ಬೆಂಗಳೂರು: ವಿಕೆಂಡ್ ಬಂದ್ರೆ ಸಾಕು ಯುವಕರಿಗೆ ಅದೇನಾಗುತ್ತೋ ಗೊತ್ತಿಲ್ಲ.ರಸ್ತೆಯಲ್ಲಿ ಕಾರು ಓಡಿಸ್ತೀವಿ ಏರೋಫ್ಲೇನ್ ಓಡಸ್ತಿದ್ದೀವಿ ಅನ್ನೋ ಗುಂಗಲ್ಲಿ ಅಲ್ಲಿ ಇರ್ತಾರೋ ಗೊತ್ತಿಲ್ಲ.. ಯಾರದ್ದೋ ಹುಡುಗಾಟಕ್ಕೆ ಇನ್ಯಾರೋದ್ದೋ ಪ್ರಾಣ ಹೋಗಿದ್ರೆ ಏನ್ ಗತಿ ಅಲ್ವಾ ಅಷ್ಟಕ್ಕೂ ಈರೀತಿ ಯಾಕೆ ಹೇಳ್ತಿದ್ದೀವಿ ಅಂದ್ಕೋಂಡ್ರಾ ಈ ಆಕ್ಸಿಡೆಂಟ್ ದೃಶ್ಯ ನೋಡಿ ಗೊತ್ತಾಗುತ್ತೆ..
ಈ ಸಿಸಿಟಿವಿ ದೃಶ್ಯಾವಳಿಗಳನ್ನ ಒಮ್ಮೆ ನೋಡಿ… ಅದೆಂಥಾ ವೇಗವಾಗಿ ಕಾರು ಓಡಿಸಿದ್ದಾನೆ.. ಈ ಸ್ಪೀಡ್ ನಲ್ಲಿ ಬಂದ ಕಾರು ಮೊದಲು ಡಿವೈಡರ್ ಗೆ ಗುದ್ದಿದೆ. ಅದೇ ಸ್ಪೀಡ್ ನಲ್ಲಿ ಮರಕ್ಕೆ ಗುದ್ದಿ ಪಕ್ಕಕ್ಕೆ ಹಾರಿ ನಿಂತಿದೆ. ಹೌದು ಈ ಘಟನೆ ನಡೆದಿದ್ದು ಪಾಪರೆಡ್ಡಿ ಪಾಳ್ಯದ ಬಸ್ ನಿಲ್ದಾಣದ ಬಳಿ. ರಾತ್ರಿ 12:40 ರ ಸಮಯ ಖಾಸಗಿ ಕಂಪನಿಯ ಇಂಜಿನಿಯರ್ ಯಶಸ್ ನಾಗರಬಾವಿ ಕಡೆಯಿಂದ ಕೆಂಗೇರಿಕಡೆಗೆ ಹೋಗ್ತಾ ಇದ್ದ. ಕಾರು ಗುದ್ದಿದ ರಭಸದ ಶಬ್ಧಕ್ಕೆ ಅಕ್ಕಪಕ್ಕದವರೆಲ್ಲ ಓಡಿ ಬಂದಿದ್ರೂ. ತಕ್ಷಣ ಕಾರಲ್ಲಿದ್ದ ಯಶಸ್ಸ್ ನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ.
ಕಾರಿನಲ್ಲಿ 24 ವರ್ಷದ ಯಶಸ್ ಮಾತ್ರ ಪ್ರಯಾಣಿಸ್ತಿದ್ದ.ಕಾರಿನಲ್ಲಿ ಬೇರೆಯಾರು ಇರಲಿಲ್ಲ.ಅಪಘಾತದ ಬಳಿಕ ಕಾರಿನ ಪರಿಸ್ಥಿತಿ ನೋಡಿದವರೇ ಶಾಕ್ ಅಗಿದ್ರೂ. ಗುದ್ದಿದ ರಭಸಕ್ಕೆ ಕಾರು ಎರಡು ಭಾಗವಾಗಿ ಬಿದ್ದಿತ್ತು. ಕಾರಿನ ಇಂಜಿನ್ ಭಾಗ ಬೇರೆ ಕಡೆ ಬಿದ್ದಿದ್ರೆ ಹಿಂಭಾಗ ಇನ್ನೊಂದು ಕಡೆ ಬಿದ್ದಿತ್ತು..ಕಾರನ್ನ ನೋಡಿದವರು ಇದರಲ್ಲಿದ್ದವರು ಯಾರು ಕೂಡ ಉಳಿದಿಲ್ಲ ಅಂತ ಮಾತಾಡ್ತಿದ್ರೂ. ಯಶಸ್ಸನ್ನ ಆಸ್ಪತ್ರೆಗೆ ದಾಖಲಿಸುವಾಗ ಅತ ನಶೆಯಲ್ಲಿದ್ದ ಅಂತಾ ಹೇಳಲಾಗ್ತಿದೆ. ಸ್ಥಳಕ್ಕೆ ಬಂದ ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸರು ಕಾರನ್ನ ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ರೂ.
ಅದೃಷ್ಟಕ್ಕೆ ಅಸಮಯದಲ್ಲಿ ವಾಹನ ಸಂಚಾರ ಕೂಡ ಕಡಿಮೆಯಿತ್ತು.ಒಂದೊಮ್ಮೆ ಬೇರೆ ಯಾವುದಾದ್ರೂ ವಾಹನ ಅಸಮಯದಲ್ಲಿ ಬಂದಿದ್ರೆ ದೊಡ್ಡ ದುರಂತವೊಂದು ಸಂಭವಿಸುತಿತ್ತು. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಶಸ್ ನ ರಕ್ತದ ಮಾದರಿಯನ್ನ ಪಡೆದಿರುವ ಪೊಲೀಸರು ಪರೀಕ್ಷೆಗೆ ಕಳಿಸಿದ್ದಾರೆ.ಪರೀಕ್ಷ ವರದಿ ಬಂದ ನಂತರ ಮದ್ಯಪಾನ ಅಥಾವ ಡ್ರಗ್ಸ್ ಸೇವಿಸಿದ್ನಾ ಎನ್ನುವುದು ನಂತರದಲ್ಲಿ ತಿಳಿದು ಬರಲಿದೆ.ಸದ್ಯ ರಶಸ್ ಪ್ರಜ್ಙಾಹೀನ ಸ್ಥಿತಿಯಲ್ಲಿದ್ದು ಅತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇಷ್ಟುದೊಡ್ಡ ಪ್ರಮಾಣದ ಅಪಘಾತವಾಗಿದ್ರೂ ಅದೂಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ ಅನ್ನೋದೇ ದೊಡ್ಡ ಸಮಾಧಾನ.ಅದ್ರೂ ಕಾರನ್ನ ಚಲಾಯಿಸುವಾಗ ಅದಷ್ಟು ಎಚ್ಚರಿಕೆಯಿರಲಿ. ನಿಮ್ಮ ಕುಟುಂಬವಿದೆ ಅನ್ನೋ ಕಾಳಜಿಯೂ ಇದ್ರೆ ಸಾಕು…