ನಿರಂತರ ಮಳೆ ಬೃಹತ್ ಗಾತ್ರದ ಬಂಡೆಗಲ್ಲು ರಸ್ತೆಗೆ ಉರುಳಿ ಬಿದ್ದಿದೆ. ಬೆಳಗಾವಿ ಅಂಬೋಲಿ ಮಾರ್ಗ ಮಧ್ಯೆ ಹೆದ್ದಾರಿಗೆ ಬಂಡೆಗಲ್ಲು ಉರುಳಿದೆ. ಗೋವಾ, ಕರ್ನಾಟಕ, ಮಹಾರಾಷ್ಟ್ರ ಬೆಸೆಯುವ ಅಂಬೋಲಿ ಸಾವಂತವಾಡಿ ಹೆದ್ದಾರಿ ಇದಾಗಿದ್ದು,
ಅದೃಷ್ಟವಷಾತ್ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಬೆಳಗ್ಗಿನಿಂದಲೇ ಬಂಡೆಗಲ್ಲು ತೆರವುಗೊಳಿಸುವ ಕೆಲಸದಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಮಹಾರಾಷ್ಟ್ರ ಲೋಕೋಪಯೋಗಿ ಹಾಗೂ ಪೊಲೀಸರ ನೇತೃತ್ವದಲ್ಲಿ ಬಂಡೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.