ಪ್ರಸ್ತುತ ದುಬೈನಲ್ಲಿರುವ ವಿಮಾನ ನಿಲ್ದಾಣಕ್ಕಿಂತ 5 ಪಟ್ಟು ದೊಡ್ಡದಾದ ಬೃಹತ್ ವಿಮಾನ ನಿಲ್ದಾಣ ಮಾಡಲು ಯೋಜಿಸಲಾಗಿದೆ. ಈ ಬಗ್ಗೆ ದುಬೈ ಆಡಳಿತಗಾರ ಶೇಖ್ ಮೊಹ ಮ್ಮದ್ ಬಿನ್ ರಶೀದ್ ಅಲ್ ಮಕೊಮ್ ಘೋಷಿಸಿದ್ದಾರೆ.
ಸುಮಾರು 2.9 ಲಕ್ಷ ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಿದ್ದು, ಮುಂದಿನ 10 ವರ್ಷದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಹೇಳಿದ್ದಾರೆ.
ಹೊಸ ನಿಲ್ದಾಣಕ್ಕೆ ಅಲ್ ಮಕೊಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಡಲಾಗುವುದು. ಪ್ರಸ್ತುತ ದುಬೈಯಲ್ಲಿರುವ ವಿಮಾನ ನಿಲ್ದಾಣ ವಿಶ್ವದ ಅತೀ ದೊಡ್ಡ ನಿಲ್ದಾಣ ವಾಗಿದೆ. ದುಬೈ ನಗರವನ್ನು ವಿಮಾನ ಮತ್ತು ಹಡಗು ಹಬ್ ಮಾಡಬೇಕು ಎಂಬ ಹಂಬಲದಂತೆ ಅದನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.