ಬೇಸಿಗೆಯ ಸಮಯದಲ್ಲಿ ದೇಹಕ್ಕೆ ನೀರು ಮಾತ್ರ ಸಾಕಾಗುವುದಿಲ್ಲ. ದೇಹವನ್ನು ತಣ್ಣಗೆ ಇರಿಸುವ ದ್ರವ ರೂಪದ ಆಹಾರ ಸೇವನೆಯೂ ಉತ್ತಮವಾಗಿದೆ. ಮನೆಯಲ್ಲೇ ಕೆಲ ಜ್ಯೂಸ್ ಮಾಡಿ ಕುಡಿದರೆ ದೇಹಕ್ಕೂ ತಂಪು ಹಾಗೂ ಆರೋಗ್ಯವು ಉತ್ತಮವಾಗಿರುತ್ತದೆ.
ಬಾರ್ಲಿ ಜ್ಯೂಸ್ : ಬೇಕಾಗುವ ಸಾಮಗ್ರಿ:
* ಬಾರ್ಲಿ ಪುಡಿ
* ರಾಗಿಪುಡಿ
* ಶುಂಠಿ
* ಏಲಕ್ಕಿ
* ಬೆಲ್ಲ
ತಯಾರಿಸುವ ವಿಧಾನ:
* ಮೊದಲಿಗೆ ಬಾರ್ಲಿಯನ್ನು ಬಿಸಿಲಲ್ಲಿಟ್ಟು ಪುಡಿಮಾಡಿಕೊಳ್ಳಬೇಕು.
* ಗ್ಯಾಸ್ ಮೇಲೆ ನಾಲ್ಕು ಲೋಟ ನೀರು ಇಟ್ಟು ಬಿಸಿ ಮಾಡಿಟ್ಟುಕೊಳ್ಳಿ.
* ಈ ನೀರಿಗೆ ಬಾರ್ಲಿಪುಡಿ ಹಾಗೂ ರಾಗಿಪುಡಿ ಸೇರಿಸಿಕೊಳ್ಳಿ, ಗಂಟಿಲ್ಲದಂತೆ ಕಲಸಿ ಕುದಿಸಿಕೊಳ್ಳಿ. ಆಗಾಗ ಕೈಯಾಡಿಸುತ್ತಾ ಇರಿ.
* ಅದಕ್ಕೆ ಮತ್ತೆರಡು ಲೋಟ ದಪ್ಪ ಹಾಲು, ಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ. ತಣ್ಣಗಾದ ಬಳಿಕ ರುಚಿ ರುಚಿಯಾದ ಬಾರ್ಲಿ ಹಾಲು ಸವಿಯುವುದಕ್ಕೆ ಸಿದ್ಧ.
ಎಳ್ಳು ಜ್ಯೂಸ್: ಬೇಕಾಗುವ ಸಾಮಗ್ರಿ:
* ಬಿಳಿ ಎಳ್ಳು
* ತೆಂಗಿನ ತುರಿ
* ಹಾಲು
* ಬೆಲ್ಲ
* ಐಸ್ ಪೀಸ್
ಎಳ್ಳಿನ ಜ್ಯೂಸ್ ಮಾಡುವ ವಿಧಾನ :
* ಮೊದಲಿಗೆ ಎಳ್ಳನ್ನು ಹತ್ತು ನಿಮಿಷ ನೆನೆಸಿಟ್ಟುಕೊಳ್ಳಿ. ಆ ಬಳಿಕ ಎರಡು ಮೂರು ಸಲ ನೀರಿನಲ್ಲಿ ತೊಳೆದು, ತೆಂಗಿನತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.
* ಇದಕ್ಕೆ ಬೇಕಾಗುವಷ್ಟು ನೀರು, ಹಾಲು, ಬೆಲ್ಲ ಹಾಗೂ ಐಸ್ಪೀಸ್ ಸೇರಿಸಿಕೊಂಡರೆ ಸವಿಯಲು ಜ್ಯೂಸ್ ರೆಡಿ.