ಕೆಲವರು ಟೀ ಜೊತೆ ಬನ್, ರಸ್ಕ್, ಬಿಸ್ಕೇಟ್, ಬಜ್ಜಿ ಸೇವಿಸುತ್ತಾರೆ ಇನ್ನೂ ಕೆಲವರು ಟೀ ಜೊತೆ ಸಿಗರೇಟ್ ಸೇದುತ್ತಾರೆ. ಆದರೆ ಇದರಲ್ಲಿ ಮಕ್ಕಳಿಗೂ ನಾವು ನೀಡುವುದೇನೆಂದರೆ ಬಿಸ್ಕೇಟ್ ಇಲ್ಲವೆ ರಸ್ಕ್ ನೀಡುತ್ತೇವೆ.
ಟೀ ಜೊತೆ ರಸ್ಕ್ ಸೇವಿಸುವುದು ಸಹ ನಾವು ನೋಡಿರುತ್ತೇವೆ. ಆದರೆ ನಿತ್ಯ ಟೀ ಜೊತೆ ರಸ್ಕ್ ಸೇವಿಸುವುದರಿಂದ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ..? ಈ ಕುರಿತು ನಿಮಗೆ ಯಾವ ಮಾಹಿತಿಯೂ ಇಲ್ಲ ಎಂದಾದರೆ ಈ ಕುರಿತ ಮಾಹಿತಿಯನ್ನು ತಿಳಿದುಕೊಳ್ಳಿ.
ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ರಸ್ಕ್ ತಿನ್ನಲು ಇಷ್ಟಪಡುತ್ತಾರೆ. ಬೆಳಗ್ಗೆ ಎದ್ದ ನಂತರ ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ರಸ್ಕ್ ಮಾಡುವುದು ಹೆಚ್ಚಿನವರ ದೈನಂದಿನ ಅಭ್ಯಾಸವಾಗಿದೆ. ಈ ದೀರ್ಘಕಾಲೀನ ಅಭ್ಯಾಸವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ನಿತ್ಯ ಟೀ ಜೊತೆ ರಸ್ಕ್ ಸೇವಿಸುವುದರಿಂದಾಗುವ ಪರಿಣಾಮವೇನು ಎಂಬುದನ್ನು ನಾವಿಂದು ನೋಡೋಣ.
ರಸ್ಕ್ಗೆ ಹೆಚ್ಚಾಗಿ ಸಕ್ಕರೆ ಮತ್ತು ಗ್ಲುಟನ್ ಅನ್ನು ಸೇರಿಸಿರುತ್ತಾರೆ. ಅದು ರುಚಿಯಾಗಬೇಕಾದರೆ ಈ ಎರಡು ಅಂಶ ಇರಲೇಬೇಕಿದೆ. ಹೀಗಾಗಿ ನೀವು ಟೀ ಜೊತೆ ಇದನ್ನು ಸೇವಿಸುವುದರಿಂದ ಟೀಯಲ್ಲಿರುವ ಸಕ್ಕರೆ ಸಹ ದೇಹ ಸೇರುತ್ತದೆ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ. ಕ್ರಮೇಣ ಚಯಾಪಚಯ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
100 ಗ್ರಾಂ ರಸ್ಕ್ ಸುಮಾರು 407 kcal ಅನ್ನು ಹೊಂದಿರುತ್ತದೆ. ರಸ್ಕ್ ಅನ್ನು ಹೆಚ್ಚಾಗಿ ಹಳಸಿದ ಬ್ರೆಡ್ನಿಂದ ತಯಾರಿಸಲಾಗುತ್ತದೆ ಮತ್ತು ಇದು ಅನಾರೋಗ್ಯಕ್ಕೆ ಕಾರಣವಾಗಬಹುದು. ಇನ್ನೊಂದೆಡೆ ಟೀಗೆ ಹಾಕಿರುವ ಸಕ್ಕರೆಯೂ ಸಹ ಅತ್ಯಧಿಕ ಕ್ಯಾಲೋರಿ ಹೊಂದಿರುತ್ತದೆ. ಇದು ಸಹ ಆರೋಗ್ಯಕ್ಕೆ ಒಳ್ಳೆಯದಲ್ಲ.
ರಸ್ಕ್ ತಯಾರಿಸುವಾಗ ಸಕ್ಕರೆ ಬಳಸುವುದು ಹಾಗೂ ಟೀಗೂ ಸಕ್ಕರೆ ಬೆರೆಸಿರುವ ಕಾರಣ ಸಕ್ಕರೆಯ ಮಟ್ಟದಲ್ಲಿನ ಈ ಹೆಚ್ಚಳವು ಇನ್ಸುಲಿನ್ ಮಟ್ಟದ ಮೇಲೆ ಪರಿಣಾಮ ಬೀರಬಹುದು.
ಪ್ರತಿನಿತ್ಯ ರಸ್ಕ್ ತಿಂದರೆ ತೂಕ ಹೆಚ್ಚಾಗುವುದು, ಬೊಜ್ಜು ಮತ್ತು ಮಧುಮೇಹ ಬರಬಹುದು. ಹಾಗಾಗಿ ಮಧುಮೇಹಿಗಳು ರಸ್ಕ್ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ. ಇದರ ಜೊತೆ ರಸ್ಕ್ನಲ್ಲಿ ಹೆಚ್ಚಿನ ಗ್ಲುಟನ್ ಹೊಂದಿರುತ್ತದೆ ಇದು ಕರುಳಿನ ಆರೋಗ್ಯಕ್ಕೆ ಉತ್ತಮವಲ್ಲ. ದೇಹವು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.
ಉದರದ ಕಾಯಿಲೆ ಇರುವವರು ರಸ್ಕ್ ತಿನ್ನುವುದನ್ನು ನಿಲ್ಲಿಸಬೇಕು. ಏಕೆಂದರೆ ಇದು ಕೆಲವೊಮ್ಮೆ ಊತ, ನೋವು ಮತ್ತು ಅತಿಸಾರವನ್ನು ಉಂಟುಮಾಡುತ್ತದೆ ಮತ್ತು ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುವ ಹಾಲು ಮತ್ತು ಚಹಾದೊಂದಿಗೆ ರಸ್ಕ್ ಅನ್ನು ತಿನ್ನುವುದು ನಿಮ್ಮ ಕ್ಯಾಲೋರಿ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸುತ್ತದೆ.
ರಸ್ಕ್ಗಳಲ್ಲಿ ಫೈಬರ್ನ ಅಂಶ ತೀರ ಕಳಪೆಯಾಗಿರುತ್ತದೆ. ಇದು ಜೀರ್ಣಕ್ರಿಯೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಮತ್ತಷ್ಟು ಕಾರಣವಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ರಸ್ಕ್ ನೀಡುವುದರಿಂದ ಅವರಲ್ಲಿ ಹಸಿವಾಗದೆ ಇರಬಹುದು. ಏಕೆಂದರೆ ರಸ್ಕ್ನಲ್ಲಿರುವ ಸಕ್ಕರೆಯ ಪ್ರಮಾಣ ಹಾಗೂ ಗ್ಲೂಟನ್ ಎಂಬ ಅಂಶವು ಹಸಿವಾಗದಂತೆ ಮಾಡುತ್ತದೆ. ಇದು ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು.