ದೇವದುರ್ಗ : ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ದೇವದುರ್ಗ ಪಟ್ಟಣದ ಪುರಸಭೆ ಕಚೇರಿ ಹತ್ತಿರವಿರುವ ಫಾರೂಕ್ ಟೀ ಶಾಪ್ನಲ್ಲಿ ಖುದ್ದಾಗಿ ಚಹಾ ತಯಾರಿಸುವ ಮೂಲಕ ಗಮನ ಸೆಳೆದು ಟೀ ಮಾಡುವ ಮೂಲಕ ತಮ್ಮ ಚುನಾವಣಾ ಪ್ರಚಾರ ನಡೆಸಿದರು.
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ. ಇಂದು ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿ ಪ್ರಚಾರಕ್ಕೆ ತೆರಳುವಾಗ ಜಿ ಕರಿಯಮ್ಮ ಅವರ ಅಭಿಮಾನಿ ಫಾರೂಕ್ ಟೀ ಕುಡಿಯಲು ಆಹ್ವಾನಿಸಿದರು. ಅಭಿಮಾನಿಗಳ ಆಹ್ವಾನದ ಮೇರೆಗೆ ಟೀ ಅಂಗಡಿ ಹೋದ ಕರೆಮ್ಮ, ಅಲ್ಲಿನ ಕೆಲಸಗಾರರು ಚಹಾ ಮಾಡುತ್ತಿದ್ದದ್ದನ್ನು ನೋಡಿ, ನಾನೇ ನಿಮಗೆ ಟೀ ಮಾಡಿ ಕೊಡುವುದಾಗಿ ಹೇಳಿ, ಟೀ ತಯಾರಿಸಿ ಅಲ್ಲಿ ಇದ್ದವರಿಗೆ ನೀಡುವ ಮೂಲಕ ನಿಮ್ಮ ಸೇವಕಿಯಾಗಿ ಕೆಲಸ ಮಾಡುವುದಕ್ಕೆ ಅವಕಾಶ ನೀಡುವಂತೆ ಹೇಳಿ ಮತಯಾಚನೆ ಮಾಡಿದರು.
ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ಹಾಗೂ ಬಿಜೆಪಿ ಅಭ್ಯರ್ಥಿ ಕೆ. ಶಿವನಗೌಡ ನಾಯಕ ನಡುವೆ ನೇರ ಹಣಾಹಣಿ ಇದ್ದು. ಇಬ್ಬರು ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.