ಕೊಡಗು:- ಭಾರೀ ಮಳೆಯಿಂದ ಕೊಡಗು ಜಿಲ್ಲಾಡಳಿತ ಮುಂದಿನ ಎರಡು ದಿನಗಳ ಕಾಲ ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಅಲ್ಲದೇ ಗುಡ್ಡ, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ.
ಇದರಿಂದ ಸಧ್ಯ ಕೊಡಗು ಜಿಲ್ಲೆಯ ಜನ ಆತಂಕದಲ್ಲಿದ್ದಾರೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದಲ್ಲಿ ಭಾರೀ ಮಳೆಗೆ ಕಾವೇರಿ ಹಿನ್ನೀರಿನಲ್ಲಿ ಸಿಲುಕಿದ್ದ 6 ಜನರು ಸೇರಿದಂತೆ ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಹೌದು, ಮನೆಯಲ್ಲಿದ್ದ 6 ಜನರು, 2 ಜಾನುವಾರು ಮತ್ತು 2 ನಾಯಿಗಳನ್ನು ಮಡಿಕೇರಿ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.