ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಾರಿ ಪ್ರಮಾಣದ ₹8 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನ ಕಮಿಷನರ್ ಕಚೇರಿಯಲ್ಲಿ ಮಾತನಾಡಿದ ಅವರು,ಮಾದಕ ವಸ್ತುಗಳ ವಿರುದ್ಧ ನಮ್ಮ ಕಾರ್ಯಚರಣೆ ಮುಂದೆವರೆಯುತ್ತಿದೆ, ಇದರ ಅಂಗವಾಗಿ ಚುನಾವಣಾ ಸಮಯದಲ್ಲು ಮಾಧಕ ವಸ್ತುಗಳ ಸಾಗಣೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಚುನಾವಣಾ ಅಯೋಗದಿಂದ ಸೂಚನೆ ಇವೆ. ಅದರಂತೆ ಜಯನಗರ ಮತ್ತು ವಿವಿಪುರ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದರು.
ಒಟ್ಟು 5 ಜನ ವಿದೇಶಿ ಪ್ರಜೆಗಳಿಂದ ಸುಮಾರು 8 ಕೋಟಿ ರೂ ಬೆಲೆ ಬಾಳುವ ಮಾಧಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ವಿದೇಶಿ ಪ್ರಜೆಗಳು ತಮ್ಮ ವಿಸಾ ಅವಧಿ ಮುಗಿದಿದ್ದವರಾಗಿದ್ದು, ಐದು ಜನರ ಪೈಕಿ ಮೂರು ಜನರು ಈ ಮೊದಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು, ಜಾಮೀನಿನ ಮೇಲೆ ಆಚೆ ಬಂದು ಮತ್ತೆ ಈ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ನೀಡಿದರು.