ಬಾಗಲಕೋಟೆ:- ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದ್ದು, ಬೆಳಗಾವಿ, ಬಾಗಲಕೋಟೆಯಲ್ಲಿ ನೂರಾರು ಮನೆಗಳು ಜಲಾವೃತವಾಗಿದೆ. ಹೀಗಾಗಿ ಜನರು ಬೀದಿಗೆ ಬಿದ್ದಿದ್ದಾರೆ.
ಬೆಳಗಾವಿಯಲ್ಲಿ ಮೂರು ನದಿಗಳ ಆರ್ಭಟಕ್ಕೆ ಅಡಿಬಟ್ಟಿ ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿದೆ. ನೆಮ್ಮದಿಯಾಗಿ ಬದುಕ್ತಿದ್ದ ಜನರ ಬದುಕು ಬೀದಿದೆ ಬಂದಿದೆ. ನಿನ್ನೆಯಷ್ಟೇ ಮನೆಯಲ್ಲಿದ್ದವರು ಇದೀಗ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯೋ ಸ್ಥಿತಿ ತಂದಿಟ್ಟಿದ್ದಾನೆ ವರುಣರಾಯ, ಮೂರು ನದಿಗಳ ನೀರು ನೂರಾರು ಜನರ ಬದುಕನ್ನೇ ಬೀದಿಗೆ ತಂದಿಟ್ಟಿದೆ.
ಮಾರ್ಕಂಡೇಯ, ಹಿರಣ್ಯಕೇಶಿ, ಕೃಷ್ಣಾ ನದಿಯ ಅಬ್ಬರಕ್ಕೆ ನದಿಪಾತ್ರದಲ್ಲಿನ ಜನರು ಕಣ್ಣೀರು ಹಾಕುವಂತಾಗಿದೆ. ಇನ್ನು ನೂರಾರು ಎಕರೆ ಪ್ರದೇಶದಲ್ಲಿನ ಬೆಳೆದಿದ್ದ ಕಬ್ಬು, ಇತರೆ ಬೆಳೆಗಳು ಸಂಪೂರ್ಣ ನಾಶವಾಗಿದೆ. ಭೀಕರ ಪ್ರವಾಹದಿಂದ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ 20 ಕುಟುಂಬಗಳು ಬೀದಿಗೆ ಬಂದಿವೆ. ಮಳೆಗಾಳಿಯಲ್ಲೇ ಟಾರ್ಪಲ್ ಕಟ್ಟಿಕೊಂಡು ರಸ್ತೆಬದಿ ಸಂತ್ರಸ್ತರು ಜೀವನ ಮಾಡ್ತಿದ್ದಾರೆ
ಬೆಳಗಾವಿ ಮಾತ್ರವಲ್ಲ, ಬಾಗಲಕೋಟೆಯಲ್ಲೂ ನಾನಾ ಅವಾಂತರಗಳಾಗಿವೆ. ಘಟಪ್ರಭಾ ನದಿಯ ಅಬ್ಬರದಿಂದ ಮಿರ್ಜಿ ಗ್ರಾಮದಲ್ಲಿನ 70 ಮನೆಗಳು ಸಂಪೂರ್ಣ ಮುಳುಗಡೆಯಾಗಿದೆ. ಇಡೀ ಗ್ರಾಮಸ್ಥರು ಊರನ್ನೇ ತೊರೆದಿದ್ದಾರೆ