮುಡಾ, ನಿಕ್ಕರ್ ಹಾಕಿಕೊಂಡು ಬರುತ್ತಾರೆ. ಹೀಗಾಗಿ ಅಲ್ಲಿ ಜಿಲ್ಲಾಧಿಕಾರಿಗಳು ಡ್ರೆಸ್ ಕೋಡ್ ಮಾಡಿದ್ದಾರೆ. ಸರ್ಕಾರದ ಮುಂದೆ ಯಾವುದೇ ರೀತಿಯ ಪ್ರಸ್ತಾವನೆ ಇಲ್ಲ. ದೇವಸ್ಥಾನದ ಆಡಳಿತ ಮಂಡಳಿಗಳು ವಸ್ತ್ರಸಂಹಿತೆ ಬಗ್ಗೆ ಪ್ರಸ್ತಾವನೆ ಬಂದರೆ ಆಮೇಲೆ ನೋಡೋಣ ಎಂದು ಹೇಳಿದರು.