ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಕೆಲ ದಿಟ್ಟ ಕ್ರಮಕೈಗೊಂಡಿದ್ದು, ವೀಕೆಂಡ್ನಲ್ಲಿ ಡ್ರಂಕ್ & ಡ್ರೈವ್ ತಪಾಸಣೆ ಕಡ್ಡಾಯ ಮಾಡಲಾಗಿದೆ.
ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ರೋಡ್ ರೇಜ್ ಕೇಸ್ ಹೆಚ್ಚಳ ಹಿನ್ನೆಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಪ್ರತಿ ಠಾಣೆಯಲ್ಲೂ ರಾತ್ರಿ ಕರ್ತವ್ಯಕ್ಕೆ ಇಬ್ಬರು ಮಹಿಳಾ ಹೆಚ್ಸಿ, ಪಿಸಿ ನಿಯೋಜನೆ ಮತ್ತು ರೋಡ್ ರೇಜ್ ಕೇಸ್ ನಿಯಂತ್ರಣಕ್ಕೆ ಪ್ರತಿ ಗುರುವಾರದಿಂದ ಭಾನುವಾರದವರೆಗೂ ಡ್ರಂಕ್ & ಡ್ರೈವ್ ಟೆಸ್ಟ್ಗೆ ಸೂಚನೆ ನೀಡಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.