ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸೋಕೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆದಿವೆ.ಕಾಂಗ್ರೆಸ್ ನೇತೃತ್ವದ ಸಮಾನಮನಸ್ಕ ಪಕ್ಷಗಳು ಒಕ್ಕೂಟ ರಚನೆಗೆ ಮುಂದಾಗಿವೆ.. ಜುಲೈ ೧೮ ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ..ಇದು ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ..ಕರ್ನಾಟಕ ಸೋಲು ಹಾಗೂ ಗ್ಯಾರೆಂಟಿಗಳು ಬಿಜೆಪಿ ವರಿಷ್ಠರಿಗೆ ಭಯ ತಂದಿಟ್ಟಿವೆ..ಇದ್ರಿಂದ ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಮುಂದಾಗಿದೆ..ಜುಲೈ ೧೮ ರಂದು ದೆಹಲಿಯಲ್ಲಿ ಮೈತ್ರಿಕೂಟದ ಸಭೆ ಕರೆಯಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಎಫೆಕ್ಟ್ ರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿದೆ..ಕಾಂಗ್ರೆಸ್ ಗ್ಯಾರೆಂಟಿಗಳು ಪಂಚ ರಾಜ್ಯಗಳ ಚುನಾವಣೆ ಮೇಲೂ ಎಫೆಕ್ಟ್ ಆಗುವ ಚರ್ಚೆಗಳು ನಡೆದಿವೆ..ಇದು ಬಿಜೆಪಿ ವರಿಷ್ಠರ ಆತಂಕಕ್ಕೆ ಕಾರಣವಾಗಿದೆ..ಇದ್ರ ಜೊತೆಗೆ ಕಾಂಗ್ರೆಸ್,ಎಎಪಿ,ಟಿಎಂಸಿ,ಜೆಡಿಯು ಸೇರಿ ಅನೇಕ ಪಕ್ಷಗಳು ಘಟಬಂದನ ರಚನೆಗೆ ಹೊರಟಿವೆ..ಜೂನ್ ೨೩ ರಂದು ಪಾಟ್ನಾದಲ್ಲಿ ಸಭೆ ನಡೆಸಿದ್ದು ಪ್ರತಿಪಕ್ಷಗಳು ಇದೀಗ ಜುಲೈ ೧೮ ರಂದು ಬೆಂಗಳೂರಿನಲ್ಲಿ ಸಭೆ ಕರೆದಿವೆ.. ಇದೆಲ್ಲವೂ ಬಿಜೆಪಿ ನಾಯಕರಿಗೆ ಆತಂಕ ಶುರುವಾಗಿದೆ.. ಹಾಗಾಗಿಯೇ ಎನ್ ಡಿಎ ಮೈತ್ರಿ ಕೂಡ ಬಲವರ್ಧನೆಗೆ ಕೈಹಾಕಿದ್ದಾರೆ.. ಜುಲೈ ೧೮ ರಂದೇ ದೆಹಲಿಯಲ್ಲಿ ಸಭೆ ಕರೆದಿದ್ದಾರೆ..ಈ ಭಾರಿ ಮೈತ್ರಿಕೂಟದ ಹೊರಗಿದ್ದ ಜೆಡಿಎಸ್,ಬಿಆರ್ ಎಸ್ ಪಾರ್ಟಿಗಳಿಗೂ ಆಹ್ವಾನ ಕೊಟ್ಟಿದ್ದಾರೆ..ಈ ಮೂಲಕ ಪ್ರತಿಪಕ್ಷಗಳ ಮೀಟಿಂಗ್ ಗೆ ಕೌಂಟರ್ ಕೊಡುವ ಪ್ರಯತ್ನ ನಡೆಸಿದ್ದಾರೆ.. ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ವಿಶ್ವಾಸ ಪಡೆದೇ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಲೆಕ್ಕಾಚಾರಕ್ಕೆ ಬಿಜೆಪಿ ಕೈಹಾಕಿದೆ..
ಮತ್ತೊಮ್ಮೆ ಅಧಿಕಾರ ಹಿಡಿಯುವ ದೃಷ್ಟಿಯಿಂದಲೇ ಬಿಜೆಪಿ ಪ್ರಾದೇಶಿಕ ಪಕ್ಷಗಳ ಜೊತೆ ಸಭೆಯನ್ನ ಆಯೋಜಿಸಿದೆ.. ರಾಜ್ಯದ ಜೆಡಿಎಸ್ ಗೂ ಆಹ್ವಾನ ನೀಡಿದೆ.. ಕರ್ನಾಕದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಗಳಿಸುವ ಲೆಕ್ಕಾಚಾರ ಹಾಕಿದೆ.. ಕುಮಾರಸ್ವಾಮಿಯವರನ್ನ ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ ಎಂಬ ಮಾತಿದೆ.. ಆದ್ರೆ ಜೆಡಿಎಸ್ ಹೊಂದಾಣಿಕೆಗೆ ಒಪ್ಪುತ್ತಾ.. ಇಲ್ಲಾ ಹಿಂದೆ ಸರಿಯುತ್ತಾ ಅನ್ನೋದು ಕುಮಾರಸ್ವಾಮಿಯವರ ನಿರ್ಧಾರದ ಮೇಲೆ ನಿಂತಿದೆ..
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗ್ತಿದೆ.. ಮೈತ್ರಿಯಾಗಿದ್ದೇ ಆದ್ರೆ ಇಲ್ಲಿ ಹಲವರಿಗೆ ಅದರ ಎಫೆಕ್ಟ್ ಆಗಲಿದೆ..ಮೈತ್ರಿಯಿಂದ ಜೆಡಿಎಸ್ ಮಂಡ್ಯದಲ್ಲಿ ಟಿಕೆಟ್ ಕೇಳಲಿದೆ.. ಕುಮಾರಸ್ವಾಮಿ ಇಲ್ಲವೇ ನಿಖಿಲ್ ಅಲ್ಲಿಂದ ಸ್ಪರ್ಧಿಸಲಿದ್ದಾರೆ.. ಹೀಗಾದ್ರೆ ಹಾಲಿ ಸಂಸದೆ ಸುಮಲತಾಗೆ ಹೊಡೆತ ಬೀಳಲಿದೆ.. ಆ ಕಾರಣಕ್ಕೆ ಸುಮಲತಾ ಬೆಂಗಳೂರು ಕಡೆ ಮುಖಮಾಡೋಕೆ ನೋಡ್ತಿದ್ದಾರೆ.. ಒಕ್ಕಲಿಗರೇ ಹೆಚ್ಚಿರುವ ಬೆಂಗಳೂರು ಉತ್ತರದ ಮೇಲೆ ಕಣ್ಣಿಟ್ಟಿದ್ದಾರೆ.. ಇನ್ನು ತೀರ್ವ ಸೋಲಿನಿಂದ ಹತಾಶರಾಗಿರುವ ಡಾ.ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ನಿಲ್ಲೋಕೆ ಹಿಂದೇಟಾಕ್ತಿದ್ದಾರೆ.. ಅವ್ರೂ ಬೆಂಗಳೂರು ಉತ್ತರದ ಕಡೆ ದೃಷ್ಟಿ ನೆಟ್ಟಿದ್ದಾರೆ.. ಇದ್ರ ನಡುವೆ ಸಂಘ ಪರಿವಾರದಲ್ಲಿ ಗುರ್ತಿಸಿಕೊಂಡಿರುವ ನಿರಂತರ್ ಗಣೇಶ್ ಹೆಸರು ಮುಂಚೂಣಿಯಲ್ಲಿದೆ.. ಹೀಗಾಗಿಯೇ ಹಾಲಿ ಸಂಸದ ಡಿವಿಎಸ್ ಪಕ್ಷದ ನಾಯಕರ ಬಗ್ಗೆ ಪರೋಕ್ಷವಾಗಿ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ.
ಒಟ್ನಲ್ಲಿ ಕಾಂಗ್ರೆಸ್ ಗ್ಯಾರೆಂಟಿಗಳುಹಾಗೂಕರ್ನಾಟಕದ ಸೋಲು ಬಿಜೆಪಿವರಿಷ್ಠರ ಆತಂಕಕ್ಕೆ ಕಾರಣವಾಗಿದೆ.. ಪಂಚರಾಜ್ಯಗಳ ಮೇಲೂ ಗ್ಯಾರೆಂಟಿಗಳಮೋಡಿ ಮಾಡುವ ಸಾಧ್ಯತೆಯಿದೆ..ಇದ್ರ ಎಫೆಕ್ಟ್ ಲೋಕಸಭಾ ಚುನಾವಣೆಯ ಮೇಲೂ ಬೀಳುವ ಸಾಧ್ಯತೆಯಿದೆ..ಆ ಕಾರಣಕ್ಕಾಗಿಯೇ ಪ್ರಾದೇಶಿಕ ಪಕ್ಷಗಳ ಜೊತೆ ಬಿಜೆಪಿ ಹೊಂದಾಣಿಕೆಗೆ ಮುಂದಾಗಿದೆ..ಇದೇ ಜುಲೈ 18 ರಂದು ಅಂಗ ಪಕ್ಷಗಳು ಹಾಗೂ ಹೊರಗುಳಿದಿರುವ ಪಕ್ಷಗಳ ನಾಯಕರ ಸಭೆ ಕರೆದಿದೆ..ಅಲ್ಲಿ ಎಲ್ಲರನ್ನ ಒಗ್ಗೂಡಿಸಿಕೊಂಡುಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸಿದೆ..ಇದುಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ..