ಬೇಸಿಗೆ ಮತ್ತು ಬಿಸಿ ವಾತಾವರಣದಲ್ಲಿ ಜನರು ಹೆಚ್ಚಾಗಿ ತಣ್ಣೀರು ಕುಡಿಯುತ್ತಾರೆ. ಆದರೆ ಅತಿಯಾದ ಕೂಲ್ಡ್ ವಾಟರ್ ಸೇವನೆ ದೇಹದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ.
ಹೆಚ್ಚು ತಣ್ಣೀರು ಕುಡಿಯುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಹೃದ್ರೋಗಿಗಳು ಹೆಚ್ಚು ತಣ್ಣೀರು ಕುಡಿಯಬಾರದು. ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ತಣ್ಣೀರು ಕುಡಿಯುವುದು ಹೃದಯ ಬಡಿತವನ್ನು ಪ್ರಚೋದಿಸುತ್ತದೆ. ಕೆಲವೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಹುದು.
ರೂಮ್ ಟೆಂಪ್ರೆಚರ್ನಲ್ಲಿರುವ ನೀರು ಕುಡಿಯುವುದು ಯಾವಾಗಲೂ ಉತ್ತಮ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ. ಊಟದ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯಲು ಸೂಚಿಸಲಾಗುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.
ಬೇಸಿಗೆಯಲ್ಲಿ ಹೈಡ್ರೇಟೆಡ್ ಆಗಿರುವುದು ಸಹ ಬಹಳ ಮುಖ್ಯ. ಬಾಯಾರಿಕೆಯಾಗುವವರೆಗೆ ಕಾಯುವುದಕ್ಕಿಂತ ಹೆಚ್ಚಾಗಿ ನೀರು ಕುಡಿಯುವುದು ಉತ್ತಮ. ನೀರಿನಂಶವಿರುವ ಹಣ್ಣುಗಳನ್ನು ತಿನ್ನುವುದು ಸಹ ಒಳ್ಳೆಯದು.