ಬೆಳಗ್ಗೆ ಎದ್ದ ಕೂಡಲೇ ಪ್ರತಿಯೊಬ್ಬರೂ ಮಾಡುವ ಕೆಲಸವೆಂದರೆ ಮುಖ ತೊಳೆದು ತಿಂಡಿ ತಿನ್ನುವುದು. ಆದರೆ ಕೆಲವರು ಮುಖವನ್ನು ತೊಳೆದು ಸ್ವಚ್ಛವಾಗಿ ಯೋಗ ಮಾಡಲು ಹೋಗ್ತಾರೆ. ಆದರೆ ಬಾಯಿಯನ್ನು ಸ್ವಚ್ಛ ಪಡಿಸದೆ ಬಿಸಿನೀರನ್ನು ಒಂದು ಲೋಟ ಪೂರ್ತಿಯಾಗಿ ಕುಡಿಯುವುದರಿಂದ ಅನಾರೋಗ್ಯ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದಾಗಿದೆ.
ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರು ಕುಡಿಯುವುದರಿಂದ ದೇಹದಲ್ಲಿರುವಂತಹ ವಿಷ ಜೀವಾಣುಗಳು ದೇಹದಿಂದ ಹೊರ ಹೋಗುತ್ತವೆ
ಬಿಸಿ ನೀರಿನ ಸೇವನೆಯಿಂದ ಆಹಾರವು ಜೀರ್ಣವಾಗಲು ಸಹಾಯ ಮಾಡುತ್ತದೆ.
ಬಿಸಿ ನೀರನ್ನು ಕುಡಿಯುತ್ತಾ ಬಂದರೆ ಇದು ರಕ್ತವನ್ನು ಶುದ್ಧಿಕರಿಸಿದ್ಧಿಕರಿಸಿ ಆರೋಗ್ಯವನ್ನು ಕಾಪಾಡುತ್ತದೆ.
ಬಿಸಿ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡರೆ ಮಲಬದ್ಧತೆ ಸಮಸ್ಯೆಯು ನಿವಾರಣೆಯಾಗುತ್ತದೆ.
ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿಯುವ ಅಭ್ಯಾಸವು ದೇಹದಲ್ಲಿರುವ ಬೇಡದ ಕೊಬ್ಬನ್ನು ಕರಗಿಸುತ್ತದೆ. ಅದಲ್ಲದೇ ತೂಕ ನಷ್ಟಕ್ಕೂ ಸಹಕಾರಿಯಾಗಿದೆ.
ಬಿಸಿ ನೀರು ದೇಹದ ಉಷ್ಣತೆಯನ್ನು ಹೆಚ್ಚಿಸಿ ಚಯಾಪಚಯ ಕ್ರಿಯೆಗಳನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲದೇ, ಮೂತ್ರಪಿಂಡಗಳು ಚೆನ್ನಾಗಿ ಕೆಲಸ ಮಾಡಲು ಸಹಾಯಕವಾಗಿದೆ.
ದಿನ ನಿತ್ಯ ಬಿಸಿ ನೀರು ಕುಡಿಯುವ ಅಭ್ಯಾಸದಿಂದ ವಯಸ್ಸಾಗುವಂತಹ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.