ಸಾಮಾನ್ಯವಾಗಿ ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ತಕ್ಷಣ ಚಹಾ ಸವಿಯುವ ಅಭ್ಯಾಸ. ಅದರಲ್ಲಿಯೂ ಮುಖ್ಯವಾಗಿ ಕೆಲವರು ಶುಂಠಿ ಚಹಾವನ್ನು ಹೆಚ್ಚು ಇಷ್ಟಪಡುತ್ತಾರೆ. ಅಡುಗೆಯಲ್ಲಿ ರುಚಿ ಹೆಚ್ಚುಸುವ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿರುವ ಶುಂಠಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
- ಶುಂಠಿ ಟೀ ಶೀತ ಕೆಮ್ಮಿನಿಂದ ಹಿಡಿದು, ಮುಟ್ಟಿನ ನೋವಿನವರೆಗೆ ಅನೇಕ ಕಾಯಿಲೆಗಳಿಗೆ ಬೆಸ್ಟ್ ಮನೆ ಮದ್ದು
- ವಾಕರಿಕೆ ನಿವಾರಿಸಲು ಜಿಂಜರ್ ಟೀ ತುಂಬಾ ಪರಿಣಾಮಕಾರಿ. ದೂರದೂರಿಗೆ ಪಯಣಿಸುವಾಗ ಮೋಷನ್ ಸಿಕ್ನೆಸ್ನಿಂದ ಆಗುವ ವಾಂತಿಯನ್ನು ಕೇವಲ ಒಂದು ಕಪ್ ಚಹಾ ತಡೆಯಬಲ್ಲದು..
- ಜೀರ್ಣಕ್ರಿಯೆ ಮತ್ತು ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಶುಂಠಿ ಚಹಾ ಇದಕ್ಕೆ ರೆಮಿಡಿ. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಆಹಾರದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಬೆಸ್ಟ್.
- ಪ್ರತಿ ಊಟದ ನಂತರದ ಹೊಟ್ಟೆ ಉಬ್ಬರಿಸುವಿಕೆಯನ್ನು ಒಂದು ಕಪ್ ಶುಂಠಿ ಚಹಾ ನಿವಾರಿಸುತ್ತದೆ.
- ದೀರ್ಘಕಾಲದವರೆಗೆ ಕೀಲು ನೋವಿಂದ ಬಳಲುತ್ತಿರುವವರಿಗೆ ಶುಂಠಿ ಚಹಾದಿಂದ ಹೆಲ್ಪ್ ಆಗುತ್ತದೆ. ಚಹಾ ಚರಟವನ್ನು ನೋವಿನ ಜಾಗಗಳಿಗೆ ಸಹ ಹಚ್ಚಬಹುದು.
- ಉಸಿರಾಟದ ಸಮಸ್ಯೆಗೆ ಪರಿಹಾರ. ನೆಗಡಿಯಿಂದ ಉಂಟಾಗುವ congestion ನಿವಾರಿಸಲು ಶುಂಠಿ ಚಹಾ ಸಹಾಯ ಮಾಡುತ್ತದೆ. ಅಲರ್ಜಿಗೆ ಸಂಬಂಧಿಸಿದ ಉಸಿರಾಟದ ಖಾಯಿಲೆಗಳಿಗೆ ಈ ಟೀಯಲ್ಲಿರುವ ಅಂಶಗಳು ಉತ್ತಮ.
- ರಕ್ತ ಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಜೀವಸತ್ವಗಳು, ಖನಿಜಗಳು ಮತ್ತು ಅಮೈನೋ ಆಸಿಡ್ ಸಮೃದ್ಧವಾಗಿರುವ ಜಿಂಜರ್ ಟೀ ರಕ್ತ ಚಲನೆಯನ್ನು ಪುನಾ ಸ್ಥಾಪಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ.
- ಇದು ಹೃದಯ ಸಂಬಂಧಿ ಸಮಸ್ಯೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗದಂತೆ ಇದು ತಡೆಯುವುದರ ಜೊತೆಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ರಿಸ್ಕ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಋತು ಚಕ್ರದ ನೋವಿಗೆ ಬೆಸ್ಟ್. ಮುಟ್ಟಿನ ಸಮಯದ ಕ್ರ್ಯಾಂಪ್ಸ್ಗೆ ಉತ್ತಮ ಪರಿಹಾರ.
- ಹೊಟ್ಟೆಯ ಕೆಳಭಾಗದಲ್ಲಿ ಬೆಚ್ಚಗಿನ ಶುಂಠಿ ಚಹಾದಲ್ಲಿ ನೆನೆಸಿದ ಟವೆಲ್ ಇರಿಸಿದರೆ ಸ್ನಾಯುಗಳನ್ನು ಸಡಿಲಗೊಳಿಸುವುದಲ್ಲದೆ, ನೋವನ್ನು ನಿವಾರಿಸುತ್ತದೆ. ಅದೇ ಸಮಯದಲ್ಲಿ, ಜೇನುತುಪ್ಪದೊಂದಿಗೆ ಒಂದು ಕಪ್ ಶುಂಠಿ ಚಹಾ ಕುಡಿಯುವುದರಿಂದ ಋತು ಚಕ್ರದ ಹೊಟ್ಟೆ ನೋವಿಗೆ ಪರಿಹಾರ ಸಿಗುತ್ತದೆ.
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಶುಂಠಿ ಚಹಾವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮನಸ್ಸಿನ ವಿಶ್ರಾಂತಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ.