ನಮ್ಮ ದೇಹಕ್ಕೆ ಬೇಸಿಗೆಯಲ್ಲಿ ನೀರು ಅಧಿಕವಾಗಿ ಬೇಕಾಗುತ್ತದೆ.ಯಾಕೆಂದರೆ ಬೇಸಿಗೆಯಲ್ಲಿ ನಮ್ಮ ದೇಹವು ಬೆವರಿನ ಮೂಲಕ ನಿರಂತರವಾಗಿ ನೀರನ್ನು ಕಳೆದುಕೊಳ್ಳುವುದರಿಂದ ಇದರಿಂದ ನಮ್ಮ ದೇಹಕ್ಕೆ ನೀರಿನ ಪೂರೆಕೈ ಸರಿಯಾಗಿ ಆಗುವುದಿಲ್ಲ. ನಾವು ಈ ಸೀಸನ್ನಲ್ಲಿ ತೂಕ ಇಳಿಸಬೇಕಾದರೆ ನಾವು ಎಳೆನೀರಿನ್ನು ಕುಡಿಯಬೇಕು. ಹಾಗಿದ್ರೆ ಎಳುನೀರು ಕುಡಿಯುವುದರಿಂದ ನಮಗೆ ಏನೆಲ್ಲಾ ಪ್ರಯೋಜನಗಳಿವೆ ಇದರಿಂದ ನಮ್ಮ ದೇಹದ ತೂಕವನ್ನು ಇಳಿಸಲು ಸಹಾಯಮಾಡುತ್ತದೆ.
ಎಳೆನೀರು ತೂಕವನ್ನು ಇಳಿಸಲು ಯಾವ ರೀತಿ ಅನುಕೂಲವಾಗಿದೆ?
- ಎಳೆನೀರು ಚಯಾಪಚಯವನ್ನು ಹೆಚ್ಚಿಸಲು ಮತ್ತು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ತೂಕ ನಷ್ಟಕ್ಕೆ ಅಗತ್ಯವಿರುತ್ತದೆ.
- ಎಳೆನೀರು ಸೋಡಾಗಳು ಅಥವಾ ಹಣ್ಣಿನ ರಸಗಳಂತಹ ಇತರ ಅನೇಕ ಸಕ್ಕರೆ ಪಾನೀಯಗಳಿಗೆ ಹೋಲಿಸಿದರೆ, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.
- ಎಳೆನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಯಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ.
- ಎಳೆನೀರು ಎಲೆಕ್ಟ್ರೋಲೈಟ್ಗಳ ನೈಸರ್ಗಿಕ ಮೂಲವಾಗಿದ್ದು, ದೇಹದಲ್ಲಿ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ.
- ಎಳೆನೀರು ಹಸಿವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಊಟಕ್ಕೆ ಮುಂಚಿತವಾಗಿ ಎಳೆನೀರನ್ನು ಕುಡಿಯುವುದರಿಂದ ಹಟ್ಟೆ ತುಂಬಿಸಲು ಸಹಾಯ ಮಾಡುತ್ತದೆ
- ಎಳೆನೀರನ್ನು ವ್ಯಾಯಾಮದ ನಂತರ ಸೇವಿಸುವುದರಿಂದ ಬೆವರಿನ ಮೂಲಕ ಕಳೆದುಹೋದ ಎಲೆಕ್ಟ್ರೋಲೈಟ್ಗಳನ್ನು ಪುನಃ ತುಂಬಿಸಲು ಸಹಾಯ ಮಾಡುತ್ತದೆ
ಎಳೆನೀರರು ತೂಕ ನಷ್ಟ ಮಾಡಲು ಸಹಾಯಕವಾಗುತ್ತದೆ ಎಂಬುವುದನ್ನು ನಾವು ಮೇಲಿನ ಕ್ರಮದ ಮೂಲಕ ನೋಡಬಹುದು.